Friday, November 22, 2024

Latest Posts

ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..

- Advertisement -

Health Tips: ಎಲ್ಲ ಹೆಣ್ಣುಮಕ್ಕಳಿಗೂ ತಮಗೆ ನಾರ್ಮಲ್ ಡಿಲೆವರಿ ಆಗಬೇಕು ಅಂತಾನೇ ಆಸೆ ಇರುತ್ತದೆ. ಆದರೆ, ಹಲವಾರು ಕಾರಣಗಳಿಂದ , ಸಿಸರಿನ್ ಆಗುತ್ತದೆ. ಸಿಸರಿನ್ ಬಳಿಕ 3 ತಿಂಗಳು ಭಾರ ಎತ್ತುವ ಕೆಲಸಗಳನ್ನ ಮಾಡುವಂತಿಲ್ಲ. ದೂರ ದೂರ ಜರ್ನಿ ಮಾಡುವಂತಿಲ್ಲ. ಇನ್ನು ಆಹಾರದ ವಿಷಯದಲ್ಲಂತೂ ಬಾಣಂತಿಯರು ಹೆಚ್ಚೇ ಕಾಳಜಿ ವನಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು ಸಿಸರಿನ್ ಆದವರು ಯಾವ ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಿದ್ದೇವೆ..

ಸಿಸರಿನ್ ಆದವರು ಪ್ರೋಟಿನ್ ಭರಿತವಾದ ಆಹಾರವನ್ನು ಸೇವಿಸಬೇಕು. ಎರಡು ತಿಂಗಳವರೆಗೆ ನೀವು ಮಸಾಲೆ ಇಲ್ಲದ, ಖಾರವಲ್ಲದ ಸಪ್ಪೆ ಪದಾರ್ಥವನ್ನು ತಿನ್ನಬೇಕು. ಬೇಳೆಕಾಳಿನ ಪಲ್ಯ, ಸಾರು, ಕುಚಲಕ್ಕಿ ಅನ್ನ, ತುಪ್ಪ, ಮೊಸರು, ಸೊಪ್ಪಿನ ಪಲ್ಯ, ಸಾರು, ನೆನೆಸಿದ ಡ್ರೈಫ್ರೂಟ್ಸ್, ಹಸುವಿನ ಹಾಲು ಸೇವಿಸಬೇಕು. ಇನ್ನು ಹಣ್ಣು ತರಕಾರಿಗಳನ್ನ ಕೂಡ ಸೇವಿಸಬೇಕು.

ಕಲ್ಲಂಗಡಿ, ಕಿತ್ತಳೆ, ಪಪ್ಪಾಯಿ, ಸ್ಟ್ರಾಬೇರಿ, ಬೂದಿ ಬಾಳೆಹಣ್ಣು, ಆ್ಯಪಲ್, ಇವಿಷ್ಟು ಹಣ್ಣುಗಳನ್ನ ತಿನ್ನಬೇಕು. ಇನ್ನು ಸೊಪ್ಪಿನಲ್ಲಿ ಪಾಲಕ್, ಸಬ್ಬಸಿಗೆ ಸೊಪ್ಪನ್ನ ಚೆನ್ನಾಗಿ ತಿನ್ನಿ. ದ್ರವ ಪದಾರ್ಥವಾಗಿ, ಹೆಚ್ಚೆಚ್ಚು ಉಗುರು ಬೆಚ್ಚಗಿನ ನೀರು, ಎಳನೀರು, ಹಾಲು ಸೇರಿಸಿ ಮಾಡಿದ ಕಶಾಯ, ಜೀರಿಗೆ ನೀರು, ಸೋಂಪಿನ ನೀರು, ಹಾಲು, ಮಜ್ಜಿಗೆ ಇದರ ಸೇವನೆ ಮಾಡಬೇಕು. ಮಗುವಿಗೆ ಹಾಲು ಕುಡಿಸುವಷ್ಟು ದಿನ ಟೀ, ಕಾಫಿ ಸೇವನೆ ಬಿಡುವುದು ಉತ್ತಮ. ನೀವು ಉತ್ತಮ ದ್ರವ ಪದಾರ್ಥವನ್ನು ಎಷ್ಟು ಸೇವಿಸುತ್ತೀರೋ, ಅಷ್ಟು ಎದೆಹಾಲು ಹೆಚ್ಚುತ್ತದೆ.

ಗರ್ಭಿಣಿಯರು 3 ತಿಂಗಳು ತುಂಬಿದ ಬಳಿಕ ಈ ಆಹಾರಗಳನ್ನು ಸೇವನೆ ಮಾಡಬೇಕು..

ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

ಬೇರುಹಲಸಿನಕಾಯಿ (ಜೀಗುಜ್ಜೆ) ಸ್ಪೆಶಲ್ ಬಜ್ಜಿ ರೆಸಿಪಿ

- Advertisement -

Latest Posts

Don't Miss