Thursday, December 12, 2024

Latest Posts

ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..

- Advertisement -

ನಮ್ಮ ದೇಹದಲ್ಲಿ ಹೃದಯ ಅಂದ್ರೆ ಎಷ್ಟು ಮುಖ್ಯವೋ, ಲಿವರ್ ಕೂಡ ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಹಾಳಾದ್ರೆ, ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದರ್ಥ. ಅದೇ ರೀತಿ ಲಿವರ್ ಡ್ಯಾಮೇಜ್ ಆದ್ರೆ, ಅವನು ಬದುಕಿದ್ದು, ಸತ್ತಂತೆ. ಎಷ್ಟೇ ಟ್ರೀಟ್ಮೆಂಟ್ ಕೊಡ್ಸಿದ್ರೂ, ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ನಾವು ಈಗಿನಿಂದಲೇ ಲಿವರ್ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಹಾಗಾದ್ರೆ ಲಿವರ್ ಸ್ಟ್ರಾಂಗ್ ಆಗಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಕಾಮಾಲೆ ರೋಗ ಬಂದಾಗ ಏನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು..?

ಶುದ್ಧವಾದ ಅರಿಶಿನ ಬಳಕೆಯಿಂದ ಲಿವರಿನ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ವಾರದಲ್ಲಿ ಮೂರರಿಂದ ನಾಲ್ಕು ಬಾರಿ, ಬಿಸಿ ಹಾಲಿಗೆ ಪ್ಯೂರ್ ಅರಿಶಿನ ಹಾಕಿ, ಚೆನ್ನಾಗಿ ಕುದಿಸಿ, ಗೋಲ್ಡನ್ ಮಿಲ್ಕ್ ಮಾಡಿ ರಾತ್ರಿ ಮಲಗುವಾಗ ಕುಡಿಯಬೇಕು. ಇದರಿಂದ ನಿದ್ದೆಯೂ ಚೆನ್ನಾಗಿ ಬರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಲಿವರ್ ಆರೋಗ್ಯವೂ ವೃದ್ಧಿಸುತ್ತದೆ.

ಇನ್ನು ವಾರದಲ್ಲಿ ಮೂರು ಬಾರಿಯಾದ್ರೂ ಪಪ್ಪಾಯಿ ಹಣ್ಣಿನ ಸೇವನೆ ಮಾಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಪಪ್ಪಾಯಿ ಮಿಲ್ಕ್ ಶೇಕ್ ಕುಡಿಯುವ ಬದಲು ನೀವು ಪಪ್ಪಾಯಿ ಹಣ್ಣನ್ನು ತಿನ್ನುವುದು ಒಳ್ಳೆಯದು. ಇನ್ನು ನೀವೇ ಜ್ಯೂಸ್ ಮಾಡುವುದಿದ್ದರೆ, ಅದಕ್ಕೆ ಸಕ್ಕರೆ ಬಳಸಬೇಡಿ. ಅಲ್ಲದೇ ಪಪ್ಪಾಯಿ ಎಲೆಯ ರಸದ ಸೇವನೆಯೂ ಆರೋಗ್ಯದ ಮೇಲೆ ಅದ್ಭುತವಾದ ಕೆಲಸ ಮಾಡುತ್ತದೆ.

ನಿಶ್ಶಕ್ತಿಯನ್ನು ದೂರ ಮಾಡಲು ಈ ಟಿಪ್ಸ್ ಅನುಸರಿಸಿ..

ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ಲಿವರ್ ಆರೋಗ್ಯ ಚೆನ್ನಾಗಿರತ್ತೆ.  ಎಲ್ಲಕ್ಕಿಂತ ಮುಖ್ಯವಾದ ವಿಚಾರ ಅಂದ್ರೆ ಲಿವರ್ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ, ನೀವು ಮದ್ಯಪಾನ ಧೂಮಪಾನ ಸೇವನೆ ಮಾಡೋದನ್ನ ಬಿಡಬೇಕು. ತಂಪು ಪಾನೀಯ, ಕೂಲ್ ಡ್ರಿಂಕ್ಸ್ ಹೆಚ್ಚು ಕುಡಿಯಬಾರದು. ಶುದ್ಧವಾದ ನೀರನ್ನ ಹೆಚ್ಚು ಕುಡಿಯಬೇಕು.

- Advertisement -

Latest Posts

Don't Miss