Spiritual: ಈ ಪ್ರಪಂಚದಲ್ಲಿರುವ ಮನುಷ್ಯರಲ್ಲಿ ವಿವಿಧ ರೀತಿಯ ಗುಣದವರು ಇದ್ದಾರೆ. ಕೆಲವರು ತೀರಾ ಕಡಿಮೆ ಮಾತನಾಡಿದ್ರೆ, ಇನ್ನು ಕೆಲವರು ವಟಾವಟಾ ಅಂತಿರ್ತಾರೆ. ಹಾಗೆ ಮಾತನಾಡೋದು ತಪ್ಪಲ್ಲ. ಆದ್ರೆ ಕೆಲವೊಮ್ಮೆ ಅವಶ್ಯಕತೆ ಮೀರಿ ಮಾತನಾಡುತ್ತಾರೆ. ಅದು ತಪ್ಪು. ಹಾಗಾಗಿ ನಾವಿಂದು ಹೆಚ್ಚು ಮಾತನಾಡುವವರಿಗಾಗಿ ಒಂದು ಕಥೆಯ ಬಗ್ಗೆ ಹೇಳಲಿದ್ದೇವೆ.
ಒಂದು ಕುಟೀರದಲ್ಲಿ ಕೆಲವು ಶಿಷ್ಯರಿಗೆ ಗುರುಗಳು ವಿದ್ಯಾದಾನ ಮಾಡುತ್ತಿದ್ದರು. ಆ ಶಿಷ್ಯರಲ್ಲಿ ಓರ್ವ ಶಿಷ್ಯ ಸಿಕ್ಕಾಪಟ್ಟೆ ಮಾತನಾಡುವವನಾಗಿದ್ದ. ಅಲ್ಲಿನ ಚಾಡಿ ಇಲ್ಲಿಗೆ ಇಲ್ಲಿನ ಚಾಡಿ ಮಾತು ಅಲ್ಲಿಗೆ ಹೇಳುವುದರಲ್ಲಿ ಅವನು ನಿಸ್ಸೀಮನಾಗಿದ್ದ. ಅಲ್ಲದೇ, ಪದೇ ಪದೇ ಗುರುಗಳ ಬಳಿ ಬಂದು, ತಾನು ಉತ್ತಮ ಶಿಷ್ಯನಾಗಲು ಪ್ರಯತ್ನವೂ ಪಡುತ್ತಿದ್ದ.
ಒಮ್ಮೆ ಗುರುಗಳು ಎಲ್ಲ ಶಿಷ್ಯರನ್ನು ಕರೆದು, ನೀವೆಲ್ಲರೂ ಒಂದು ಸಂಕಲ್ಪ ಮಾಡಬೇಕಿದೆ. ಒಂದು ತಿಂಗಳು, ಆ ಸಂಕಲ್ಪವನ್ನು ಮುರಿಯದೇ, ಈಡೇರಿಸಬೇಕು. ಆಗ ನೀವು ಉತ್ತಮ ಶಿಷ್ಯರು ಎಂದೆನ್ನಿಸಿಕೊಳ್ಳುತ್ತೀರಿ ಎನ್ನುತ್ತಾರೆ. ಎಲ್ಲ ಶಿಷ್ಯರೂ ಇದನ್ನು ಒಪ್ಪಿಕೊಂಡು, ಒಬ್ಬೊಬ್ಬ ಶಿಷ್ಯರು ಒಂದೊಂದು ಸಂಕಲ್ಪ ಹೇಳಿ, ಅದನ್ನು ಈಡೇರಿಸಲು ಹೊರಡುತ್ತಾರೆ.
