Spiritual Story: ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸ್ಥಾನ ಪಡೆದಿರುವ ಗಿಡ ಅಂದ್ರೆ, ಅದು ತುಳಸಿ ಗಿಡ. ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ ಪೂಜೆ ಸಲ್ಲಿಸಲಾಗುತ್ತದೆ. ಹೆಣ್ಣು ಮಕ್ಕಳು ಮುಟ್ಟಿನ ದಿನದಲ್ಲಿ ತುಳಸಿ ಗಿಡವನ್ನು ಮುಟ್ಟುವಂತಿಲ್ಲ. ಹಾಗೇನಾದರೂ ಮುಟ್ಟಿದರೆ, ತುಳಸಿ ಗಿಡ ಬಾಡಿ ಹೋಗುತ್ತದೆ. ಅಲ್ಲದೇ ಮನೆಯಲ್ಲಿ ಏನಾದರೂ ದುರ್ಘಟನೆ, ಸಾವು ಸಂಭವಿಸುವ ಮುನ್ನ ತುಳಸಿ ಗಿಡ ಬಾಡಿ ಹೋಗುತ್ತದೆ. ಇಂಥ ಪವಿತ್ರ ಗಿಡವನ್ನು ನಾವು ಬೇರೆಯವರಿಗೆ ಉಡುಗೊರೆ ಕೊಡಬಹುದಾ..? ಬೇಡವಾ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಲವರು ಮನಿಪ್ಲ್ಯಾಂಟ್, ಬೇರೆ ಬೇರೆ ತರಕಾರಿ, ಹೂವಿನ ಗಿಡವನ್ನು ಗಿಫ್ಟ್ ಆಗಿ ನೀಡುತ್ತಾರೆ. ಆದರೆ ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡುವುದು ಕಡಿಮೆ. ಆದರೆ ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡಬಹುದು. ಇದರಿಂದ ನಿಮ್ಮ ಮನೆಯಲ್ಲೂ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಗಿಫ್ಟ್ ತೆಗೆದುಕೊಂಡವರ ಮನೆಯಲ್ಲೂ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ಒಂದು ಒಳ್ಳೆಯ ದಿನ ನೀವು ಒಣಗಿರದ, ಮುರಿದಿರದ ತುಳಸಿ ಗಿಡವನ್ನು ಗಿಫ್ಟ್ ಆಗಿ ನೀಡಬಹುದು. ಏಕಾದಶಿಯ ದಿನ ತುಳಸಿ ಗಿಡ ಗಿಫ್ಟ್ ನೀಡಬಹುದು. ಆದರೆ ನೀವು ನೀಡುವ ತುಳಸಿ ಗಿಡ ಸರಿಯಾಗಿ, ಆರೋಗ್ಯವಾಗಿರಬೇಕು. ಕೆಲವರು ಮನೆಯಲ್ಲಿ ಶುಭಕಾರ್ಯವಿದ್ದಾಗ, ಮನೆಗೆ ಬಂದ ಅತಿಥಿಗಳಿಗೆ ತುಳಸಿ ಗಿಡ ನೀಡುತ್ತಾರೆ. ಒಂದು ಪುಟ್ಟ ಕುಂಡದಲ್ಲಿ ತುಳಸಿ ಗಿಡ ನೆಟ್ಟು ಕೊಟ್ಟರೆ ಉತ್ತಮ.
ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆಯೋ, ಆ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಏಕೆಂದರೆ ಅಂಥ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಮನೆಯಲ್ಲಿ ನೆಮ್ಮದಿ ಮನೆ ಮಾಡಿರುತ್ತದೆ. ಕುಟುಂಬದಲ್ಲಿ ಖುಷಿ, ಸಂಭ್ರಮವಿರುತ್ತದೆ. ಹಾಗಾಗಿ ತುಳಸಿ ಗಿಡವನ್ನು ಉತ್ತಮವಾಗಿ ಆರೈಕೆ ಮಾಡಬೇಕು ಅಂತಾ ಹೇಳಲಾಗುತ್ತದೆ.