Wednesday, September 11, 2024

Latest Posts

ಕೂದಲನ್ನ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಹೇಗೆ..?

- Advertisement -

ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಅದೇ ರೀತಿ, ಕೂದಲಿನ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಿದ್ದೇವೆ..

ಮೊದಲನೇಯ ಟಿಪ್ಸ್, ತಲೆಗೂದಲು ಉದುರದಿರಲು ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಿ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕೇರ್ ಪ್ರಾಡಕ್ಟ್‌ಗಳನ್ನ ಕಡಿಮೆ ಬಳಸಿ. ಬಟರ್ ಫ್ರೂಟ್ ಮತ್ತು ಬಾಳೆಹಣ್ಣಿನ ಹೇರ್ ಪ್ಯಾಕ್.  ಅರ್ಧ ಬಾಳೆಹಣ್ಣು ಅರ್ಧ ಬಟರ್ ಫ್ರೂಟ್ ತೆಗೆದುಕೊಂಡು ಮ್ಯಾಶ್ ಮಾಡಿ ಪೇಸ್ಟ್ ತಯಾರಿಸಿ. ಇದಕ್ಕೆ ಒಂದು ಸ್ಪೂನ್ ಆಲಿವ್ ಎಣ್ಣೆ ಸೇರಿಸಿ. ಇದನ್ನ ಹೇರ್ ಪ್ಯಾಕ್ ಹಾಕಿ. ಒಣಗಿದ ಬಳಿಕ ಹೇರ್ ವಾಶ್ ಮಾಡಿ.

ಪ್ಯಾನ್ ಬಿಸಿ ಮಾಡಿ, ಅದರಲ್ಲಿ ನೆಲ್ಲಿಕಾಯಿ ಪುಡಿ ಒಂದು ಸ್ಪೂನ್, ಸೀಗೇಕಾಯಿ ಪುಡಿ ಒಂದು ಸ್ಪೂನ್‌ ಮತ್ತು ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿ. ಇದನ್ನ ಮಂದ ಉರಿಯಲ್ಲಿ ಕೊಂಚ ಬಿಸಿ ಮಾಡಿ. ಗ್ಯಾಸ್ ಆಫ್ ಮಾಡಿ ಆರಲು ಬಿಡಿ. ನಂತರ, ಇದನ್ನ ಸೋಸಿ, ಈ ಎಣ್ಣೆಯನ್ನ ಗಾಜಿನ ಬಾಟಲಿಗೆ ತುಂಬಿಸಿಡಿ. ನೀವು ಹೆಚ್ಚು ಎಣ್ಣೆ ಮಾಡಿಡಬಹುದು. ಈ ಎಣ್ಣೆಯಿಂದ ಹೆಡ್ ಮಸಾಜ್ ಮಾಡಿ, ತಲೆ ಸ್ನಾನ ಮಾಡಿ.

ಎರಡನೇಯ ಟಿಪ್ಸ್, ತಲೆಗೆ ಎಣ್ಣೆ ಮಸಾಜ್ ಮಾಡಿ. ನೀವು ವಾರಕ್ಕೊಮ್ಮೆ ಹೇರ್ ಪ್ಯಾಕ್ ಹಾಕುವ ರೀತಿಯೋ, ವಾರಕ್ಕೊಮ್ಮೆ ಚೆನ್ನಾಗಿ ಹೇರ್ ಮಸಾಜ್ ಮಾಡಿ, ತಲೆ ಸ್ನಾನ ಮಾಡಬೇಕು. ರಾತ್ರಿ ಮಲಗುವಾಗ ಎಣ್ಣೆಯನ್ನ ಕೊಂಚ ಬಿಸಿ ಮಾಡಿ, ತಲೆಗೆ ಮಸಾಜ್ ಮಾಡಿ ಮಲಗಿ. ಮರುದಿನ ಹೇರ್ ವಾಶ್ ಮಾಡಿ. ಇದರಿಂದ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ. ಭ್ರಂಗರಾಜ್ ಎಣ್ಣೆ, ಬಾದಾಮ್ ಎಣ್ಣೆ, ತೆಂಗಿನ ಎಣ್ಣೆ, ಇದೆಲ್ಲ ಕೂದಲ ಆರೋಗ್ಯಕ್ಕೆ ಅತ್ಯುತ್ತಮವಾದ ಎಣ್ಣೆಗಳು.

ಮೂರನೇಯ ಟಿಪ್ಸ್, ಆರೋಗ್ಯಕರ ಆಹಾರ ಸೇವನೆಯಿಂದಷ್ಟೇ ನಿಮ್ಮ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಪನೀರ್, ಟೋಫು, ಸೋಯಾಬಿನ್, ಫ್ರೆಶ್ ತರಕಾರಿ ಮತ್ತು ಹಣ್‌ಣು, ಹಸುವಿನ ಹಾಲು, ಹಾಲಿನಿಂದ ಮಾಡಿದ ತುಪ್ಪ, ಮೊಸರು, ಮಜ್ಜಿಗೆ, ಸೊಪ್ಪು, ಡ್ರೈಫ್ರೂಟ್ಸ್ ಸೇವನೆ ಅತೀ ಮುಖ್ಯ. ಅದೇ ರೀತಿ ಸಾಧ್ಯವಾದಷ್ಟು ನೀರು ಕೂಡ ಕುಡಿಯಬೇಕು.

ನಾಲ್ಕನೇಯ ಟಿಪ್ಸ್, ನಿಮ್ಮ ಕೂದಲು ಗಟ್ಟಿಮುಟ್ಟಾಗಿರಬೇಕು, ಆರೋಗ್ಯವಾಗಿರಬೇಕು ಅಂದ್ರೆ ನೀವು ಯೋಗಾಸನಗಳನ್ನ ಮಾಡಬೇಕು. ಯೋಗ ಕಲಿತವರ ಬಳಿ ಹೋಗಿ, ಯಾವ ಯಾವ ಯೋಗಗಳನ್ನ ಮಾಡಬೇಕು ಎಂದು ಕೇಳಿ, ಕಲಿತುಕೊಂಡು ಆಮೇಲೆ ಯೋಗ ಮಾಡುವುದು ತುಂಬಾ ಒಳ್ಳೆಯದು.

ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ 5 ಅತ್ಯುತ್ತಮ ಲಾಭಗಳಿವು..

ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆದಾ..? ಕೆಟ್ಟದ್ದಾ..?

1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..

ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?

ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?

- Advertisement -

Latest Posts

Don't Miss