Hubli News: ಹುಬ್ಬಳ್ಳಿ; ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಮೀಸಲಾತಿಗಾಗಿ ಬೆಳಗಾವಿಯಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಮೇಲೆ ದಬ್ಬಾಳಿಕ್ಕೆ, ಗುಂಡು ಹಾರಿಸುವುದು ಮಾಡಿದರೆ 24 ಗಂಟೆಗಳಲ್ಲಿ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ. ನಾನು ಗಂಭೀರವಾಗಿ ಎಚ್ಚರಿಕೆ ಕೊಡ್ತಾ ಇದ್ದೇನೆ. ಕಾಂಗ್ರೆಸ್ ನಲ್ಲಿರುವಂತಹ ನಮ್ಮ ಸಮಾಜದ ಶಾಸಕರಿಗೆ ಅಗ್ನಿ ಪರೀಕ್ಷೆ ಇದೆ ಎಂದಿದ್ದಾರೆ.
ವಕ್ಫ್ ವಿಚಾರ ಹಾಗೂ ಪಂಚಮಸಾಲಿ ಮೀಸಲಾತಿ 2ಎ ಅಥವಾ 2ಡಿ ಕೊಡಬೇಕು. ಕುರುಬ ಸಮಾಜ ಎಸ್ ಟಿಯಲ್ಲಿ ಸೇರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡ್ತೇವೆ.ನೀರಾವರಿ ಯೋಜನೆಗಾಗಿ ಒಂದೂವರೆ ಲಕ್ಷ ಕೋಟಿ ಬುಕ್ ಆಗಿದೆ. ನಮ್ಮ ಸ್ಪೀಕರ್ ಗೆ ಈಗಾಗಲೇ ನಾನು ಪತ್ರ ಬರೆದಿದ್ದೇನೆ. ನಮ್ಮ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಪ್ರತಿ ಬಾರಿ ವಿಧಾನ ಮಂಡಲದಲ್ಲಿ ಉತ್ತರ ಕರ್ನಾಟಕದ ಚರ್ಚೆ ಕೊನೆಗೆ ಇಡ್ತಾರೆ. ಆ ವೇಳೆ ಯಾವ ಶಾಸಕರು ಕೂಡ ಇರುವುದಿಲ್ಲ. ನಮಗೆ ಒಮ್ಮೊಮ್ಮೆ ಕೋರಂ ಆಗುವಷ್ಟು ಶಾಸಕರು ಇರುವುದಿಲ್ಲ. ಉತ್ತರ ಕರ್ನಾಟಕದ ಬಗ್ಗೆ ಕೇವಲ ನಾಮಕಾವಸ್ಥೆ ಚರ್ಚೆ ಆಗ್ತಾ ಇದೆ. 9ನೇ ತಾರೀಕಿಗೆ ಏನು ಸದನ ಆರಂಭ ಆಗುತ್ತೆ ಅವತ್ತಿನಿಂದಲೇ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಆಮೇಲೆ ಬೇರೆ ವಿಷಯದ ಬಗ್ಗೆ ಚರ್ಚೆ ಆಗಲಿ.
ನಾಳೆ ಮತ್ತೆ ಪಂಚಮಸಾಲಿ ಹೋರಾಟದ ಬಗ್ಗೆ ಸಭೆ ಕರೆದಿದ್ದಾರೆ, ಹೋಗುತ್ತೇವೆ. ನಾನು ವಿಧಾನಸಭಾದಲ್ಲಿ ಧ್ವನಿ ಎತ್ತಿದಾಗ ನಮ್ಮ ಶಾಸಕರು ಬರದೆ ಹೋದರೆ ಮುಂದಿನ ಚುನಾವಣೆಯಲ್ಲಿ ಮತ ಕೇಳಕ್ಕೆ ನಮ್ಮ ಸಮಾಜದ ಮುಂದೆ ಬಂದೇ ಬರ್ತಾರೆ. ಅವಾಗ ನಮ್ಮ ಸಮಾಜದವರು ತಕ್ಕ ಪಾಠ ಕಲಿಸ್ತಾರೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸ್ತೀನಿ ಅನ್ನೋರು ಡುಪ್ಲಿಕೇಟ್ ಸ್ವಾಮೀಜಿಗಳು. ಮಠಾಧೀಶರ ವಿರುದ್ಧ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ಬಸವಣ್ಣನ ಕುರಿತ ತಮ್ಮ ಹೇಳಿಕೆ ಕುರಿತು ಸ್ವಾಮೀಜಿಗಳ ಪ್ರತಿಕ್ರಿಯೆಗೆ ಆಕ್ರೋಶ ಹೊರಹಾಕಿದ ಯತ್ನಾಳ್, ನನ್ನ ಹೇಳಿಕೆ ಬಗ್ಗೆ ಮಾತನಾಡುತ್ತಿರುವ ಮಠಾಧೀಷರು ಮೊದಲು ಸರ್ವಜ್ಞನ ವಚನಗಳನ್ನು ಓದಲಿ. ನಂದಿಯ ಹೆಸರಿನವ, ನೊಂದು ರಾಜ್ಯವನಾಳಿದ, ಬಂಧನಪಟ್ಟು ಭಯಪಟ್ಟು ನೀರಿನೊಳು ಸಂದು ಹೋದನು ಅಂತ ಸರ್ವಜ್ಞ ಹೇಳಿದ್ದಾನೆ. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಲಿ. ನಾನು ಕ್ಷಮೆ ಕೋರುವವರಿಂದ ಏನೂ ಆಗಲ್ಲ. ನನ್ನ ನಾಲಿಗೆ ಕತ್ತರಿಸ್ತೀನಿ ಅಂತಾರೆ. ನಾಲಿಗೆ ಕತ್ತರಿಸ್ತೀನಿ ಅನ್ನೋರು ಬಸವಣ್ಣನ ಅನುಯಾಯಿಗಳೇ ಅಲ್ಲ. ಬಸವಣ್ಣನ ವಚನ ಹೇಳುವವರು ನಾಲಿಗೆ ಕತ್ತರಿಸ್ತೀನಿ, ಬಾಯಿ ಬಂದ್ ಮಾಡ್ತೀನಿ ಅಂದ್ರೆ ಹೇಗೆ..?
ನನ್ನನ್ನು ಎಲೆಕ್ಷನ್ ನಲ್ಲಿ ಸೋಲುಸ್ತೀನಿ ಅನ್ನೋರು ಡುಪ್ಲಿಕೇಟ್ ಸ್ವಾಮಿಗಳು. ಬಸವಣ್ಣನ ನಕಲಿ ಅಭಿಮಾನಿಗಳು. ಶ್ಯಾಮನೂರು ಶಿವಶಂಕರಪ್ಪ ಅವರು ಬಸವಣ್ಣನ ಬಗ್ಗೆ ಬಹಳ ಮಾತಾಡ್ತಾರೆ. ಅವರು ಒಂದಾದರೂ ಬಸವ ಭವನ ಕಟ್ಟಿದ್ದಾರಾ..? ಶಿಕ್ಷಣ ಸಂಸ್ಥೆಗಳಿಗೆ ಬಸವಣ್ಣನ ಹೆಸರು ಇಟ್ಟಿದ್ದಾರಾ..? ಎಂದು ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.