Sunday, July 6, 2025

Latest Posts

ದ್ರೌಪದಿ ವಸ್ತ್ರಾಪಹರಣವನ್ನು ಈ ಕೌರವನೊಬ್ಬನೇ ವಿರೋಧಿಸಿದ್ದ..

- Advertisement -

Spiritual: ಮಹಾಭಾರತ ನಡೆದಿದ್ದು ಯಾವ ಕಾರಣಕ್ಕೆ ಎಂದರೆ, ದ್ರೌಪದಿ ವಸ್ತ್ರಾಪಹರಣದ ಕಾರಣಕ್ಕೆ ಎಂದು ಎಲ್ಲರಿಗೂ ಗೊತ್ತು. ಹಾಗೆ ಮಾಡಿದ್ದು ಕೌರವರಾದ ದುಶ್ಶಾಸನ ಮತ್ತು ದುರ್ಯೋಧನ. ಆದರೆ ಅತ್ತಿಗೆಯಾದ ದ್ರೌಪದಿಯ ವಸ್ತ್ರಾಪಹರಣವನ್ನು ಒಬ್ಬನೇ ಒಬ್ಬ ಕೌರವ ವಿರೋಧಿಸಿದ್ದ. ಅವನು ಯಾರು.? ಯಾಕೆ ವಿರೋಧಿಸಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಕೌರವರು ಮೊದಲು ಉತ್ತಮ ಗುಣ ಉಳ್ಳವರಾಗಿದ್ದರು. ಹಾಗಾಗಿ ಅವರ ಹೆಸರು ಸುಯೋಧನ, ಸುಶಾಸನ ಎಂದಿತ್ತು. ಆದರೆ ಬರು ಬರುತ್ತ ಅವರ ದುರ್ಬುದ್ಧಿಯಿಂದ, ಅವರ ಹೆಸರು ದುಶ್ಶಾಸನ, ದುರ್ಯೋಧನನೆಂದು ಬದಲಾಯಿತು. ಆದರೆ 101 ಕೌರವ ಮಕ್ಕಳಲ್ಲಿ ದುರ್ಯೋಧನ, ದುಶ್ಶಾಸನನ ಬಳಿಕ ಹುಟ್ಟಿದ ಮೂರನೇ ಮಗನಾದ ವಿಕರ್ಣ ಮಾತ್ರ, ಎಂದಿಗೂ ಬದಲಾಗಲಿಲ್ಲ. ಅವನು ಕೊನೆಯವರೆಗೂ ಉತ್ತಮ ಗುಣದವನೇ ಆಗಿದ್ದ.

ಅವನೊಬ್ಬನೇ ದುಶ್ಶಾಸನ ಎಲ್ಲರ ಮುಂದೆ ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ, ದುರ್ಯೋಧನನ ವಿರುದ್ಧ ಮಾತನಾಡಿದ್ದ. ಮತ್ತು ಅತ್ತಗೆಯ ಪರ ನಿಂತಿದ್ದ. ಆಗ ಭೀಮನಿಗೆ ಅವನ ಬಗ್ಗೆ ಅಪಾರ ಗೌರವ ಬಂದಿತ್ತು. ಇಡೀ ಕುವಂಶವನ್ನೇ ನಾಶ ಮಾಡುತ್ತೇನೆ ಎಂದು ಭೀಮ ಪಣತೊಟ್ಟಿದ್ದ. ಆದರೆ ಕುರುಕ್ಷೇತ್ರ ಯುದ್ಧವಾಗುವಾಗ, ವಿಕರ್ಣ ತನ್ನ ಅಣ್ಣನ ಪರವಾಗಿ ಯುದ್ಧ ಮಾಡುತ್ತಿದ್ದ. ಈ ವೇಳೆ ಭೀಮ, ನಾನು ದ್ರೌಪದಿಗೆ ಆದ ಅವಮಾನಕ್ಕಾಗಿ ಇಡೀ ಕುರುವಂಶವನ್ನೇ ನಾಶ ಮಾಡುತ್ತೇನೆಂದು ಪಣ ತೊಟ್ಟಿದ್ದೆ. ಆದರೆ, ನಿನ್ನೊಂದಿಗೆ ನಾನು ಯುದ್ಧ ಮಾಡುವುದಿಲ್ಲ ಎನ್ನುತ್ತಾನೆ.

ಅದಕ್ಕೆ ವಿಕರ್ಣ, ಅಂದು ಅತ್ತಿಗೆಯ ಮಾನ ಉಳಿಸುವುದಕ್ಕೆ ನಾವು ದುರ್ಯೋಧನನ ವಿರುದ್ಧ ಮಾತನಾಡಿದ್ದೆ. ಆದರೆ ಈಗ ಅವನಿಗೆ ಕಷ್ಟ ಕಾಲ ಬಂದಿದೆ. ಹಾಗಾಗಿ ಸಹೋದರನಾಗಿ ನಾನು ಯುದ್ಧ ಮಾಡಿ, ಅವನ ಪರವಾಗಿ ನಿಲ್ಲಲಿದ್ದೇನೆ ಎನ್ನುತ್ತಾನೆ. ಈ ಮೂಲಕ ಪಾಂಡವರ ವಿರುದ್ಧ ವಿಕರ್ಣ ಯುದ್ಧ ಮಾಡುತ್ತಾನೆ.

ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..

ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..

- Advertisement -

Latest Posts

Don't Miss