Friday, September 20, 2024

Latest Posts

ನ್ಯಾಚುರಲ್ ಆಗಿ ಋತುಚಕ್ರವಾಗಬೇಕು ಅಂದ್ರೆ ಏನು ಮಾಡಬೇಕು..?

- Advertisement -

ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗಿ, ಸಡನ್‌ ಆಗಿ ಋತುಚಕ್ರ ಲೇಟ್ ಆಗೋದು ಆದ್ರೆ , ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಲೈಟ್ ಆಗಿ ಬೊಜ್ಜು ಬೆಳಿಯುತ್ತೆ. ಪಿಂಪಲ್ಸ್ ಹೆಚ್ಚಾಗತ್ತೆ. ಕೂದಲು ಕೂಡ ಉದುರೋಕ್ಕೆ ಶುರುವಾಗತ್ತೆ. ಹಾಗಾದ್ರೆ ಋತುಚಕ್ರ ನ್ಯಾಚುರಲ್ ಆಗಿ, ಸರಿಯಾದ ಸಮಯಕ್ಕೆ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ಇಂದಿನ ಕಾಲದ ಹಲವು ಹೆಣ್ಣು ಮಕ್ಕಳ ಸಮಸ್ಯೆ ಅಂದ್ರೆ ಸರಿಯಾದ ಸಮಯಕ್ಕೆ ಋತುಚಕ್ರವಾಗದಿರುವುದು. ಹಿಂದಿನ ಕಾಲದಲ್ಲಿ, ಹೆಣ್ಣು ಮಕ್ಕಳು ಮನೆಯಲ್ಲಿ ಅಡುಗೆ ತಯಾರಿಸಿ, ಊಟ ಮಾಡುತ್ತಿದ್ದರು. ಮನೆಗೆಲಸ ಮಾಡಿಯೇ, ಆವರಿಗೆ ವ್ಯಾಯಮವಾಗುತ್ತಿತ್ತು. ಹಾಗಾಗಿ ಅಂಥ ಕಾಲದಲ್ಲಿ ಬೊಜ್ಜು ಬೆಳೆಯುತ್ತಿರಲಿಲ್ಲ. ಮುಟ್ಟಿನ ಸಮಸ್ಯೆಯೂ ಬರುತ್ತಿರಲಿಲ್ಲ.

ಗೋಧಿಕಡಿ ಪಾಯಸ ರೆಸಿಪಿ

ಆದ್ರೆ ಇಂದಿನ ಕಾಲದವರ ಆಹಾರ ಕ್ರಮ ಬದಲಾಗಿದೆ. ಜಂಕ್ ಫುಡ್ ಹೆಚ್ಚು ತಿನ್ನುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ ಮಾಡಲಾಗುತ್ತಿಲ್ಲ. ಮನೆಗೆಲಸ ಮಾಡಲು ಯಾರಿಗೂ ಪುರುಸೊತ್ತಿಲ್ಲ. ಹಾಗಾಗಿ ಪಿಸಿಓಡಿ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನಾವಿಂದು ನ್ಯಾಚುರಲ್ ಆಗಿ ಪಿರಿಯಡ್ಸ್ ಆಗ್ಬೇಕು ಅಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ. ನಾವು ಹೇಳುವ ಟಿಪ್ಸ್ ನೀವು ಸರಿಯಾಗಿ ಫಾಲೋ ಮಾಡಿದ್ರೆ, ನ್ಯಾಚುರಲ್ ಆಗಿ ಪಿರಿಯಡ್ಸ್ ಆಗತ್ತೆ.

