ಡಿಸೇಲ್ ಬೆಲೆ ಏರಿಕೆಗೆ ಬೆಚ್ಚಿದ ಸಾರಿಗೆ ಸಂಸ್ಥೆ: ಆರ್ಥಿಕ ಸಂಕಷ್ಟದ ನಡುವೆ ಮತ್ತೊಂದು ಬರೆ..!

Hubli News: ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಡೀಸೆಲ್‌ ಮಾರಾಟ ತೆರಿಗೆ ಹೆಚ್ಚಳ ಬಿಸಿ ತಟ್ಟಿದೆ. ಪ್ರತಿ ತಿಂಗಳು 3 ಕೋಟಿ ಹೆಚ್ಚುವರಿ ಹೊರೆಯಾಗುತ್ತಿದೆ. ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ಹೊಡೆತ ಬಿದ್ದಿದೆ. ಅಷ್ಟೇ ಅಲ್ಲದೇ ಸ್ವತಃ ಸರಕಾರದ ಅಂಗ ಸಂಸ್ಥೆಯಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೊಡೆತ ಬೀಳುತ್ತಿದೆ.

ದಿನವೊಂದಕ್ಕೆ ಅಂದಾಜು 9 ಲಕ್ಷ ರೂಪಾಯಿ ಹೆಚ್ಚುವರಿ ಹೊರೆಯಾಗುತ್ತಿದೆ. ರಾಜ್ಯ ಸರಕಾರದ ಶಕ್ತಿ ಯೋಜನೆ, ನಾಲ್ಕು ವರ್ಷದಿಂದ ಬಸ್ ದರ ಏರಿಕೆಯಾಗದಿರುವುದರಿಂದ ವಾಕರಸಾ ಸಂಸ್ಥೆಗೆ ಸದ್ಯ ಆರ್ಥಿಕವಾಗಿ ಸಾಕಷ್ಟು ಹೊಡೆತ ಬಿದ್ದಿದೆ. ಸಂಸ್ಥೆ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇಂತಹ ಸಮಯದಲ್ಲಿ ರಾಜ್ಯ ಸರಕಾರ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 3 ರೂಪಾಯಿ ಹಾಗೂ ಡೀಸೆಲ್ 3.50 ರೂ. ಏರಿಕೆ ಮಾಡಿದೆ. ಇದು ಮತ್ತೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಾಂಸ್ಥೆ ಸರಕಾರದ ಕಡೆಗೆ ಎದುರು ನೋಡುವಂತ್ತಾಗಿದೆ. ದಿನವೊಂದಕ್ಕೆ 9 ಲಕ್ಷ ರೂಪಾಯಿ ಹೊರೆಯಾಗಿರುವುದರಿಂದ ಸಂಸ್ಥೆ ಮತ್ತಷ್ಟು ಆರ್ಥಿಕ ಕುಸಿತಕ್ಕೆ ಒಳಗಾಗಲಿದೆ.

ಇನ್ನೂ ಸುಮಾರು 22 ಸಾವಿರ ನೌಕರರ ವೇತನ, ವಾಹನಗಳ ನಿರ್ವಹಣೆ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗೆ ಆರ್ಥಿಕ ಹೊಡೆತ ಬೀಳಲಿದೆ. ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ ವ್ಯಾಪ್ತಿಯ ವಾಕರಸಾ ಸಂಸ್ಥೆಯಲ್ಲಿ ಒಟ್ಟು 5 ಸಾವಿ ಬಸ್‌ಗಳ ಸಂಖ್ಯೆ ಇದೆ. ಇದರಲ್ಲಿ ಒಟ್ಟು 4500 ಸ್ಕೆಡ್ಯೂಲ್‌ನಲ್ಲಿ ಬಸ್ ಸಂಚಾರ ನಡೆಯುತ್ತದೆ. 6 ಜಿಲ್ಲೆಯ 9 ವಿಭಾಗದಲ್ಲಿ 4610 ಹಳ್ಳಿಗಳನ್ನು ಸಾರಿಗೆ ಬಸ್‌ಗಳು ಸಂಚಾರ ಮಾಡಲಿವೆ. ಒಟ್ಟು 15 ರಿಂದ 16 ಲಕ್ಷ ಕಿಲೋ ಮೀಟರ್ ಸಂಚಾರ ಮಾಡಲಿದ್ದು, ದಿನಕ್ಕೆ 24 ರಿಂದ 25 ಲಕ್ಷ ಜನ ಸಂಚಾರ ಮಾಡಲಿದ್ದಾರೆ. ಒಂದು ಬಸ್ 1 ಲೀಟರ್‌ಗೆ ಐದು ಕಿಮೀ ಸಂಚಾರ ಮಾಡಲಿದೆ. ಒಟ್ಟಾರೆ ಸಂಸ್ಥೆಯ ಬಸ್‌ಗಳಿಗೆ ಒಂದು ದಿನಕ್ಕೆ 3 ಲಕ್ಷ ಲೀಟರ್ ತೈಲ ಬಳಸುತ್ತಿದ್ದು, ಸದ್ಯ ಸರಕಾರ 3 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಒಂದು ದಿನಕ್ಕೆ 9 ಲಕ್ಷ ರೂಪಾಯಿಯಂತೆ ಒಂದು ತಿಂಗಳಿಗೆ ಒಟ್ಟು 3 ಕೋಟಿ ರೂಪಾಯಿ ಹೆಚ್ಚುವರಿಯಾಗಿ ವಾಕರಸಾ ಸಂಸ್ಥೆಗೆ ಹೊರೆ ಬೀಳಲಿದೆ.

ರಷ್ಯಾದ ಚರ್ಚ್ ಮೇಲೆ ಭಯೋತ್ಪಾದಕ ದಾಳಿ: 15 ಪೊಲೀಸರು ಸೇರಿ ಹಲವರ ಸಾವು

ಈಗ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ಮನೆ ಮೇಲೂ ಅಟ್ಯಾಕ್‌ ಮಾಡಲಿದೆ ಬುಲ್ಡೋಜರ್

ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

About The Author