Wednesday, September 17, 2025

Latest Posts

ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…

- Advertisement -

Health Tips: ನಮ್ಮ ದೇಹದಲ್ಲಿ ಮುಖ್ಯವಾದ ಅಂಗ ಅಂದ್ರೆ ಕಣ್ಣು. ಒಮ್ಮೆ ಕಣ್ಣು ಮುಚ್ಚಿ, 5 ನಿಮಿಷ ಮನೆಗೆಲಸ ಮಾಡಲು ಪ್ರಯತ್ನಿಸಿ, ಕಕ್ಕಾಬಿಕ್ಕಿಯಾಗಿ ಹೋಗುತ್ತೀರಿ. ಹಾಗಾಗಿಯೇ ಕಣ್ಣಿನ ಆರೋಗ್ಯ ಅಷ್ಟು ಮುಖ್ಯ ಅಂತಾ ಹೇಳೋದು. ಹಾಗಾದ್ರೆ ನಮ್ಮ ಕಣ್ಣಿಗೆ ಯಾಕೆ ತೊಂದರೆಯಾಗುತ್ತದೆ..? ಕಣ್ಣಿನ ಆರೋಗ್ಯ ಯಾವ ಕಾರಣಕ್ಕೆ ಹಾಳಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರು ಹೇಳುವಂತೆ ನಮ್ಮ ದೇಹಕ್ಕೆ ಹೇಗೆ ವಿಶ್ರಾಂತಿಯ ಅಗತ್ಯವಿದೆಯೋ, ಅದೇ ರೀತಿ ನಮ್ಮ ಕಣ್ಣಿಗೂ ವಿಶ್ರಾಂತಿಯ ಅಗತ್ಯವಿದೆ. ಆದರೆ ಇಂದಿನ ಕಾಲದಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇರುವ ಕಾರಣ, ಅದನ್ನ ಸ್ವೈಪ್ ಮಾಡುತ್ತಾ, ಅದನ್ನ ನೋಡುತ್ತಲೇ ನಾವು ಕಾಲಹರಣ ಮಾಡುತ್ತೇವೆ. ಇನ್ನು ಕೆಲವರು ಆಪೀಸ್ ಕೆಲಸವೆಂದು ಲ್ಯಾಪ್‌ಟಾಪ್‌ ಬಳಕೆ ಮಾಡುತ್ತಾರೆ. ಮಲಗಲು ಇನ್ನು 1 ನಿಮಿಷ ಇದೆ ಅನ್ನುವವರೆಗೂ ಮೊಬೈಲ್ , ಟಿವಿ ನೋಡುತ್ತಲೇ ಇರುತ್ತಾರೆ. ಇದರಿಂದಲೇ ಕಣ್ಣಿನ ಆರೋಗ್ಯ ಹಾಳಾಗುತ್ತದೆ.

ಹೀಗೆ ಮಾಡಿದಾಗ, ನಮ್ಮ ಕಣ್ಣಿಗೆ ವಿಶ್ರಾಂತಿ ಅನ್ನೋದು ಸಿಗೋದೇ ಇಲ್ಲ. ಇದನ್ನು ಕೇಳಿದಾಗ, ನಿಮಗೆ ಇದು ನಾರ್ಮಲ್ ಎನ್ನಿಸಬಹುದು. ಆದರೆ ಇದರಿಂದಲೇ ನಮ್ಮ ದೃಷ್ಟಿ ಹಾಳಾಗುತ್ತದೆ. ಎಷ್ಟೋ ಜನರಿಗೆ ಕತ್ತಲಲ್ಲಿ ಮೊಬೈಲ್ ಬಳಕೆ ಮಾಡಿ ಮಾಡಿ, ದೃಷ್ಟಿಯೇ ಹೋಗಿದೆ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚಿನ ಮೊಬೈಲ್ ಬಳಕೆ, ಕತ್ತಲಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ಬಿಡಬೇಕು. ಕೆಲ ಸಮಯ, ಧ್ಯಾನ ಮಾಡುವ ಮೂಲಕವೋ, ಅಥವಾ ಯಾರೊಂದಿಗಾದರೂ ಹರಟೆ ಹೊಡೆಯುತ್ತಲೋ ಇದ್ದರೆ, ನಿಮ್ಮ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ. ಆ ಮೂಲಕವಾದ್ರೂ ಕಣ್ಣಿಗೆ ವಿಶ್ರಾಂತಿ ಕೊಡಬೇಕು.

ಕಣ್ಣಿನ ಆರೋಗ್ಯ ಸರಿಯಾಗಿರಲು ವೈದ್ಯರು ಇನ್ನು ಏನೇನು ಟಿಪ್ಸ್ ಹೇಳಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss