Sunday, September 15, 2024

Latest Posts

ಕುಡಿಯೋ ನೀರಿಗೂ ಹಾಹಾಕಾರ- ಚೆನ್ನೈಗೆ ಬಂತು ನೀರಿನ ರೈಲು..!!

- Advertisement -

ಚೆನ್ನೈ: ತಮಿಳುನಾಡಿನಾದ್ಯಂತ ಕುಡಿಯೋ ನೀರು ಸಿಗದೆ ಹೈರಾಣಾಗಿದ್ದ ಜನರಿಗೆ ನೀರು ಪೂರೈಸಲು ನಗರಕ್ಕೆ ನೀರು ತುಂಬಿದ ರೈಲು ಬಂದಿದೆ. ತಮಿಳುನಾಡು ಸಿಎಂ ಇಡಪ್ಪಾಡಿ ಪಳನಿಸ್ವಾಮಿ ರಾಜ್ಯದ ಜನರಿಗೆ ಈ ಮೂಲಕ ಕುಡಿಯೋ ನೀರು ಒದಗಿಸಲಿದ್ದಾರೆ.

ತಮಿಳುನಾಡಿನಾದ್ಯಂತ ಮಳೆಯ ಕೊರತೆಯಿಂದಾಗಿ ಕುಡಿಯೋ ನೀರಿಗೂ ತತ್ವಾರ ಎದುರಾಗಿದೆ. ಇನ್ನು ಮಹಾನಗರಿ ಚೆನ್ನೈನಲ್ಲಂತೂ ನೀರಿನ ಬವಣೆ ಹೇಳತೀರದಾಗಿದೆ. ದಿನನಿತ್ಯದ ಬಳಕೆ ಸೇರಿದಂತೆ ನಗರವಾಸಿಗಳಿಗೆ ಕುಡಿಯೋ ನೀರು ಕೂಡ ಸಿಗದಂತಾಗಿದೆ. ಹೀಗಾಗಿ ಈ ಸಮಸ್ಯೆ ನಿವಾರಣೆಗೆ ಸಿಎಂ ಪಳನಿಸ್ವಾಮಿ ರೈಲು ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದಾರೆ.

ತಮಿಳುನಾಡಿನ ವೆಲ್ಲೂರಿನ ಜೊಲಾರ್ ಪೇಟ್ಟೈನಿಂದ ರೈಲಿಗೆ ನೀರು ತುಂಬಿಸಿ ಅಲ್ಲಿಂದ ಚೆನ್ನೈಗೆ ರವಾನಿಸುವ ವ್ಯವಸ್ಥೆ ಮಾಡಿದ್ದು ಸದ್ಯ ಒಂದು ಟ್ರಿಪ್ ನೀರು ಚೆನ್ನೈ ತಲುಪಿದೆ. 50 ವ್ಯಾಗನ್ ನಷ್ಟು ನೀರನ್ನು ಪ್ರತಿ ದಿನ ನಾಲ್ಕು ಬಾರಿ ರೈಲಿನಿಂದ ಪೂರೈಕೆ ಮಾಡುವ ಯೋಜನೆ ಇದಾಗಿದೆ. ಪ್ರತಿ ವ್ಯಾಗನ್ ನಲ್ಲಿ ಸುಮಾರು 50ಸಾವಿರ ಲೀಟರ್ ನೀರು ಇರಲಿದೆ. ಇನ್ನು ಪ್ರತಿ ಟ್ರಿಪ್ ನಲ್ಲಿ ಬರೋಬ್ಬರಿ 2.5 ಮಿಲಿಯನ್ ಲೀಟರ್ ನಷ್ಟು ನೀರು ಪೂರೈಕೆಯಾಗಿದ್ದು, ಪ್ರತಿ ಟ್ರಿಪ್ ಗೆ 8 ಕೋಟಿ 67 ಲಕ್ಷ ಸಾರಿಗೆ ವೆಚ್ಚ ತಗುಲಲಿದೆ. ಇನ್ನು ಚೆನ್ನೈ ರೈಲ್ವೇ ನಿಲ್ದಾಣದಿಂದ ಪೈಪ್ ಲೈನ್ ಮೂಲಕ ನೀರು ಸಂಸ್ಕರಣಾ ಘಟಕಕ್ಕೆ ನೀರನ್ನು ಹರಿಬಿಟ್ಟು, ಅಲ್ಲಿಂದ ಶುದ್ಧೀಕರಿಸಿದ ಬಳಿಕ ಜನರ ಬಳಕೆಗೆ ನೀರನ್ನು ಪೂರೈಕೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಹನಿ ನೀರಿಗಾಗಿ ಪರದಾಡುತ್ತಿರೋ ಜನರ ಸಮಸ್ಯೆ ನೀಗಿಸಲು ಸಿಎಂ ಈ ಕ್ರಮ ತೆಗೆದುಕೊಂಡಿರೋದು ಶ್ಲಾಘನೀಯ. ಹೀಗಾಗಿ ಮನಸೋಇಚ್ಛೆ ನೀರನ್ನು ಪೋಲುಮಾಡೋ ಬದಲು ನೀರನ್ನು ಉಳಿಸಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ನೋಡಿಕೊಳ್ಳೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ನಿಮ್ಮ ಬಳಿ ವಾಹನ ಇದೆಯಾ..? ಹಾಗಾದ್ರೆ ನೀವು ಈ ವಿಡಿಯೋ ಮಿಸ್ ಮಾಡದೇ ನೋಡಿ

https://www.youtube.com/watch?v=hDRhiUfXvnA

- Advertisement -

Latest Posts

Don't Miss