ಮನುಷ್ಯನಿಗೆ ಊಟ ತಿಂಡಿ ಎಷ್ಟು ಮುಖ್ಯವೋ, ನಿದ್ದೆ ಕೂಡ ಅಷ್ಟೇ ಮುಖ್ಯ. ನೀವು ರಾತ್ರಿ ಮಲಗಿದ ತಕ್ಷಣ ನಿದ್ದೆ ಬಂದು, ನಿಮಗೆ ಡೈರೆಕ್ಟ್ ಬೆಳಿಗ್ಗೆನೇ ಎಚ್ಚರಾದ್ರೆ, ನೀವು ಆರೋಗ್ಯವಂತರು ಎಂದರ್ಥ. ಆದ್ರೆ ನಿಮಗೆ ರಾತ್ರಿ ಎಷ್ಟು ಬೇಗ ಮಲಗಿದ್ರೂ, ಲೇಟಾಗೇ ನಿದ್ದೆ ಬರೋದು, ಪದೇ ಪದೇ ಎಚ್ಚರಾಗೋದು ಆದ್ರೆ, ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಇದೆ ಎಂದರ್ಥ. ಯಾಕಂದ್ರೆ ನೆಮ್ಮದಿಯಾಗಿ, ಗಾಢ ನಿದ್ದೆ ಮಾಡುವುದು ಆರೋಗ್ಯವಂತರ ಲಕ್ಷಣ. ಹಾಗಾಗಿ ನಾವಿಂದು ಗಾಢವಾದ ನಿದ್ದೆ ಬರಬೇಕಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಸ್ಮೂತ್ ಸಿಲ್ಕಿ ಕೂದಲು ಬೇಕಾದರೆ, ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸಿ..
ಮೊದಲನೇಯ ಟಿಪ್ಸ್. ನಾವು ರಾತ್ರಿ ಮಲಗಿದಾಗ ನಮ್ಮ ದೇಹದಲ್ಲಿ ಏನಾಗುತ್ತದೆ ಅನ್ನೋ ಪ್ರಶ್ನೆಗೆ ಉತ್ತರ, ನಮ್ಮ ದೇಹ ಚಾರ್ಜ್ ಆಗುತ್ತದೆ. ಅಂದ್ರೆ ನಿಮ್ಮ ಮೊಬೈಲ್ ಬ್ಯಾಟರಿ ಡೌನ್ ಆದಾಗ, ಹೇಗೆ ನೀವು ಅದನ್ನು ಚಾರ್ಜ್ ಮಾಡಿದ ಮೇಲೆ, ಅದು ಮತ್ತೆ ಬಳಕೆಯಾಗುತ್ತದೆಯೋ, ಅದೇ ರೀತಿ. ಹಾಗಾಗಿ ನಿದ್ದೆ ಅನ್ನೋದು ತುಂಬಾ ಇಂಪಾರ್ಟೆಂಟ್. ಹಾಗಾಗಿ ಸಂಪೂರ್ಣ ಕತ್ತಲೆ ಇರುವ ಕೋಣೆಯಲ್ಲಿ ನೀವು ಮಲಗಬೇಕು. ಹೀಗೆ ಸಂಪೂರ್ಣ ಕತ್ತಲೆಯಲ್ಲಿ ಮಲಗುವುದರಿಂದ ನಿಮಗೆ ಪದೇ ಪದೇ ಎಚ್ಚರಾಗುವುದಿಲ್ಲ. ಮತ್ತು ಗಾಢವಾದ ನಿದ್ರೆ ಬರುತ್ತದೆ.
ಎರಡನೇಯ ಟಿಪ್ಸ್. ನೀವು ಲೇಟಾಗಿ ಮಲಗಿ, ಲೇಟಾಗಿ ಏಳುವವರಾಗಿದ್ರೆ, ಮೊದಲು ಅದನ್ನು ತಪ್ಪಿಸಿ. ಬೇಗ ಮಲಗಿ ಬೇಗ ಏಳಿ. ಯಾಕಂದ್ರೆ ನಿದ್ದೆ ಅನ್ನೋದು ಔಷಧಿಯ ರೀತಿ ಕೆಲಸ ಮಾಡುತ್ತದೆ. ನಿಮಗೆ ಯಾವುದೇ ರೋಗವಿದ್ದರೂ, ನೀವು ಗಾಢ ನಿದ್ದೆ ಮಾಡಿ, ಆ ರೋಗಕ್ಕೆ ಮುಕ್ಕಾಲು ಭಾಗ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿ ಮಲಗುವ ಒಂದು ಗಂಟೆ ಮುನ್ನ ಮೊಬೈಲ್, ಲ್ಯಾಪ್‌ಟಾಪ್, ಟಿವಿ ಬಳಕೆ ಮಾಡಲೇಬೇಡಿ. ಯಾಕಂದ್ರೆ ನೀವು ಗ್ಯಾಜೆಟ್ಸ್ ಬಳಸಿದ ಮೇಲೆ ನಿಮಗೆ ಸ್ವಲ್ಪ ಹೊತ್ತು ನಿದ್ದೆ ಬರುವುದಿಲ್ಲ. ಇದು ವಿಕಿರಣಗಳ ಎಫೆಕ್ಟ್ ಆಗಿರುತ್ತದೆ.
