Friday, October 18, 2024

Latest Posts

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

- Advertisement -

Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಅದು ಕಡಿಮೆಯೇ. ಅದರಲ್ಲೂ ಮಗು ಹಾಲು ಕುಡಿಯುವ ಲೋಟ, ಬಾಟಲಿ, ಊಟ ಮಾಡುವ ತಟ್ಟೆಯನ್ನ ಕ್ಲೀನ್ ಆಗಿ ತೊಳೆಯಲೇಬೇಕು. ಕೆಲವರು ಹಾಲು ಕುಡಿಯುವ ಬಾಟಲಿಯನ್ನ ಸುಮ್ಮನೆ ತೊಳೆದಿಡುತ್ತಾರೆ. ಆದರೆ ಅದನ್ನ ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡಿದಾಗ ಮಾತ್ರ, ಅದರಲ್ಲಿರುವ ಕೀಟಾಣು ನಾಶವಾಗುತ್ತದೆ.

ಎಲ್ಲಕ್ಕಿಂತ ಮೊದಲು, ನಿಮ್ಮ ಕೈ, ಬಳಸುವ ವಸ್ತುಗಳು ಕ್ಲೀನ್ ಆಗಿರಬೇಕು. ಹಾಲಿನ ಬಾಟಲಿಯ ಪಾರ್ಟ್ಸ್ ಬೇರೆ ಬೇರೆ ಮಾಡಿ. ಆಗ ಬಾಟಲಿ ತೊಳೆಯಲು ಸುಲಭವಾಗುತ್ತದೆ. ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಗ್ಯಾಸ್ ಆಫ್ ಮಾಡಿ. ಬಾಟಲಿ ಪಾರ್ಟ್ಸ್ ಆ ನೀರಿಗೆ ಹಾಕಿಡಿ. ಬಳಿಕ ಡಿಟರ್ಜೆಂಟ್ ಪೌಡರ್ ಬಳಸಿ, ಹಾಲಿನ ಬಾಟಲಿ ಸ್ವಚ್ಛಗೊಳಿಸಿ. ಈ ವೇಳೆ ನೀವು ಬ್ರಷ್ ಬಳಸುವುದು ಮುಖ್ಯವಾಗಿದೆ.

ಇದಾದ ಬಳಿಕ ಶುದ್ಧವಾದ ಬಿಸಿ ನೀರಿನಲ್ಲಿ ಬಾಟಲಿಯನ್ನು ತೊಳೆಯಿರಿ. ಜೊತೆಗೆ ಮತ್ತೆ ಅರ್ಧ ಗಂಟೆ ಹಾಲಿನ ಬಾಟಲಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಮುಖ್ಯವಾದ ವಿಷಯ ಅಂದ್ರೆ, ಹಾಲನ್ನು ಹೆಚ್ಚು ಹೊತ್ತು ಬಾಟಲಿಯಲ್ಲಿ ಇರಿಸಬೇಡಿ. ಇದರಿಂದ ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಮಗು ಹಾಲು ಕುಡಿಯುವ ಹೊತ್ತಿಗೆ ಹಾಲನ್ನ ಹಾಕಿ ಕೊಡಿ. ಅರ್ಧಬರ್ಧ ಹಾಲು ಕುಡಿದಿದ್ದಲ್ಲಿ, ಆ ಹಾಲನ್ನ ಇನ್ನೊಂದು ಲೋಟಕ್ಕೆ ಹಾಕಿ, ತಕ್ಷಣ ಹಾಲಿನ ಬಾಟಲಿಯನ್ನು ಸ್ವಚ್ಛಗೊಳಿಸಿ.

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss