ಈ ಗಡ್ಡೆಗಳಿಗೆ ದೊಡ್ಡ ಆಪರೇಶನ್ ಅಗತ್ಯವಿಲ್ಲ.. ಆದರೆ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯಿರಿ..

Health tips: ದೇಹದಲ್ಲಿ ಗಂಟಾದಾಗ, ಅದಕ್ಕೆ ಹಲವಾರು ಕಾರಣಗಳಿರುತ್ತದೆ. ಕೆಲವರಿಗೆ ಸಾಮಾನ್ಯವಾಗಿ ದೇಹದಲ್ಲಿರುವ ಕೊಬ್ಬಿನ ಅಂಶ ಒಂದೆಡೆ ಸೇರಿ, ಗಡ್ಡೆಯಾಗುತ್ತದೆ. ಆದರೆ ಮನುಷ್ಯನ ದೇಹದಲ್ಲಿ ಯಾವುದೇ ಸಮ್ಣ ಗಡ್ಡೆಯಾದರೂ, ಆ ಬಗ್ಗೆ ಒಮ್ಮೆ ವೈದ್ಯರ ಬಳಿ ವಿಚಾರಿಸುವುದು ತುಂಬಾ ಮುಖ್ಯ. ಏಕೆಂದರೆ, ಕ್ಯಾನ್ಸರ್ ಬಂದಾಗಲೂ, ಈ ರೀತಿಯ ಗಂಟುಗಳಾಗುತ್ತದೆ. ಹಾಗಾಗಿ ದೇಹದಲ್ಲಿ ಗಂಟಾದಾಗ, ಆ ಬಗ್ಗೆ ಖಂಡಿತವಾಗಿ, ವೈದ್ಯರಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ.

ದೇಹದಲ್ಲಿ ಆಗುವ ಗಂಟುಗಳನ್ನು ಸರ್ಫೆಸ್ವೆಲ್ಲಿಂಗ್ ಎಂದು ಕರೆಯುತ್ತಾರೆ. ಅಂದ್ರೆ ಚರ್ಮದ ಮೇಲಾಗುವ ಗಂಟುಗಳು. ಇದಕ್ಕೆಲ್ಲ ದೊಡ್ಡ ಆಪರೇಶನ್ ಮಾಡುವ ಅಗತ್ಯವಿಲ್ಲ. ಆದರೆ ಈ ರೀತ ಗಂಟಾದಾಗ ವೈದ್ಯರ ಬಳಿ ಹೋದರೆ, ಅವರು ಚಿಕ್ಕ ಚಿಕಿತ್ಸೆ ನೀಡಿ, ಆ ಗಂಟನ್ನು ಆಪರೇಶನ್ ಮಾಡಿ ತೆಗೆಯುತ್ತಾರೆ. ಒಂದೇ ದಿನದಲ್ಲಿ ಆಪರೇಶನ್ ಮುಗಿಸಿ, ನೀವು ಮನೆಗೆ ಬರಬಹುದು.

ಆದರೆ ಇದನ್ನು ನೀವು ನಿರ್ಲಕ್ಷ್ಯ ಮಾಡಿ ಹಾಗೇ ಬಿಟ್ಟರೆ, ಅಲ್ಲಿ ಇನ್‌ಫೆಕ್ಷನ್ ಆಗುವ ಸಾಧ್ಯತೆಗಳಿರುತ್ತದೆ. ಆಗ ಆಪರೇಶನ್ ಮಾಡಲು ಕಷ್ಟವಾಗುತ್ತದೆ. ಏಕೆಂದರೆ, ಆ ಗಂಟನ್ನು ಬೇರು ಸಮೇತ ಕಿತ್ತು ಹಾಕಲು ಸಾಧ್ಯವಿಲ್ಲ. ಹಾಗಾಗಿ ಗಂಟು ಹುಟ್ಟಿಕೊಂಡಾಗಲೇ, ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

https://karnatakatv.net/wp-admin/post-new.php

About The Author