Recipe: ಯಾರಾದರೂ ಅತಿಥಿ ಬಂದಾಗ, ಪಟ್ ಅಂತಾ ಅಡಿಗೆ ಮಾಡಬೇಕು ಅಂದ್ರೆ, ಹೆಣ್ಣು ಮಕ್ಕಳಿಗೆ ನೆನಪಿಗೆ ಬರೋದೇ, ಅನ್ನ ರಸಂ. ಜೊತೆಗೆ ತುಪ್ಪ, ಉಪ್ಪಿನಕಾಯಿ, ಹಪ್ಪಳ. ಆದರೆ ರಸಂ ಮಾಡಲು ಸ್ವಲ್ಪ ಸಮಯ ತಾಕುತ್ತದೆ. ಆದರೆ ನಾವಿಂದು ಕುಕ್ಕರ್‌ನಲ್ಲೇ ಬೇಗ ಟೊಮೆಟೋ ರಸಂ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ನಿಮಗೆ ಬೇಕಾದಷ್ಟು ತೊಗರಿ ಬೇಳೆಯನ್ನು 15 ನಿಮಿಷ ಬಿಸಿ ನೀರಿನಲ್ಲಿ ನೆನೆಸಿಡಿ. ಬಳಿಕ ನಾಲ್ಕು ಟೊಮೆಟೋವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬೇಳೆಯೊಂದಿಗೆ ಕುಕ್ಕರ್‌ಗೆ ಹಾಕಿ. ಜೊತೆಗೆ ಎಣ್ಣೆ, ಉಪ್ಪು, ಅರಿಶಿನ, ನೀರನ್ನು ಹಾಕಿ ವಿಶಲ್ ಬರಿಸಿ.
ಕೊಂಚ ಹೊತ್ತಿನ ಬಳಿಕ ಬೆಂದ ಮಿಶ್ರಣದಿಂದ ಟೊಮೆಟೋ ಸಿಪ್ಪೆಯನ್ನು ತೆಗೆದು ಎಲ್ಲವನ್ನೂ ಮ್ಯಾಶ್ ಮಾಡಿ. ಮತ್ತೆ ಗ್ಯಾಸ್ ಆನ್ ಮಾಡಿ, ನಾಲ್ಕು ಕರಿಬೇವಿನ ಸೊಪ್ಪು, ಕೊಂಚ ಬೆಲ್ಲ, ರಸಂ ಪುಡಿ, ಹಿಂಗು ಹಾಕಿ ಮಿಶ್ರಣವನ್ನು ಕುದಿಸಿ. ಬಳಿಕ ಎಣ್ಣೆ ಅಥವಾ ತುಪ್ಪ, ಕರಿಬೇವು, ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಹಾಕಿ ಒಗ್ಗರಣೆ ಕೊಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ, ರಸಂ ರೆಡಿ.
ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..
ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..