Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ವಾಚಾಳಿ ಶಿಷ್ಯನಿಗೆ, ಗುರುಗಳು ಸಂಕಲ್ಪ ಮುರಿಯಲು ಹೇಳಿದ್ದರ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಶಿಷ್ಯ ಸಂಕಲ್ಪ ಮುರಿಯುತ್ತಾನಾ ಇಲ್ಲವಾ ಅಂತಾ ತಿಳಿಯೋಣ ಬನ್ನಿ..
ಗುರುಗಳ ಮಾತನ್ನು ಕೇಳಿದ ಶಿಷ್ಯನಿಗೆ ಬೇಸರವಾಗುತ್ತದೆ. ಎಷ್ಟೇ ಕಷ್ಟವಾಗಲಿ, ತಾನು ಈ ಸಂಕಲ್ಪವನ್ನು ಮುಂದುವರಸಲೇಬೇಕು ಎಂದು ಮತ್ತೆ ಮೌನ ವಹಿಸುತ್ತಾನೆ. 15 ದಿನ ಕಳಿಯುತ್ತದೆ. ಶಿಷ್ಯ ಗುರುಗಳ ಬಳಿ ಬಂದು, ಅವರ ಕಾಲಿಗೆ ನಮಸ್ಕರಿಸಿ, ತಾನು ಕಾಡಿಗೆ ಹೋಗಿ, ಧ್ಯಾನ ಮಗ್ನನಾಗಿ ಹಲವು ದಿನಗಳ ಬಳಿಕ ಬರುತ್ತೇನೆ ಎಂದು ಕಾಗದದಲ್ಲಿ ಬರೆದು ಹೊರಡುತ್ತಾನೆ.
ತಿಂಗಳು ಕಳೆದರೂ ವಾಚಾಳಿ ಶಿಷ್ಯ ಆಶ್ರಮಕ್ಕೆ ಬರುವುದಿಲ್ಲ. ಆಗ ಬೇರೆ ಶಿಷ್ಯರೆಲ್ಲ ಗುರುಗಳ ಬಳಿ ಬಂದು, ನೀವು ಅವನಿಗೆ ಎಂಥ ಸಂಕಲ್ಪ ಕೊಟ್ಟಿದ್ದಿರಿ..? ಅದರಿಂದ ಏನು ಸಾಧಿಸಲು ಸಾಧ್ಯವೆಂದು ಕೇಳುತ್ತಾರೆ. ಅದಕ್ಕೆ ಗುರುಗಳು, ಅವನು ತುಂಬಾ ವಾಚಾಳಿಯಾಗಿದ್ದ. ಆ ಕಾರಣಕ್ಕೆ ನಾನು ಅವನಿಗೆ ಒಂದು ತಿಂಗಳು ಮೌನವಾಗಿರುವ ಸಂಕಲ್ಪ ನೀಡಿದ್ದೆ. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ಮಾತನಾಡುವವರು, ಒಂದಲ್ಲ ಒಂದು ಸಮಸ್ಯೆಯನ್ನು ತಂದುಕೊಳ್ಳುತ್ತಾರೆ.
ಅಂಥ ಸಮಸ್ಯೆ ಅವನಿಗೆ ಬರಬಾರದು ಎಂಬ ಕಾರಣಕ್ಕೆ ಅಂಥ ಸಂಕಲ್ಪ ಕೊಟ್ಟಿದ್ದೆ. ನಮ್ಮ ಆಶ್ರಮದ ಶಿಷ್ಯರೆಲ್ಲ ಸಂಕಲ್ಪ ಮುರಿದು, ಮರಳಿ ಆಶ್ರಮಕ್ಕೆ ಬಂದಿದ್ದಾರೆ. ಆದರೆ ಅವನೊಬ್ಬನೇ ಸಂಕಲ್ಪ ಮುಂದುವರಿಸಿದ್ದಾನೆ. 15 ದಿನ ಅವನು ಶಿಸ್ತಿನಿಂದ ಸಂಕಲ್ಪ ಈಡೇರಿಸಿದ. ಈಗ ಅವನು ಕಾಡಿಗೆ ಹೋಗಿ, ಧ್ಯಾನ ಮಗ್ನನಾಗಿದ್ದಾನೆ ಎನ್ನುತ್ತಾರೆ. ಕೆಲ ದಿನಗಳ ಬಳಿಕ ವಾಚಾಳಿ ಮರಳಿ ಆಶ್ರಮಕ್ಕೆ ಬರುತ್ತಾನೆ. ಅವನ ಮುಖದಲ್ಲಿ ಹೊಸ ಕಾಂತಿ ತುಂಬಿರುತ್ತದೆ. ಅವನ ಮಾತಿನಲ್ಲಿ ಮೃದುತ್ವ ಇರುತ್ತದೆ. ಅವನು ಗುರುಗಳ ಉತ್ತಮ ಶಿಷ್ಯನಾಗಿರುತ್ತಾನೆ.
ಅಣ್ಣ- ತಂಗಿಯನ್ನ ವಿವಾಹವಾಗಲು ಏಕೆ ಸಾಧ್ಯವಿಲ್ಲ..? ಇದು ಅಧರ್ಮಿ ಅಣ್ಣ- ತಂಗಿಯ ಮದುವೆ ಕಥೆ..
ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..




