International News: ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ಪ್ರಕರಣ ಅಂದ್ರೆ ಅದು ಪ್ರಜ್ವಲ್ ರೇವಣ್ಣ ಪ್ರಕರಣ. ಆದರೆ ಥೈಲ್ಯಾಂಡ್‌ನಲ್ಲಿ ಓರ್ವ ಮಹಿಳಾ ರಾಜಕಾರಣಿ ತನ್ನ ದತ್ತುಪುತ್ರನೊಂದಿಗೆ ಸರಸದಲ್ಲಿ ತೊಡಗಿರುವಾಗ, ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಆದರೆ ನಿಜವಾದ ಶಾಕಿಂಗ್ ವಿಷಯ ಅಂದ್ರೆ, ಆಕೆಯ ದತ್ತು ಪುತ್ರ ಸನ್ಯಾಸಿ ಅನ್ನೋದು.
ಇನ್ನು ಈಕೆ ದತ್ತುಪುತ್ರನೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. 45 ವರ್ಷದ ಪ್ರಪಾಪೋರ್ನ್ ಚೋಯಿವಾಡ್ಕೋ ತನ್ನ ದತ್ತುಪುತ್ರನಾದ 24 ವರ್ಷದ ಫ್ರಾ ಮಹಾ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಇದರ ಬಗ್ಗೆ ಪತಿಗೆ ಈ ಮೊದಲೇ ಸಂಶಯವಿತ್ತು. ಹಾಗಾಗಿ ಆತ ಓರ್ವ ಪತ್ರಕರ್ತನಿಗೆ ಈ ಬಗ್ಗೆ ತಿಳಿಸಿ, ಆಕೆಯನ್ನು ರೆಡ್‌ಹ್ಯಾಂಡಾಗಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಬೇಕು ಎಂದಿದ್ದ. ಹಾಗಾಗಿ ಆ ಪತ್ರಕರ್ತ ಈಕೆಯ ಹಿಂದೆ 5 ಗಂಟೆಗಳ ಕಾಲ ಕಾರ್‌ನಲ್ಲಿ ಹಿಂಬಾಲಿಸಿದ್ದಾನೆ.
ಬಳಿಕ ಆಕೆ ದತ್ತು ಪುತ್ರನ ಬಳಿ ಹೋದಾಗ, ಆಕೆಯ ಸುದ್ದಿಯನ್ನು ಪತಿಗೆ ಮುಟ್ಚಿಸಿದ್ದಾನೆ. ಈ ಮೂಲಕ ತಾಯಿ ಮತ್ತು ದತ್ತು ಪುತ್ರನ ರಾಸಲೀಲೆ ಸಮಾಜದ ಎದುರು ಬಹಿರಂಗವಾಗಿದೆ. ಫ್ರಾನನ್ನು ಈ ದಂಪತಿ ಒಂದು ವರ್ಷದ ಹಿಂದೆಯಷ್ಟೇ ದತ್ತು ಪಡೆದಿದ್ದರು. ಆದರೆ ಈಕೆಗೆ ಆ ವ್ಯಕ್ತಿಯ ಬಗ್ಗೆ ಮಗ ಎನ್ನುವ ಮಮಕಾರಕ್ಕಿಂತ, ಆತನ ಮೇಲೆ ಮೋಹವಿತ್ತು. ಇದೀಗ ಇವರಿಬ್ಬರ ಬಣ್ಣ ಬಯಲಾಗಿದ್ದು, ಸನ್ಯಾಸಿ ಪುತ್ರ ತಲೆಮರೆಸಿಕೊಂಡಿದ್ದಾನೆ.
ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಮಾಡಿದ ದ್ರೌಪದಿ ಮುರ್ಮು