ಕೆಲವರು ತಮ್ಮ ತೂಕ ಕಡಿಮೆ ಮಾಡಲೇಬೇಕೆಂದು, ಹಲವು ರೀತಿಯ ವ್ಯಾಯಾಮ ಮಾಡುತ್ತಾರೆ. ಯೋಗ, ಜಿಮ್, ಜುಂಬಾ ಡಾನ್ಸ್, ಡಯಟ್ ಹೀಗೆ ಹಲವು ಸರ್ಕಸ್ ಮಾಡಿದರೂ, ಅವರ ತೂಕ ಹೆಚ್ಚುತ್ತಲೇ ಹೋಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ. ಹಾಗಾದ್ರೆ ತೂಕ ಹೆಚ್ಚೋಕ್ಕೆ ಮುಖ್ಯವಾದ ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಕೆಲವೊಮ್ಮೆ ನಿಂಬೆ ಶರಬತ್ ಕುಡಿಯುವಾಗ, ಅಥವಾ ಯಾವುದಾದರೂ ಜ್ಯೂಸ್ ಕುಡಿಯುವ ಅದರಲ್ಲಿ ಸಕ್ಕರೆ, ಮತ್ತು ಉಪ್ಪು ಎರಡನ್ನೂ ಬೆರೆಸುತ್ತಾರೆ. ಅಥವಾ ಯಾವುದಾದರೂ ಅಡುಗೆ ಮಾಡುವಾಗ, ಅದರಲ್ಲಿ ಸಕ್ಕರೆ ಮತ್ತು ಉಪ್ಪು ಎರಡನ್ನೂ ಬೆರೆಸುತ್ತಾರೆ. ಇದರಿಂದ ಆ ಅಡುಗೆಯ ರುಚಿ ಹೆಚ್ಚಬಹುದು. ಆದರೆ, ಅದರಿಂದಲೇ, ದೇಹದ ತೂಕ ಕೂಡ ಹೆಚ್ಚುತ್ತದೆ.
ಹೌದು, ನಾವು ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಸೇವಿಸುವುದರಿಂದ, ನಮ್ಮ ದೇಹದ ತೂಕ ಹೆಚ್ಚುತ್ತದೆ ಎಂದು ಹೇಳುತ್ತದೆ ಆಯುರ್ವೇದ. ಹಾಗಂತ ನೀವು ಪ್ರತಿದಿನ ಉಪ್ಪು, ಸಕ್ಕರೆ ಬೆರೆಸಿ ಸೇವಿಸಿದ್ದಲ್ಲಿ, ನೀವು ಆರೋಗ್ಯಕರವಾಗಿಯೂ ದಪ್ಪವಾಗುವುದಿಲ್ಲ. ಇದು ನಿಮ್ಮ ದೇಹದ ತೂಕ ಹೆಚ್ಚು ಮಾಡಿದರೂ ಕೂಡ, ಆರೋಗ್ಯ ಹಾಳು ಮಾಡಬಹುದು. ಹಾಗಾಗಿ ಸಕ್ಕರೆ, ಉಪ್ಪು ಒಂದೇ ಪದಾರ್ಥಕ್ಕೆ ಹೆಚ್ಚು ಬಳಸಕೂಡದು.
ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?