Friday, September 20, 2024

Latest Posts

ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

- Advertisement -

ನಮ್ಮ ಆರೋಗ್ಯ ಚೆನ್ನಾಗಿದ್ರೆ, ಸೌಂದರ್ಯ ತನ್ನಿಂದ ತಾನೇ ಸರಿಯಾಗತ್ತೆ. ನಮ್ಮ ಹೊಟ್ಟೆ ಸರಿಯಾಗಿದ್ರೆ, ಕೂದಲ ಬುಡ ಗಟ್ಟಿಯಾಗಿರತ್ತೆ. ಮುಖದಲ್ಲಿ ಹೊಳಪು ಬರತ್ತೆ. ಹಾಗಾಗಿ ನಾವಿಂದು ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳುವುದರ ಮೂಲಕ, ಕೂದಲು ಉದುರುವುದನ್ನ ಹೇಗೆ ನಿಲ್ಲಿಸಬೇಕು ಅಂತಾ ಹೇಳಲಿದ್ದೇವೆ.

ನೀವು ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿರಿಸಿದ ನೀರನ್ನು ಕುಡಿಯಿರಿ. ಇದಾದ ಬಳಿಕ ಬ್ರಶ್ ಮಾಡಿ, ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಅದನ್ನು ಬಿಟ್ಟು ಹೊಟ್ಟೆ ಸರಿಯಾಗಿ ಕ್ಲೀನ್ ಆಗಲಿ ಅಂತಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಕುಡಿಯಬೇಡಿ. ಯಾಕಂದ್ರೆ ಕೆಲವರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಕುಡಿಯದಿದ್ದರೆ, ಹೊಟ್ಟೆ ಕ್ಲೀನ್ ಆಗಲ್ಲಾ ಅನ್ನೋ ಭ್ರಮೆ ಇದೆ. ಅಂಥವರು ಆ ಭ್ರಮೆಯಿಂದ ಹೊರಬಂದು, ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನ ಕುಡಿಯಿರಿ. ಇದರಿಂದ ನಿಮ್ಮ ಹೊಟ್ಟೆ ಕ್ಲೀನ್ ಆಗತ್ತೆ.

ಇದಾದ ಬಳಿಕ ನೆನೆಸಿಟ್ಟ 5 ಬಾದಾಮನ್ನ ಸಿಪ್ಪೆ ತೆಗೆದು ತಿನ್ನಿ. ಜೊತೆಗೆ ಒಂದು ನೆನೆಸಿಟ್ಟ ವಾಲ್ನಟ್ ಮತ್ತು ಅಂಜೂರ ತಿನ್ನಿ. ಇದಾದ ಬಳಿಕ ಒಂದು ಎಳನೀರು ಕುಡಿಯಿರಿ. ಹೆಚ್ಚು ಎಣ್ಣೆ ಬಳಸದ ತಿಂಡಿ ತಿನ್ನಿ. ತಿಂಡಿಯೊಂದಿಗೂ ಕೂಡ ನೀವು ಟೀ ಕಾಫಿ ಕುಡಿಯುವಂತಿಲ್ಲ. ಮತ್ತು ಹೆಚ್ಚು ಖಾರ ಪದಾರ್ಥವನ್ನೂ ತಿನ್ನುವಂತಿಲ್ಲ. ಒಂದು ವಾರ ನಾನ್‌ವೆಜ್‌ ತಿನ್ನಬೇಡಿ. ಇಷ್ಟೇ ಅಲ್ಲದೇ, ನಿಮಗೆ ಹಸಿವಾದಾಗ, ಹೆಚ್ಚು ತಡ ಮಾಡದೇ, ಆರೋಗ್ಯಕರ ತಿಂಡಿಯನ್ನ ತಿನ್ನಿ. ಯಾಕಂದ್ರೆ ಹೊಟ್ಟೆ ಹಸಿವಿನಿಂದ ಗ್ಯಾಸ್ಟ್ರಿಕ್ ಆದ್ರೆ, ಜೀರ್ಣಕ್ರಿಯೆ ಸಮಸ್ಯೆಯಾಗತ್ತೆ. ಇದರಿಂದಲೇ ಕೂದಲು ಉದುರೋಕ್ಕೆ ಶುರುವಾಗೋದು.

ಇನ್ನು ತಲೆ ಕೂದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಹೇರ್ ಪ್ಯಾಕ್ ಹಾಕುವ ಬದಲು, ಮನೆಯಲ್ಲೇ ಹೇರ್ ಪ್ಯಾಕ್, ಶ್ಯಾಂಪೂ ತಯಾರಿಸಿ, ಕೂದಲಿಗೆ ಅಪ್ಲೈ ಮಾಡಿ. ವಾರದಲ್ಲಿ ಎರಡು ಬಾರಿ ಈ ಪ್ರಯೋಗ ಮಾಡಿದ್ರೆ ಸಾಕು. ಜೊತೆಗೆ ತಲೆ ಬುಡಕ್ಕೆ ಉಗುರು ಬೆಚ್ಚಗಿನ ಎಣ್ಣೆ ಮಸಾಜ್ ಮಾಡೋದನ್ನ ಮರಿಯಬೇಡಿ.

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ರೆಮಿಡಿ ಫಾಲೋ ಮಾಡಿ..

- Advertisement -

Latest Posts

Don't Miss