Health Tips: ಜ್ವರ ಬಂತೆಂದರೆ ಕೆಲವರು ಮನೆ ಮದ್ದು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಮನನೆಯಲ್ಲಿರುವ ಯಾವುದಾದರೂ ಗುಳಿಗೆ ತೆಗೆದುಕೊಳ್ಳುತ್ತಾರೆ. ಆದರೆ ಹೀಗೆ ನಿರ್ಲಕ್ಷ್ಯ ಮಾಡಿದಾಗಲೇ, ಜ್ವರದ ಸೈಡ್ ಎಫೆಕ್ಟ್ ಜೋರಾಗುತ್ತದೆ. ಹಾಗಾಗಿ ಜ್ವರದ ಕಾರಣ ತಿಳಿಯದೇ, ನಾವು ಮನೆಯಲ್ಲೇ ಚಿಕಿತ್ಸೆ ಪಡೆಯಬಾರದು. ವೈದ್ಯರ ಬಳಿ ಹೋಗಬೇಕು. ಯಾಕೆ ಅನ್ನೋ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..
ದೇಹದ ತಾಪಮಾನ ನೂರು ಡಿಗ್ರಿಗಿಂತ ಹೆಚ್ಚಿದ್ದರೆ, ಜ್ವರ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಮನೆಮದ್ದು ಮಾಡದೇ, ವೈದ್ಯರ ಬಳಿ ಹೋಗಿ, ಚಿಕಿತ್ಸೆ ಪಡೆಯಬೇಕು. ಜ್ವರದೊಂದಿಗೆ ಕೆಮ್ಮು, ಲೂಸ್‌ಮೋಷನ್, ವಾಮಿಟಿಂಗ್, ಉಸಿರಾಟದ ತೊಂದರೆ, ದೇಹದಲ್ಲಿ ಉರಿ, ದೆಹದಲ್ಲಿ ಅಲರ್ಜಿ ಇವೆಲ್ಲವೂ ಜ್ವರದೊಂದಿಗೆ ಬರುವ ಸಾಧ್ಯತೆ ಇರುತ್ತದೆ. ಇಂಥ ಸಮಯದಲ್ಲಿ ನಾವು ನಿರ್ಲಕ್ಷ್ಯ ವಹಿಸಲೇಬಾರದು.
ಇನ್ನು ಜ್ವರದ ಕಾರಣ ತಿಳಿಯದೇ ಚಿಕಿತ್ಸೆ ನೀಡಬಾರದು ಅಂತಾರೆ ವೈದ್‌ಯರು. ಜ್ವರ ಬಂದಿರಲು ಕಾರಣವೇನು, ಅಲರ್ಜಿಯಿಂದಾಗಿಯೂ ಜ್ವರ ಬರುತ್ತದೆ, ಏನಾದರೂ ದೊಡ್ಡ ಆರೋಗ್‌ಯ ಸಮಸ್ಯೆ ಬರುವುದಕ್ಕೂ ಮುನ್ನ ಜ್ವರ ಬರುತ್ತದೆ. ಹಾಗಾಗಿ ಕಾರಣ ತಿಳಿಯದೇ, ಮನೆಯಲ್ಲೇ ಮದ್ದು ಮಾಡಲು ಮೊದಲು, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿಗಾಗಿ ವೀಡಿಯೋ ನೋಡಿ..