ಸಿನಿಮಾ : ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಕಂಟೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದ ಗರುಡ ಗಮನ ವೃಷಭ ವಾಹನ ಸಿನಿಮಾ(Garuda is the focus of Taurus Vehicle Cinema)ಜೀ5ನಲ್ಲಿ ಇಂದಿನಿಂದ ಸ್ಟ್ರೀಮ್ ಆಗಲಿದೆ. ಕಳೆದ ನವೆಂಬರ್ 19ರಂದು ಥಿಯೇಟರ್ ಗೆ ಲಗ್ಗೆ ಇಟ್ಟ ‘ಗರುಡ ಗಮನ ವೃಷಭ ವಾಹನ’ ಸಿನಿಮಾವು ನೋಡುಗರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ‘ಒಂದು ಮೊಟ್ಟೆಯ ಕಥೆ'(ondu motteya kate) ಥರದ ಕಾಮಿಡಿ ಸಿನಿಮಾ ಮಾಡಿದ್ದ ರಾಜ್ ಬಿ. ಶೆಟ್ಟಿ, ಇಂಥದ್ದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದರಲ್ಲೂ ಅವರು ಮಾಡಿದ್ದ ಶಿವ ಪಾತ್ರ ಸಖತ್ ರಗಡ್ ಆಗಿ ಮೂಡಿಬಂದಿತ್ತು. ರಾಜ್ ಬಿ. ಶೆಟ್ಟಿ(Raj b. Shetty)ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್ ನೋಡುಗರಿಗೆ ಇಷ್ಟವಾಗಿತ್ತು. ಇದೀಗ ಈ ಸಿನಿಮಾವನ್ನು ಟಾಲಿವುಡ್ ಖ್ಯಾತ ನಿರ್ಮಾಪಕ ದೇವ ಕಟ್ಟ(Tollywood is a famous producer deva katta)ಮೆಚ್ಚುಕೊಂಡಿದ್ದಾರೆ. ಟಾಲಿವುಡ್ ಸೇರಿದಂತೆ ಬಾಲಿವುಡ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿರುವ ದೇವ ಕಟ್ಟಾ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 2021ರ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ ಗರಡುಗಮನ ವೃಷಭ ವಾಹನ. ನನಗೆ ಆಸ್ಕರ್ ಗೆ ಸಿನಿಮಾ ಆಯ್ಕೆ ಮಾಡುವ ಪವರ್ ಇದ್ದಿದ್ದರೇ ಈ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೆ. ಗರಡು ಗಮನ ವೃಷಭ ವಾಹನ ಸಿನಿಮಾವನ್ನು ನನ್ನ ಸ್ನೇಹಿತರ ಜೊತೆ ನೋಡಿದೆ. ಫಿಲ್ಮಂ ಮೇಕಿಂಗ್ ಅದ್ಭುತವಾಗಿದೆ. ಕೆಲ ದಿನ ಬಳಿಕ ಥಿಯೇಟರ್ ಗೆ ಹೋದಾಗ ಸಿನಿಮಾ ಇರಲಿಲ್ಲ. ಹೀಗಾಗಿ ಬೇಸರ ಆಯ್ತು. ಈಗ ಜೀ5(zee5) ಫ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ ಬಿ ಶೆಟ್ಟಿ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೆ ಇಷ್ಟು ಆಗುತ್ತೆ ಮಿಸ್ ಮಾಡದ್ದೇ ಎಲ್ಲರೂ ನೋಡಿ ಎಂದಿದ್ದಾರೆ ದೇವ್.ಸದ್ಯ ಜೀ5ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್(shivarajkumar) ನಟಿಸಿದ್ದ ‘ಭಜರಂಗಿ 2′(Bajrangi 2)ಒಳ್ಳೆಯ ಪ್ರಶಂಸೆ ಪಡೆದುಕೊಂಡಿದೆ. ಹಾಗೆಯೇ, ರವಿಚಂದ್ರನ್ ‘ಕನ್ನಡಿಗ’ ಕೂಡ ಸೌಂಡು ಮಾಡಿದೆ. ಈಗ ‘ಗರುಡ ಗಮನ ವೃಷಭ ವಾಹನ’ ಸಿನಿಮಾವೂ ಜೀ5 ಸೇರಿಕೊಂಡಿದ್ದು, ಪ್ರತಿ ಪ್ರೇಕ್ಷಕ ಮನೆ ಮನ ತಲುಪಲಿದೆ. ಹಾಗಿದ್ರೆ ಮತ್ಯಾಕೆ ತಡ ಜೀ5 ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ.