Thursday, December 26, 2024

Latest Posts

ನಿಮ್ಮ ಮೊಬೈಲ್‌ಗೂ ಬರಬಹುದು ಈ ರೀತಿಯ ಇನ್ವಿಟೇಶನ್ ಕಾರ್ಡ್.. ಹುಷಾರಾಗಿರಿ

- Advertisement -

Tech News: ಮೊದಲೆಲ್ಲ ಮದುವೆ ಅಂದ್ರೆ, ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು, ಮದುವೆಗೆ ಬನ್ನಿ ಎಂದು ಹೇಳುವುದಾಗಿತ್ತು. ಬಳಿಕ, ಪೋಸ್ಟ್‌ನಲ್ಲಿ ವೆಡ್ಡಿಂಗ್ ಕಾರ್ಡ್ ಕಳಿಸಿ, ಆಮಂತ್ರಣ ನೀಡುವ ಪದ್ಧತಿ ಬಂತು. ಆದರೆ ಈಗ ಜನ ಅಪ್ಡೇಟ್ ಆಗಿದ್ದು, ವಾಟ್ಸಪ್‌ನಲ್ಲೇ ಮದುವೆ ಆಮಂತ್ರಣ ಕಳುಹಿಸಲು ಶುರು ಮಾಡಿದ್ದಾರೆ. ಆದರೆ ಇದೇ ಆಮಂತ್ರಣ ಪತ್ರಿಕೆಯಿಂದ ನಿಮ್ಮ ಅಕೌಂಟ್‌ನಲ್ಲಿರುವ ದುಡ್ಡು ಹೋಗಬಹುದು. ನಿಮ್ಮ ಗ್ಯಾಲರಿಯಲ್ಲಿರುವ ಫೋಟೋಗಳು ಮಿಸ್ ಯೂಸ್ ಆಗಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.

ಹೊಸ ನಂಬರ್ ಒಂದರಿಂದ ನಿಮಗೆ ಒಂದು ಲಿಂಕ್ ಕಳುಹಿಸಲಾಗುತ್ತದೆ. ನೀವು ಹೊಸ ನಂಬರ್ ನೋಡಿ, ಯಾರಿದು ಅಂತಾ ಕಳುಹಿಸುತ್ತೀರಾ. ಅದಕ್ಕೆ ಅಲ್ಲಿಂದ, ನನ್ನನ್ನು ಇಷ್ಟು ಬೇಗ ಮರೆತು ಬಿಟ್ಯಾ..? ನಾನು ನಿನ್ನ ಫ್ರೆಂಡ್‌. ನನ್ನ ಮದುವೆ ಫಿಕ್ಸ್ ಆಗಿದೆ. ಲಿಂಕ್‌ ಪ್ರೆಸ್ ಮಾಡಿದ್ರೆ, ನನ್ನ ವೆಡ್ಡಿಂಗ್ ಕಾರ್ಡ್ ಓಪನ್ ಆಗತ್ತೆ. ಅದರಲ್ಲಿ ನನ್ನ ಪೋಟೋ ಇದೆ. ನಾನು ಯಾರು ಅಂತ ಲಿಂಕ್ ಕ್ಲಿಕ್ ಮಾಡಿ, ನೀನೇ ನೋಡಿಕೋ ಅಂತಾ ರಿಪ್ಲೈ ಬರತ್ತೆ.

ಆ ರಿಪ್ಲೈ ನೋಡಿ, ನೀವೇನಾದರೂ ಕುತೂಹಲಕ್ಕೆ ಲಿಂಕ್ ಕ್ಲಿಕ್ ಮಾಡಿದ್ರಿ ಅಂತಾ ಇಟ್ಕೊಳ್ಳಿ. ಅಲ್ಲಿಗೆ ನಿಮ್ಮ ಅಕೌಂಟ್ ನಿಂದ ಹಣ ಹೋಯ್ತು ಅಂತಲೇ ಅರ್ಥ. ಅಲ್ಲದೇ, ನಿಮ್ಮ ಇಡೀ ಮೊಬೈಲ್ ಆ ಕ್ಷಣಕ್ಕೆ ಹ್ಯಾಕ್ ಆಗಿದೆ ಎಂದರ್ಥ. ನಿಮ್ಮ ಅಕೌಂಟ್‌ನಲ್ಲಿ ಹಣವಿಲ್ಲ ಅಂದರೂ ಕೂಡ, ನಿಮ್ಮ ಮೊಬೈಲ್‌ನಲ್ಲಿರುವ ಫೋಟೋಗಳು ಮಿಸ್ ಯೂಸ್ ಆಗಬಹುದು. ಹಾಗಾಗಿ ನಿಮ್ಮ ಮೊಬೈಲ್‌ಗೆ ಬರುವ ಯಾವುದೇ ಲಿಂಕ್‌ ಸಹ ಪ್ರೆಸ್ ಮಾಡಬೇಡಿ.

- Advertisement -

Latest Posts

Don't Miss