ಕೆಲವು ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆ ತುಂಬ ಅಹಂಕಾರವಿರುತ್ತದೆ. ತಾನೇ ಚೆಂದವೆಂದು ಮೆರೆದಾಡುತ್ತಾರೆ. ಅದರಲ್ಲೂ ವಿದ್ಯೆ, ಬುದ್ಧಿವಂತಿಕೆಯೂ ಜೊತೆಗಿದ್ದರೆ, ಕೆಲವರಿಗೆ ಭೂಮಿಯೇ ಕಾಣುವುದಿಲ್ಲವೆಂಬಂತೆ ಮಾಡುವುದುಂಟು. ಅಂಥವರಿಗಾಗಿ ಗರುಡ ಪುರಾಣದಲ್ಲಿ ಒಂದು ಮಾತಿದೆ. ಯಾವುದೇ ಕಾರಣಕ್ಕೂ ನಿಮ್ಮ ಸೌಂದರ್ಯದ ಬಗ್ಗೆ ಎಂದಿಗೂ ಗರ್ವ ಪಡಬೇಡಿ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ನಂದಿ ಶಿವನ ವಾಹನವಾಗಿದ್ದು ಹೇಗೆ..? ಯಾರು ಈ ನಂದಿ..?
ಸೌಂದರ್ಯದ ಬಗ್ಗೆ ಅಹಂಕಾರ ಪಡುವುದೇ ಒಂದು ಮೂರ್ಖತನ ಎನ್ನಲಾಗಿದೆ. ಯಾಕಂದ್ರೆ ಸೌಂದರ್ಯ ಇಂದು ಇರುತ್ತದೆ. ಮುಪ್ಪು ಹತ್ತಿರವಾಗುತ್ತಿದ್ದಂತೆ ಕುಂದಿ ಹೋಗುತ್ತದೆ. ಹಾಗಾಗಿ ಶಾಶ್ವತವಲ್ಲದ ಸೌಂದರ್ಯದ ಬಗ್ಗೆ ಸೊಕ್ಕು ತೋರಿಸುವುದು ಮೂರ್ಖತನವಾಗಿದೆ. ಗರುಡ ಪುರಾಣದ ಪ್ರಕಾರ, ಬಾಹ್ಯ ಸೌಂದರ್ಯಕ್ಕಿಂತ, ಆಂತರಿಕ ಸೌಂದರ್ಯ ಇರುವುದು ಮುಖ್ಯ. ಯಾಕಂದ್ರೆ ಈ ಆಂತರಿಕ ಸೌಂದರ್ಯವೇ ನಮ್ಮನ್ನು ಕಾಪಾಡುತ್ತದೆ.
ಯಶಸ್ಸು ಗಳಿಸಬೇಕೆಂದರೆ ಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 2
ಗರುಡ ಪುರಾಣದ ಪ್ರಕಾರ, ನೀವು ಎಷ್ಟೇ ಸುಂದರವಾಗಿದ್ರು, ನಿಮ್ಮಲ್ಲಿ ಸಂಸ್ಕಾರ, ವಿನಮೃ ಗುಣ, ದಾನದ ಸ್ವಭಾವ, ಕರುಣೆ ಇದ್ಯಾವುದು ಇಲ್ಲವಾದಲ್ಲಿ, ನಿಮ್ಮ ಸೌಂದರ್ಯಕ್ಕೊಂದು ಅರ್ಥವೇ ಇರುವುದಿಲ್ಲ. ಹಿರಿಯರೊಂದಿಗೆ ಗೌರವದಿಂದ, ಮಕ್ಕಳೊಂದಿಗೆ ಪ್ರೀತಿಯಿಂದ, ದೀನರೊಂದಿಗೆ ಕರುಣೆಯಿಂದ, ಮನೆ ಜನರೊಂದಿಗೆ, ಸ್ನೇಹಿತರೊಂದಿಗೆ ಕಾಳಜಿಯಿಂದ ಇರದಿರುವ ಮನುಷ್ಯನ ಸೌಂದರ್ಯ ಇದ್ದೂ ಇಲ್ಲದಂತೆ.
ಯಶಸ್ಸು ಗಳಿಸಬೇಕೆಂದರೆ ಶ್ರೀಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 1
ಇನ್ನು ಯಾರು ನಿಮ್ಮ ಸೌಂದರ್ಯ ನೋಡಿ ನಿಮ್ಮ ಬಳಿ ಸ್ನೇಹ ಮಾಡುತ್ತಾರೋ, ಅಥವಾ ಪ್ರೀತಿ ಮಾಡುತ್ತಾರೋ, ಅವರೆಂದೂ ನಿಮ್ಮ ಜೊತೆ ಕೊನೆವರೆಗೂ ಇರುವುದಿಲ್ಲ. ಹಾಗಾಗಿ ಸೌಂದರ್ಯಕ್ಕಿಂತ ಹೆಚ್ಚು, ಉತ್ತಮ ಗುಣಕ್ಕೆ ಬೆಲೆ ನೀಡಿ. ನಿಮ್ಮಲ್ಲೂ ಉತ್ತಮ ಗುಣವಿರಲಿ, ನೀವು ಆರಿಸಿಕೊಳ್ಳುವ, ಸ್ನೇಹಿತ, ಸಂಬಂಧಿ, ಜೀವನ ಸಂಗಾತಿಯಲ್ಲೂ ಉತ್ತಮ ಗುಣವಿರಲಿ. ಯಾಕಂದ್ರೆ ಸೌಂದರ್ಯ ಶಾಶ್ವತವಲ್ಲ.