ನೀವು ಬೇರೆ ಬೇರೆ ತರಹದ ಟೊಮೆಟೋ ಚಟ್ನಿಯನ್ನ ಟೇಸ್ಟ್ ಮಾಡಿರಬಹುದು. ಆದ್ರೆ ಇಂದು ನಾವು ಹೇಳುವ ರೀತಿ ಟೊಮೆಟೋ ಚಟ್ನಿ ತಯಾರಿಸಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಮತ್ತು ತಯಾರಿಸೋದು ಕೂಡಾ ಸಿಂಪಲ್. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು.? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ಸ್ಪೂನ್ ಎಣ್ಣೆ, 4 ಟೊಮೆಟೋ, 10 ಎಸಳು ಬೆಳ್ಳುಳ್ಳಿ, 3 ಒಣಮೆಣಸು, 1 ಹಸಿಮೆಣಸು, ಒಂದು ಇಂಚು ಶುಂಠಿ, ಚಿಟಿಕೆ ಅರಿಶಿನ. ಖಾರದ ಪುಡಿ, ಕೊಂಚ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ 2 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆ ಬೇಳೆ, ಕರಿಬೇವು.
ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ, ಸಣ್ಣಗೆ ಕತ್ತರಿಸಿದ 5 ಎಸಳು ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಒಣ ಮೆಣಸು ಹಾಕಿ ಹುರಿಯಿರಿ. ಬಳಿಕ ಟೊಮೆಟೋ ಉಪ್ಪು, ಬೆಲ್ಲ ಹಾಕಿ ಹುರಿಯಿರಿ. ಈ ಮಿಶ್ರಣವನ್ನು ತಣಿಸಿ, ಚಟ್ನಿ ತಯಾರಿಸಿ. ನಂತರ ಮತ್ತೆ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಬೆಳ್ಳುಳ್ಳಿ, ಖಾರದ ಪುಡಿ ಹಾಕಿ ಹುರಿಯಿರಿ. ನಂತರ ಟೊಮೆಟೋ ಪೇಸ್ಟ್ ಸೇರಿಸಿ. ಚೆನ್ನಾಗಿ ಹುರಿದರೆ, ಟೊಮೆಟೋ ಚಟ್ನಿ ರೆಡಿ.