Recipe: ಟೊಮೆಟೋ ಸಾಸ್, ಸೂಪ್, ಸಾರು, ಪಲ್ಯ, ಚಟ್ನಿ ಎಲ್ಲವನ್ನೂ ಮಾಡ್ತೀವಿ. ಆದರೆ ಟೊಮೆಟೋ ಬಳಸಿ ಎಂದಾದರೂ ಚಾಟ್ ತಯಾರಿಸಿದ್ದೀರಾ..? ಇಲ್ಲಾ ಅಂದ್ರೆ ಇಂದು ನಾವು ಟೊಮೆಟೋ ಚಾಟ್ ರೆಸಿಪಿ ಹೇಳಲಿದ್ದೇವೆ.
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ 5 ಸ್ಪೂನ್ ಸಕ್ಕರೆ, 2 ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಧನಿಯಾ ಪುಡಿ, ಅರ್ಧ ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ನೀರು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣ ಕುದಿ ಬಂದು, ಸಕ್ಕರೆ ಪಾಕ ರೆಡಿಯಾದ ಮೇಲೆ, ಪ್ಯಾನ್ ಕೆಳಗಿಳಿಸಿ, ಇನ್ನೊಂದು ಪ್ಯಾನ್ ಬಿಸಿ ಮಾಡಿ.
ಇದಕ್ಕೆ ಎರಡು ಸ್ಪೂನ್ ಎಣ್ಣೆ, ಚಿಕ್ಕ ತುಂಡು ಸಣ್ಣದಾಗಿ ಕತ್ತರಿಸಿದ ಶುಂಠಿ, 2 ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಬಳಿಕ ಕೊಂಚ ಕೊಂಚ ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಅರಿಶಿನ, ಆಮ್ಚುರ್ ಪುಡಿ, ಸೈಂಧವ ಲವಣ ಸೇರಿಸಿ ಹುರಿಯಿರಿ. ಬಳಿಕ 2 ಸ್ಪೂನ್ ಗೋಡಂಬಿ ಪುಡಿ ಸೇರಿಸಿ ಹುರಿಯಿರಿ. ಈಗ ಸಣ್ಣಗೆ ಕತ್ತರಿಸಿದ 4 ಟೊಮೆಟೋ ಹಾಕಿ ಕೊಂಚ ಹುರಿದು, 5 ನಿಮಿಷ ಬೇಯಿಸಿ. ಬಳಿಕ ಎರಡು ಬೇಯಿಸಿದ ಆಲೂಗಡ್ಡೆ. ಎರಡು ಸ್ಪೂನ್ ಹುಣಸೆ ರಸ, ಉಪ್ಪು ಕಡಿಮೆ ಇದ್ದಲ್ಲಿ ಉಪ್ಪು ಸೇರಿಸಿ, 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿದರೆ, ಟೊಮೆಟೋ ಗ್ರೇವಿ ರೆಡಿ.
ಈಗ ಒಂದು ಚಿಕ್ಕ ಬೌಲ್‌ಗೆ ಈ ಗ್ರೇವಿ ಹಾಕಿ, ಇದರ ಮೇಲೆ ಆಗಲೇ ರೆಡಿ ಮಾಡಿಟ್ಟುಕೊಂಡ ಸಕ್ಕರೆ ಪಾಕ, ಕೊಂಚ ಸೇವ್ ಮತ್ತು ಪಾಪ್ಡಿ ಸೇರಿಸಿದ್ರೆ, ಟೊಮೆಟೋ ಚಾಟ್ ರೆಡಿ.