Saturday, August 9, 2025

Latest Posts

ಮಕ್ಕಳಿಗೆ 6 ತಿಂಗಳು ತುಂಬಿದ ಖುಷಿಗೆ ಹೊಸ ಫೋಟೋ ಶೇರ್ ಮಾಡಿದ ಅಮೂಲ್ಯಾ..

- Advertisement -

ನಟಿ ಅಮೂಲ್ಯಾ ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಅಲ್ಲದೇ ಹುಟ್ಟುಹಬ್ಬದ ಸಂಭ್ರಮ ಕೂಡ ಹೌದು. ಅವಳಿ ಗಂಡು ಮಕ್ಕಳಿಗೆ ತಾಯಿಯಾಗಿರುವ ಅಮೂಲ್ಯಾ, ಹೊಸ ಹೊಸ ಫೋಟೋ ಶೂಟ್ ಮಾಡಿಸಿ, ಅದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಇಂದೂ ಕೂಡ ಅಮೂಲ್ಯಾ, ತಮ್ಮ ಅವಳಿ ಮಕ್ಕಳಿಗೆ 6 ತಿಂಗಳು ತುಂಬಿದ್ದಕ್ಕಾಗಿ, ಹೊಸ ಫೋಟೋ ಶೂಟ್ ಮಾಡಿಸಿ, ಅದನ್ನ ಶೇರ್ ಮಾಡಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ಅಮೂಲ್ಯಾ, ನನ್ನ ಅವಳಿ ಹುಡುಗರೊಂದಿಗೆ 6 ತಿಂಗಳ ವಿಸ್ಮಯಕಾರಿಯಾಗಿ ಬೆರಗುಗೊಳಿಸುವ ಮಾತೃತ್ವದ ಪ್ರಯಾಣವು ಪವಾಡಕ್ಕಿಂತ ಕಡಿಮೆ ಏನಲ್ಲ. ಸರಿಯಾಗಿ ನಿದ್ದೆ ಇಲ್ಲದ ರಾತ್ರಿಗಳು, ಇಬ್ಬರೂ ಮಕ್ಕಳು ಗಂಟೆ ಗಟ್ಟಲೇ ಅಳುವುದು, 2 ಗಂಟೆಗೊಮ್ಮೆ ಅವರಿಗೆ ಆಹಾರ ನೀಡುವುದು, ಹಸಿವು, ಸಿಟ್ಟು ಇನ್ನೂ ಏನೇನೋ. ಆದರೆ  ನನ್ನಿಬ್ಬರು ಮಕ್ಕಳು ನನ್ನನ್ನು ನೋಡಿ, ಒಂದು ಮುಗುಳು ನಗೆ ನಕ್ಕಾಗ ಈ ಎಲ್ಲ ನೋವು, ಕಿರಿಕಿರಿ ಜಾದೂವಾಗಿ ಮಾರ್ಪಾಡಾಗುತ್ತಿತ್ತು. ಹ್ಯಾಪಿ 6ತ್ ಮಂಥ್ ನನ್ನ ಮುದ್ದು ಮಕ್ಕಳೇ ಎಂದು ಅಮೂಲ್ಯಾ ಬರೆದುಕೊಂಡಿದ್ದಾರೆ.

- Advertisement -

Latest Posts

Don't Miss