Hubli News: ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಯ ಗಮನಕ್ಕೆ, ಚಿಗರಿ ಬಸ್ ನಲ್ಲಿ ಸಂಚಾರ ಮಾಡುವವರು ಈ ಸುದ್ದಿಯನ್ನು ನೋಡಲೇಬೇಕು. ಇಂದು ಮಧ್ಯಾಹ್ನ ಅಪ್ಪಿತಪ್ಪಿ ಚಿಗರಿ ಬಸ್‌ಗಾಗಿ ಕಾಯ್ತಾ ಕುಳಿತಿದ್ದರೆ ಹುಷಾರ್. ಯಾಕೆಂದರೆ ಇವತ್ತು ಮಧ್ಯಾಹ್ನದಿಂದ ಚಿಗರ್ ಬಸ್ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು.
ಹೌದು, ಇಂದು ಗೌರವಾನ್ವಿತ ಉಪರಾಷ್ಟ್ರಪತಿಗಳು ಜಗದೀಪ ಧನಕರ್, ಧಾರವಾಡದ ಐಐಟಿ ಕ್ಯಾಂಪಸ್‌ನಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆಗಾಗಿ ಆಗಮಿಸಲಿದ್ದು, ಭದ್ರತೆಯ ದೃಷ್ಟಿಯಿಂದ ಅವರ ವಾಹನಗಳು ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಂಚರಿಸಲಿವೆ. ಅದಕ್ಕಾಗಿ ಇಂದು ಮಾರ್ಚ್ 1 ಶುಕ್ರವಾರ ಮಧ್ಯಾಹ್ನ 1ರಿಂದ ಸಂಜೆ 4 ರವರೆಗೆ ಚಿಗರಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆಂದು ವಾಕರಸಾಸಂ ಪ್ರಕಟಣೆಯಲ್ಲಿ ತಿಳಿಸಿದೆ. ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಈ ಅವಧಿಯಲ್ಲಿ ಬಸ್‌ಗಳ ಸಂಚಾರ ಸ್ಥಗಿತವಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಕೋರಿದೆ.
ದೇಶದ ಜನ ಬಿಜೆಪಿಗೆ ಯಾಕೆ ಓಟ್ ಹಾಕಬೇಕು..? ಸಿ.ಟಿ.ರವಿ ಹೇಳಿದ್ದೇನು..?
ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು
ಇಂಥ ಆದೇಶ ನೀಡಿರುವ ಕಾಂಗ್ರೆಸ್ ವಿಕೃತ ಮನಸ್ಥಿತಿಯ ಪ್ರತೀಕ: ಸಂಸದ ತೇಜಸ್ವಿ ಸೂರ್ಯ