ಆದರೆ ಈ ವಾಚಾಳಿ ಶಿಷ್ಯ ಮಾತ್ರ, ಗುರುಗಳ ಬಳಿ ಹೋಗಿ, ನಾನು ಎಲ್ಲರಂತೆ, ನಾನೇ ನಿರ್ಧಾರ ಮಾಡಿ, ಸಂಕಲ್ಪ ತೆಗೆದುಕೊಳ್ಳುವುದಿಲ್ಲ. ಬದಲಾಗಿ ನೀವು ಹೇಳಿದ ಸಂಕಲ್ಪವನ್ನೇ ಮಾಡುತ್ತೇನೆ ಎನ್ನುತ್ತಾನೆ. ಅದಕ್ಕೆ ಗುರುಗಳು, ಹಾಗಾದರೆ ನೀನು ಇನ್ನು ಒಂದು ತಿಂಗಳ ಕಾಲ ಮಾತನಾಡುವ ಹಾಗಿಲ್ಲ. ಮೌನವಾಗಿ ಇರಬೇಕು. ಇದೇ ನಿನ್ನ ಸಂಕಲ್ಪವೆನ್ನುತ್ತಾರೆ.
ಇದಕ್ಕೆ ಒಪ್ಪಿದ ಶಿಷ್ಯ, ಅಷ್ಟೇ ತಾನೇ. ಅದೇನು ಮಹಾ. ನಾನು ಒಂದು ತಿಂಗಳು ಮೌನವಾಗಿ ಇರುತ್ತೇನೆ ಎಂದು ಹೊರಡುತ್ತಾನೆ. ಒಂದೆರಡು ದಿನ ವಾಚಾಳಿ ಶಿಷ್ಯ, ಮೌನವಾಗಿಯೇ ಇರುತ್ತಾನೆ. ಮೂರನೇ ದಿನದಿಂದ ಕಷ್ಟವಾಗುತ್ತದೆ. ಕೆಲ ಶಿಷ್ಯರು ಇನ್ನೂ ಕುಟೀರದಲ್ಲೇ ಇದ್ದ ಕಾರಣ, ಅವರೆಲ್ಲ ಮಾತನಾಡುವಾಗ, ಅವರ ಮಧ್ಯೆ ಇವನಿಗೂ ಹೋಗಿ ಬಾಯಿ ಹಾಕಿ, ಹರಟೆ ಹೊಡೆಯಬೇಕು ಎಂದು ಎನ್ನಿಸುತ್ತದೆ. ಆದರೆ ಅವನು ಸುಮ್ಮನಾಗುತ್ತಾನೆ.
ಹೇಗೋ ಮಾಡಿ ಒಂದು ವಾರ ಮೌನವಹಿಸುತ್ತಾನೆ. ಎರಡನೇ ವಾರದಲ್ಲಿ ಅವನಿಗೆ ಜ್ವರ ಬರಲು ಆರಂಭವಾಗುತ್ತದೆ. ಆಗ ಅವನು ಗುರುಗಳ ಬಳಿ ಬಂದು, ಒಂದು ಕಾಗದದಲ್ಲಿ, ನನಗೆ ಮೌನ ವಹಿಸಿ, ವಹಿಸಿ ಜ್ವರ ಬರಲಾರಂಭಿಸಿದೆ. ನಾನು ಸಂಕಲ್ಪ ಮುರಿದು ಮಾತನಾಡಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಗುರುಗಳು ಈಗಾಗಲೇ ಹಲವು ಶಿಷ್ಯರು ತಮ್ಮ ಸಂಕಲ್ಪ ಮುರಿದು, ಮರಳಿ ಆಶ್ರಮಕ್ಕೆ ಬಂದಿದ್ದಾರೆ. ಆದ್ದರಿಂದ ಅವರ್ಯಾರೂ ಉತ್ತಮ ಶಿಷ್ಯರಾಗಲಿಲ್ಲ. ನೀನು ಬೇಕಾದರೆ, ನಿನ್ನ ಸಂಕಲ್ಪ ನಿಲ್ಲಿಸು. ನನಗೇನೂ ಬೇಸರವಿಲ್ಲ. ನಿನಗೆ ಶಕ್ತಿ ಇಲ್ಲವೆಂದು ತಿಳಿದು ನಾನು ಸುಮ್ಮನಾಗುತ್ತೇನೆ ಎನ್ನುತ್ತಾರೆ. ಹಾಗಾದರೆ ವಾಚಾಳಿ ಶಿಷ್ಯ ಸಂಕಲ್ಪ ಮುರಿಯುತ್ತಾನಾ.? ಮುಂದುವರಿಸುತ್ತಾನಾ ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.
ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..




