ಇದು ಪ್ರಭು ಶ್ರೀರಾಮನ ಜನ್ಮ ಕಥೆ

Spiritual News: ಶ್ರೀವಿಷ್ಣು ದಶಾವತಾರ ತೆಗೆದುಕೊಂಡಿದ್ದು, ಏಳನೇ ಅವತಾರವೇ ಶ್ರೀರಾಮನ ಅವತಾರ. ತ್ರೇತಾಯುಗದಲ್ಲಿ, ಮನುಷ್ಯ ರೂಪದಲ್ಲಿ ಬಂದ ವಿಷ್ಣು, ಶ್ರೀರಾಮನ ಅವತಾರವನ್ನು ತಾಳಿದ. ಈ ಹಿಂದೆ ಒಂದು ಕಥೆ ಇದೆ.

ರಾಜಾ ದಶರಥನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಅವನು ಋಷಿಮುನಿಗಳ ಸಲಹೆಯಂತೆ, ಪುತ್ರ ಕಾಮೇಷ್ಠಿ ಯಾಗವನ್ನು ಮಾಡಿದ. ಈ ಯಾಗದಲ್ಲಿ ಭಾಗವಹಿಸಲು, ಹಲವಾರು ಋಷಿಮುನಿಗಳು, ವೇದ ವಿದ್ಯಾ ಪಂಡಿತರಿಗೆಲ್ಲ ಆಮಂತ್ರಣ ನೀಡಿದ. ಕುಲಗುರು ವಸಿಷ್ಠರ ನೇತೃತ್ವದಲ್ಲಿ ಯಜ್ಞ ಸಂಪನ್ನವಾಯಿತು. ಈ ವೇಳೆ ವಸಿಷ್ಠರು ದಶರಥನಿಗೆ ಪಾಯಸವನ್ನು ನೀಡಿ, ಈ ಪಾಯಸವನ್ನು ನಿನ್ನ ಪತ್ನಿಯರಿಗೆ ನೀಡು. ಅವರು ಇದನ್ನು ಸೇವಿಸಿದರೆ, ಅವರಿಗೆ ಪುತ್ರ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.

ವಸಿಷ್ಠರ ಮಾತಿನಂತೆ ದಶರಥ, ತನ್ನ ಪತ್ನಿಯರಿಗೆ ಪಾಯಸ ನೀಡಿದ್ದು, ಕೆಲ ದಿನಗಳಲ್ಲಿ ಅವರೆಲ್ಲರೂ ಗರ್ಭ ಧರಿಸಿದರು. ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆ ಗಂಡು ಮಗುವಿಗೆ ಜನ್ಮ ನೀಡಿದಳು.  ಸುಮಿತ್ರಾ ಕೂಡ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಕೈಕೆ ಕೂಡ ಪುತ್ರನಿಗೆ ಜನ್ಮ ನೀಡಿದಳು. ಈ ರೀತಿ ದಶರಥನ ಮೂವರು ಪತ್ನಿಯರಿಗೆ ಪುತ್ರ ಪ್ರಾಪ್ತಿಯಾಯಿತು.

ದಶರಥನ ಮಕ್ಕಳ ನಾಮಕರಣವನ್ನು ವಸಿಷ್ಠ ಮುನಿಗಳೇ ನಡೆಸಿಕೊಟ್ಟರು. ಕೌಸಲ್ಯೆಯ ಮಗನಿಗೆ ಶ್ರೀರಮಚಂದ್ರನೆಂದು ಹೆಸರಿಟ್ಟರು. ಸುಮಿತ್ರೆಯ ಮಕ್ಕಳಿಗೆ ಲಕ್ಷ್ಮಣ, ಶತ್ರುಘ್ನನೆಂದು ನಾಮಕರಣ ಮಾಡಿದರು. ಕೈಕೆ ಮಗನಿಗೆ ಭರತನೆಂದು ಹೆಸರಿಡಲಾಯಿತು. ಇದೇ ಶ್ರೀರಾಮಚಂದ್ರ ಮುಂದೆ ಮರ್ಯಾದಾ ಪರುಷೋತ್ತಮನಾಗಿ ಬದುಕಿ, ತನ್ನ ಶಾಂತ ಸ್ವಭಾವ, ನಿಪುಣ ನೇತೃತ್ವ ಗುಣದ ಕಾರಣ, ಲೋಕಪ್ರಿಯನಾದ. ಇದು ಶ್ರೀರಾಮನ ಜನ್ಮ ಕಥೆಯಾಗಿತ್ತು.

ಈ ವಿಷಯಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ ಅಂತಾರೆ ಚಾಣಕ್ಯರು..

ದೇವರ ಪೂಜೆಗೆ ಚೆಂಡು ಹೂವು ಶ್ರೇಷ್ಠ ಅಂತಾ ಹೇಳುವುದೇಕೆ..?

ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..

About The Author