ಈಗಿನ ಕಾಲದವರಿಗೆ ಪಿಜ್ಜಾ ಅಂದ್ರೆ ಹೆವಿ ಕ್ರೇಜ್. ಆದ್ರೆ ಕೆಲವರು ಪಿಜ್ಜಾ ಕಾಸ್ಟ್ಲಿ ತಿಂಡಿಯಾದ ಕಾರಣ, ತಿಂಗಳಿಗೊಮ್ಮೆಯೋ, 2 ತಿಂಗಳಿಗೊಮ್ಮೆಯೋ ತಿಂತಾರೆ. ಆದ್ರೆ ಇಲ್ಲೊಂದು ದಂಪತಿಗೆ ಪ್ರತೀ ತಿಂಗಳು ಫ್ರಿಯಾಗಿ ಪಿಜ್ಜಾ ಸಿಗ್ತಾ ಇದೆ. ಹಾಗಾದ್ರೆ ಫ್ರೀ ಪಿಜ್ಜಾ ಸಿಗೋಕ್ಕೆ ದಂಪತಿ ಅಂಥಾದ್ದೇನು ಮಾಡಿದ್ರು ಅಂತಾ ನೋಡೋಣಾ ಬನ್ನಿ..
ಸಿಎಂಗಾಗಿ ದೇವಸ್ಥಾನ ನಿರ್ಮಿಸಿದ ಅಭಿಮಾನಿ.. ಪ್ರತಿದಿನ ಇಲ್ಲಿ ನಡೆಯುತ್ತೆ ವಿಶೇಷ ಪೂಜೆ..
ಅಸ್ಸಾಂನ ಗುವಾಹಟಿಯಲ್ಲಿ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ಎಂಬ ದಂಪತಿ ಮದುವೆ ಸಂದರ್ಭದಲ್ಲಿ ವಿಶೇಷವಾದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಒಪ್ಪಂದದಲ್ಲಿ ಪ್ರತಿ ದಿನ ಜಿಮ್ಮ್ಗೆ ಹೋಗಬೇಕು, 15 ದಿನಕ್ಕೊಮ್ಮೆ ಶಾಪಿಂಗ್‌ಗೆ ಹೋಗಬೇಕು. ತಿಂಗಳಿಗೊಮ್ಮೆ ಪಿಜ್ಜಾ ತಿನ್ನಬೇಕು ಅಂತಾ ಬರೆದಿತ್ತು. ಕೆಲ ತಿಂಗಳ ಹಿಂದೆ ಈ ಸುದ್ದಿಯೂ ವೈರಲ್ ಆಗಿತ್ತು. ಇದರಂತೆ ದಂಪತಿ ಪ್ರತೀ ತಿಂಗಳು ಪಿಜ್ಜಾ ಹಟ್‌ಗೆ ಬಂತು, ಪಿಜ್ಜಾ ತಿನ್ನುತ್ತಿದ್ದರು.
ಹೀಗಾಗಿ ಪಿಜ್ಜಾ ಹಟ್ ಕಂಪನಿ, ಕರವಾ ಚೌತ್ ಸಲುವಾಗಿ, ಈ ದಂಪತಿಗೆ ವಿಶೇಷ ಆಫರ್ ನೀಡಿದ್ದು, ಪ್ರತೀ ತಿಂಗಳು ಫ್ರೀಯಾಗಿ ಒಂದು ವರ್ಷದ ತನಕ ಪಿಜ್ಜಾ ಕೊಡಲು ನಿರ್ಧರಿಸಿದೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಘೋಷಣೆ ಮಾಡಿದೆ.