ಮಳೆಗಾಲದಲ್ಲಿ ಎಷ್ಟೇ ಆರೋಗ್ಯದ ಬಗ್ಗೆ ಕಾಳಜಿ ಮಾಡಿದರೂ ಕಡಿಮೆಯೇ. ಈ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನೇ ಹೆಚ್ಚಾಗಿ ತಿನ್ನಬೇಕು. ನಾವಿಂದು ಗೋಧಿ ಲಾಡು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಅರ್ಧ ಕಪ್ ರವಾ, ಒಂದು ಬೌಲ್ ಗೋಧಿ ಹಿಟ್ಟು, ಅರ್ಧ ಕಪ್ ತುರಿದ ಒಣಕೊಬ್ಬರಿ, ಅರ್ಧ ಕಪ್ ಸಣ್ಣಗೆ ಕತ್ತರಿಸಿದ ಗೋಡಂಬಿ, ಬಾದಾಮಿ, ಪಿಸ್ತಾ, ಅರ್ಧ ಕಪ್ ಬೆಲ್ಲದ ಪುಡಿ ಅಥವಾ ಸಕ್ಕರೆ ಪುಡಿ.
ಮಾಡುವ ವಿಧಾನ: ಪ್ಯಾನ್‌ಗೆ ತುಪ್ಪ ಹಾಕಿ, ರವಾ ಮತ್ತು ಗೋಧಿ ಹಿಟ್ಟು ಚೆನ್ನಾಗಿ ಹುರಿದುಕೊಳ್ಳಿ. ಘಮ ಬರೆವವರೆಗೂ ಹುರಿದು, ಬಳಿಕ ಒಣಕೊಬ್ಬರಿ ಸೇರಿಸಿ. ಕೊನೆಗೆ ಡ್ರೈಫ್ರೂಟ್ಸ್, ಬೆಲ್ಲದ ಪುಡಿ ಅಥವಾ ಸಕ್ಕರೆ ಪುಡಿ ಸೇರಿಸಿ, ಲಾಡು ತಯಾರಿಸಿ.
ಹೆಣ್ಣು ಮಕ್ಕಳು ತಮ್ಮ ಆರೋಗ್ಯಾಭಿವೃದ್ಧಿಗೆ ಸೇವಿಸಲೇಬೇಕಾದ ಆಹಾರಗಳಿವು..




