ಮನುಷ್ಯ ದುಡಿಯೋದೇ, ದುಡ್ಡು, ನೆಮ್ಮದಿ, ಖುಷಿಯ ಜೀವನಕ್ಕಾಗಿ. ಆದ್ರೆ ಕೆಲವರಿಗೆ ದುಡ್ಡಿದ್ದರೆ ನೆಮ್ಮದಿಯಿರೋದಿಲ್ಲಾ, ಇನ್ನು ಕೆಲವರಿಗೆ ಇರುವ ಕಡಿಮೆ ಹಣದಲ್ಲಿಯೇ ಖುಷಿಯಾಗಿರುತ್ತಾರೆ. ಆದ್ರೆ ಜೀವನದಲ್ಲಿ ನಾವು ಕೆಲ ಖುಷಿಯನ್ನು ಕಂಡುಕೊಂಡಾಗ ಮಾತ್ರ ನಾವು ನೆಮ್ಮದಿಯಿಂದಿರಲು ಸಾಧ್ಯ. ಹಾಗಾದ್ರೆ ನಾವು ಯಾವ ಖುಷಿಯನ್ನು ಕಂಡುಕೊಳ್ಳಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಖುಷಿ ಉತ್ತಮವಾಗಿ ಮಾತನಾಡುವ ಯೋಗ್ಯತೆ ನಿಮಗಿರಲಿ. ಕೆಲವು ಶ್ರೀಮಂತರಿಗೆ ಎಲ್ಲಿ ಹೇಗೆ ಮಾತನಾಡಬೇಕು. ಎಷ್ಟು ಮಾತನಾಡಬೇಕು ಅನ್ನೋ ಜ್ಞಾನವಿರುವುದಿಲ್ಲ. ಆದ್ರೆ ಬಡವನಾದವ ತನ್ನ ಸುಂದರ ಮಾತಿನಿಂದಲೇ, ಎಲ್ಲರನ್ನೂ ಸೆಳೆಯುವ ಅರ್ಹತೆ ಹೊಂದಿರುತ್ತಾನೆ. ಹಾಗಾಗಿ ಹಿರಿಯರು ಬೆಲ್ಲ ಇಲ್ಲದಿದ್ದರೂ, ಬೆಲ್ಲದಂಥ ಮಾತು ಬೇಕು ಅಂತಾ ಹೇಳಿರೋದು. ಯಾರು ಸುಂದರವಾಗಿ, ತಾಳ್ಮೆಯಿಂದ ಮಾತನಾಡುತ್ತಾರೋ, ಅವರು ನೆಮ್ಮದಿಯಾಗಿರುತ್ತಾರೆ. ಎಲ್ಲರೂ ಅಂಥವರನ್ನ ಇಷ್ಟ ಪಡುತ್ತಾರೆ.
ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?
ಎರಡನೇಯ ಖುಷಿ ಉತ್ತಮ ಆಹಾರ ನೀರು ಸಿಗುವಷ್ಟು ಯೋಗ್ಯತೆ ನಿಮಗಿರಲಿ. ಹಲವರು ಕಷ್ಟಪಟ್ಟು ದುಡಿಯುತ್ತಾರೆ. ಆದ್ರೆ ಸಮಯಕ್ಕೆ ಸರಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ. ತಿನ್ನಲು ಸಾಧ್ಯವಾದ್ರೂ ಆರೋಗ್ಯಕರ ಆಹಾರ ತಿನ್ನಲು ಕೊರತೆ ಇರತ್ತೆ. ಹಾಗಾಗಿ ನೀವು ಕಡಿಮೆ ಸಂಬಳಕ್ಕೆ ದುಡಿದರೂ, ಹೊತ್ತಿಗೆ ಸರಿಯಾಗಿ, ಆರೋಗ್ಯಕರ ಆಹಾರ ತಿನ್ನುವಷ್ಟು ಯೋಗ್ಯತೆ ಬೆಳೆಸಿಕೊಳ್ಳಿ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.
ಇಂಥ ಆಲೋಚನೆಗಳನ್ನ ಮಾಡೋದನ್ನ ಇಂದೇ ಬಿಟ್ಟುಬಿಡಿ..
ಮೂರನೇಯ ಖುಷಿ ಅತಿಯಾಸೆ ಪಡದೇ, ಇದ್ದುದರಲ್ಲೇ ಜೀವನ ಸಾಗಿಸುವ ಯೋಗ್ಯತೆ ನಿಮಗಿರಲಿ. ಕೆಲವರಿಗೆ ಎಷ್ಟಿದ್ದರೂ ಸಾಲುವುದಿಲ್ಲ. ಮತ್ತೂ ಬೇಕು ಮತ್ತೂ ಬೇಕು ಅನ್ನುವ ಸ್ವಭಾವದವರಿರುತ್ತಾರೆ. ಅಂಥವರಿಗೆ ಎಷ್ಟಿದ್ದರೂ ನೆಮ್ಮದಿ ಇರೋದಿಲ್ಲಾ. ಖುಷಿ ಪಡುವ ಜಾಯಮಾನವೇ ಅವರದ್ದಾಗಿರುವುದಿಲ್ಲ. ಹಾಗಾಗಿ ಇದ್ದುದರಲ್ಲೇ ಖುಷಿ ಪಡುವಂತಿರಿ. ಆಗಲೇ ನೀವು ಖುಷಿಯಿಂದ, ನೆಮ್ಮದಿಯಿಂದಿರಲು ಸಾಧ್ಯ.