ನಿಮ್ಮ ಸ್ಕಿನ್ ಸೂಪರ್ ಆಗಿರಬೇಕು ಅಂದ್ರೆ ಇದರ ಸೇವನೆ ಮಾಡಿ..
ಮೂರನೇ ಟಿಪ್ಸ್. ಉತ್ತಮ ನಿದ್ರೆ ಮಾಡಿದ್ರೆ, ನೀವು ಯಂಗ್ ಆಗಿ ಕಾಣ್ತೀರಾ. ಆರೋಗ್ಯವಂತರಾಗಿರ್ತೀರಾ. ನಿಮ್ಮ ತ್ವಚೆ ಉತ್ತಮವಾಗಿರುತ್ತದೆ. ಬೇಗ ಮುಖದ ಮೇಲೆ ನೆರಿಗೆ ಬೀಳುವುದನ್ನು ತಪ್ಪಿಸಬೇಕಾದ್ರೆ, ನೀವು ಡೀಪ್ ಸ್ಲೀಪ್ ಮಾಡ್ಬೇಕು. ಹಾಗೆ ಗಾಢವಾದ ನಿದ್ದೆ ಬರಬೇಕಂದ್ರೆ, ನೀವು ರಾತ್ರಿ ಮಲಗುವಾಗ ಉಗುರರು ಬೆಚ್ಚಗಿನ ನೀರಿನಲ್ಲಿ ನಿಮ್ಮ ಕಾಲನ್ನು 15 ಅದ್ದಿಟ್ಟು ನಂತರ ಮಲಗಬೇಕು. ಹೀಗೆ ಮಾಡುವುದರಿಂದ ಆರಾಮದಾಯಕವಾಗುತ್ತದೆ. ಮತ್ತು ಗಾಢವಾದ ನಿದ್ದೆ ಬರುತ್ತದೆ.
ನಾಲ್ಕನೇಯ ಟಿಪ್ಸ್. ರಾತ್ರಿ ಊಟ ಮಾಡಿ ಒಂದು ಗಂಟೆಯಾದ ಬಳಿಕ ನಿದ್ದೆ ಮಾಡಿ. ಊಟ ಮಾಡಿದ ತಕ್ಷಣ ಮಲಗಬೇಡಿ. ಯಾಕಂದ್ರೆ ಹೀಗೆ ಮಾಡುವುದರಿಂದ ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಇದು ಆರೋಗ್ಯಕ್ಕೂ ಅಷ್ಟು ಉತ್ತಮವಲ್ಲ. ಹಾಗಾಗಿ ರಾತ್ರಿ ಮಲಗುವ ಒಂದು ಗಂಟೆ ಮುನ್ನ ಊಟ ಮಾಡಿ. ಮಮತ್ತು ಊಟ ಹೆವಿಯಾಗಿ ಇರಬಾರದು. ಲೈಟಾಗಿ ಏನಾದರೂ ಸೇವಿಸಿ ಮಲಗಿ.
ಐದನೇಯ ಟಿಪ್ಸ್. ರಾತ್ರಿ ಮಲಗುವಾಗ ನಿಮಗೆ ಸಿಟ್ಟು ಬಂದಿದ್ದರೆ ಅಥವಾ ಯಾವುದಾದರೂ ಟೆನ್ಶನ್ ಇದ್ದರೆ, ಅದನ್ನು ಮರೆತು ನೀವು ಮಲಗಬೇಕು. ಅಥವಾ ಅದಕ್ಕೊಂದು ಪರಿಹಾರ ಕಂಡುಕೊಂಡು ಮಲಗಿ. ಯಾಕಂದ್ರೆ ನೀವು ಸಿಟ್ಟಿನಲ್ಲಿ ಅಥವಾ ಟೆನ್ಶನ್‌ನಲ್ಲಿ ಮಲಗಿದ್ರೆ, ನಿಮಗೆ ಪದೇ ಪದೇ ಎಚ್ಚರಾಗುತ್ತದೆ. ಆ ಬಗ್ಗೆಯೇ ಯೋಚನೆ ಹೆಚ್ಚುತ್ತದೆ. ಹಾಗಾಗಿ ಮಲಗುವಾಗ ಯಾವುದೇ ಟೆನ್ಶನ್- ಸಿಟ್ಟು ಇರದಂತೆ ನೋಡಿಕೊಂಡು ಮಲಗಿ.