ಮೊದಲನೇಯದಾಗಿ ಉತ್ತಮ ಆಹಾರ ಸೇವನೆ ಬಹಳ ಮುಖ್ಯ. ಮೂರು ತಿಂಗಳು ಸರಿಯಾಗಿ ಡಯಟ್‌ ಮಾಡಿದ್ರೆ, ನಿಮ್ಮ ತೂಕ ಕೊಂಚ ಇಳಿಯುತ್ತೆ. ತೂಕವನ್ನು ಸರಿಯಾಗಿ ಮೆಂಟೇನ್ ಮಾಡಿ. ಅನ್ನ, ಮೈದಾ, ಸಕ್ಕರೆ, ಇವನ್ನ ಸಂಪೂರ್ಣವಾಗಿ ತ್ಯಜಿಸಿಬಿಡಿ. ಚಪಾತಿ, ದೋಸೆ, ಇಡ್ಲಿ, ರೊಟ್ಟಿ, ಸೂಪ್, ದಾಲ್, ಮೊಸರು, ತುಪ್ಪ, ಡ್ರೈಫ್ರೂಟ್ಸ್, ಎಳನೀರು, ಜ್ಯೂಸ್, ಮೊಳಕೆ ಕಾಳು, ಹಸಿರು ಸೊಪ್ಪು, ಹಸಿ ತರಕಾರಿ ಇವೆಲ್ಲವನ್ನೂ ತಪ್ಪದೇ ತಿನ್ನಿ. 3 ತಿಂಗಳು ಜಂಕ್ ಫುಡ್ ತಿನ್ನಲೇಬೇಡಿ.

ಟೂತ್ ಪೇಸ್ಟ್ ಬಳಸುವ ಬದಲು ಇದನ್ನು ಬಳಸಿ..

ಎರರಡನೇಯದಾಗಿ ಯೋಗಾಸನ ಮಾಡಿ. ಪರ್ಯಂಕಾಸನ, ಭದ್ರಾಸನ, ಸರ್ವಾಂಗಾಸನ ಮಾಡುವುದು ತುಂಬಾ ಉತ್ತಮ. ಧ್ಯಾನ, ಪ್ರಾಣಾಯಾಮ ಮಾಡುವುದನ್ನ ಮರಿಯಬೇಡಿ. ಜೊತೆಗೆ ಹಿಪ್ ಬಾತ್, ಅಶ್ವಿನಿ ಮುದ್ರೆ ಮಾಡುವುದನ್ನ ಮರೆಯಬೇಡಿ. ಹಿಪ್‌ ಬಾತ್ ಅಂದ್ರೆ, ಒಂದು ಟಬ್‌ನಲ್ಲಿ ಕೊಂಚ ಬಿಸಿಯಾದ ನೀರು ಹಾಕಿ, ಅದರಲ್ಲಿ ಕುಳಿತುಕೊಳ್ಳಿ. ಈ ಹಿಪ್ ಬಾತ್ ಮತ್ತು ಅಶ್ವಿನಿ ಮುದ್ರೆಯನ್ನು ಮಾಡಿದವರು, ಉತ್ತಮ ರಿಸಲ್ಟ್ ಪಡೆದಿದ್ದಾರೆ.

ಮಾವಿನ ಹಣ್ಣು, ಪಪ್ಪಾಯಿ ಹಣ್ಣು ತಿನ್ನುವುದರಿಂದ ನ್ಯಾಚುರಲ್ ಆಗಿ ಪಿರಿಯಡ್ಸ್‌ ಆಗಬಹುದು. ಆದ್ರೆ ಇದರ ಸೇವನೆ ಮಿತವಾಗಿರಲಿ. ಆದ್ರೆ ಯಾವುದೇ ಕಾರಣಕ್ಕೂ ನೀವು ನ್ಯಾಚುರಲ್ ಆಗಿರ ಪಿರಿಯಡ್‌ಸ್ ಆಗ್ಲಿ ಅಂತಾ, ಸಿಕ್ಕ ಸಿಕ್ಕ ಮಾತ್ರೆಗಳನ್ನ ತೆಗೆದುಕೊಳ್ಳಬೇಡಿ. ವೈದ್ಯರ ಬಳಿ ಚಿಕಿತ್ಸೆ ಪಡೆದ ಬಳಿಕ, ಅವರು ಸೂಚಿಸಿದ ಗುಳಿಗೆಯನ್ನೇ ತೆಗೆದುಕೊಳ್ಳಿ.

ಸಿಂಪಲ್ ಮ್ಯಾಂಗೋ ಕುಲ್ಫಿ ರೆಸಿಪಿ..

- Advertisement -

Latest Posts

Don't Miss