Tuesday, October 22, 2024

Latest Posts

ಇವನ ಯವ್ವನದ ಗುಟ್ಟು ಕೇಳಿದ್ರೆ ನಿಮಗೆ ಅಸಹ್ಯ ಎನ್ನಿಸೋದು ಗ್ಯಾರಂಟಿ..

- Advertisement -

ನಾವು ಆರೋಗ್ಯದ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ. ಉತ್ತಮ ಆಹಾರ ತೆಗೆದುಕೊಳ್ಳುವುದು. 8 ಗಂಟೆಗಳ ಕಾಲ ನಿದ್ರೆ ಮಾಡುವುದು, ಹಣ್ಣು, ತರಕಾರಿ ತಿನ್ನುವುದು. ಹೀಗೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯದ ಕಾಳಜಿಯನ್ನ ಮಾಡುತ್ತೇವೆ. ಅಲ್ಲದೇ, ಫೇಸ್‌ಪ್ಯಾಕ್, ಫೇಸ್ ಮಾಸ್ಕ್ ಹಾಕುವ ಮೂಲಕ, ನಮ್ಮ ಸೌಂದರ್ಯದ ಕಾಳಜಿ ಕೂಡ ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ವಿಚಿತ್ರ ಆಸಾಮಿ, ತಾನು ಆರೋಗ್ಯವಾಗಿರಲು, ಚಂದವಾಗಿ ಕಾಣಲು ಮತ್ತು ಯವ್ವನದಿಂದ ಕೂಡಿರಲು, ತನ್ನ ಮೂತ್ರವನ್ನೇ ಕುಡಿಯುತ್ತಾನಂತೆ.

34 ವರ್ಷದ ಹ್ಯಾರಿ ಮಟಾಡಿನ್ ಎಂಬ ಯುವಕ ಹೀಗೆ ತನ್ನ ಮೂತ್ರವನ್ನು ತಾನು ಕುಡಿದು, ಯಂಗ್ ಆಗಿ ಕಾಣುತ್ತಿದ್ದೇನೆ ಎನ್ನುತ್ತಿದ್ದಾನೆ. ಈತನ ಪ್ರಕಾರ, ಇವನು ತನ್ನ ಮೂತ್ರವನ್ನೇ ಕುಡಿದಿದ್ದಕ್ಕೆ 10 ವರ್ಷ ಚಿಕ್ಕವನಾಗಿ ಕಾಣುತ್ತಿದ್ದಾನಂತೆ. 2016ರಿಂದ ಇವನು ಈ ಕೆಲಸ ಶುರು ಮಾಡಿದ್ದು, ಈ ಕೆಲಸಕ್ಕೆ ಸ್ವತಃ ಇವನ ಮನೆಯವರೇ ವಿರೋಧಿಸಿದ್ದಾರೆ.

ಇವನ ಅಕ್ಕ, ಇವನು ಮೂತ್ರ ಕುಡಿಯಲು ಶುರುಮಾಡಿದಾಗಿನಿಂದ ಇವನ ಬಳಿ ಮಾತನಾಡುವುದನ್ನೇ ಬಿಟ್ಟಿದ್ದಾಳಂತೆ. ಅಲ್ಲದೇ, ಇವನನ್ನು ನೋಡಿ ಇವನ ಕೆಲ ಗೆಳೆಯರು ಮೂತ್ರ ಕುಡಿಯುವುದನ್ನು ಶುರು ಮಾಡಿದ್ದಾರೆ. ಅವರು ಯಾವಾಗ ಸ್ವಮೂತ್ರವನ್ನು ಕುಡಿಯುವುದು ನಿಲ್ಲಿಸುತ್ತಾರೋ, ಅಂದು ನಾನು ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂಬ ವಿಚಿತ್ರ ಹೇಳಿಕೆ ಕೊಟ್ಟಿದ್ದಾನೆ.

ಇವನ ಈ ಅಸಹ್ಯದ ಶೋಕಿ ಎಲ್ಲಿಯವರೆಗೆ ಇದೆ ಎಂದರೆ, ಇವನ ಬಳಿ ತುಂಬಾ ಹಳೆಯ ಮೂತ್ರಗಳ ಸಂಗ್ರಹಗಳಿದೆ. ಅದನ್ನ ವಿವಿಧ ತರಹದ ಬಾಟಲಿಯಲ್ಲಿ ತುಂಬಿಸಿಟ್ಟಿದ್ದಾನೆ. ಇದನ್ನ ಮುಖಕ್ಕೆ ಕೂಡ ಸ್ಪ್ರೇ ಮಾಡುವ ಇವನು, ಇದರಿಂದ ನನ್ನ ತ್ವಚೆ ಕೂಡ ಮೃದುವಾಗಿದೆ ಎಂದು ಹೇಳಿದ್ದಾನೆ.

- Advertisement -

Latest Posts

Don't Miss