ಮದುವೆ ಯಾವಾಗಾ ಅಂತಾ ಕೇಳೋ ಆಂಟಿರಿಗೆ ಈ ಟೀ ಕುಡ್ಸಬೇಕಂತೆ..

ಸೋಶಿಯಲ್ ಮೀಡಿಯಾ ಅನ್ನೋದು ಹಲವರಿಗೆ ಉಪಯೋಗವಾಗುತ್ತಿರುವ, ಇನ್ನು ಕೆಲವರ ಕೈಯಲ್ಲಿ ದುರುಪಯೋಗವಾಗುವಂಥ ಪ್ಲ್ಯಾಟ್‌ಫರ್ಮ್ ಆಗಿದೆ. ಕೆಲವರು ಉಪಯೋಗಕ್ಕೆ ಬರುವ ವೀಡಿಯೋ ಹಾಕಿದ್ರೆ, ಇನ್ನು ಕೆಲವರು ಉಪಯೋಗಕ್ಕೆ ಬಾರದ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇನ್ನು ಕೆಲವರು ಫನ್ನಿ ವೀಡಿಯೋ ಅಪ್ಲೋಡ್ ಮಾಡ್ತಾರೆ. ಇಂಥ ವೀಡಿಯೊವೊಂದು ಈಗ ವೈರಲ್ ಆಗಿದೆ.

ಓರ್ವ ಯುವತಿ ಈ ವೀಡಿಯೋ ಮಾಡಿ ಟ್ವಿಟರ್‌ಗೆ ಹಾಕಿದ್ದು, ವೀಡಿಯೋ ಸಖತ್ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅಂಥಾದ್ದೇನಿದೆ ಅಂದ್ರೆ, ಮೆಣಸಿನಕಾಯಿ ಬಳಸಿ ಟೀ ಮಾಡಲಾಗಿದೆ. ಒಣಮೆಣಸನ್ನ ಒಂದು ಪಾತ್ರೆಗೆ ಹಾಕಿ, ಅದರೊಂದಿಗೆ ಹಾಲು ಕಾಯಿಸಲಾಗಿದೆ. ಹೀಗೆ ಕಾಯಿಸಿದ ಮೆಣಸಿನ ಹಾಲು, ಥೇಟ್ ಟೀ ಥರಾನೇ ಕಾಣಿಸುತ್ತೆ. ಇದಕ್ಕೆ ಆಕೆ ಚಿಲ್ಲಿ ಚಾಯ್ ಎಂದು ಹೆಸರಿಟ್ಟಿದ್ದಾಳೆ.

ಆ ಯುವತಿ ಈ ವೀಡಿಯೋವನ್ನ ಟ್ವಿಟರ್‌ಗೆ ಅಪ್ಲೋಡ್ ಮಾಡಿ, ಈ ರೀತಿ ಬರೆದಿದ್ದಾಳೆ. ನಿಮ್ಮ ಮನೆಗೆ ಯಾರಾದರೂ ಆಂಟಿ ಬಂದು ನಿನ್ನ ಮದುವೆ ಯಾವಾಗ ಅಂತಾ ಕೇಳಿದರೆ, ಅಥವಾ ಬೇಗ ಮದುವೆ ಮಾಡಿಕೋ ಎಂದು ಹೇಳಿದರೆ, ಅವರಿಗೆ ಈ ಟೀ ಕುಡಿಸಿ ಎಂದು ಹೇಳಿದ್ದಾಳೆ. ಈ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್ಸ್ ಬಂದಿದೆ. ಕೆಲವರಿಗೆ ಈ ಪೋಸ್ಟ್ ಇಷ್ಟವಾಗಲಿಲ್ಲ. ಹಾಗಾಗಿ ಅವರು ಬೈದು ಕಾಮೆಂಟ್ ಹಾಕಿದ್ದಾರೆ. ಇನ್ನು ಕೆಲವರು ಇದನ್ನು ಫನ್ನಿ ಎಂದು ಪರಿಗಣಿಸಿ, ಕಾಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು ಹೌದು ಹೀಗೆ ಮಾಡಬೇಕು ಎಂದು ಕಾಮೆಂಟ್ ಮಾಡುವ ಮೂಲಕ, ಇವಳಿಗೆ ಸಪೋರ್ಟ್ ಮಾಡಿದ್ದಾರೆ.

ಕರ್ನಾಟಕ‌ ಒಳ್ಳೆ ದಿಕ್ಕಿನಲ್ಲಿ ನಡೆಯಬೇಕಾದ್ರೆ, ಕಾಂಗ್ರೇಸ್ ನವರ ಗ್ಯಾರೆಂಟಿಗಳು ಅನ್ ಗ್ಯಾರೆಂಟಿ

‘ಹಾಸನದಲ್ಲಿ ಪೊಲೀಸರಿಗಿಂತ ಡಿವೈಎಸ್ಪಿ ಮತ್ತು ರೌಡಿಗಳ ಆಡಳಿತ ನಡೆಯುತ್ತಿದೆ’

ಜಗ್ಗೇಶ್ ನಟನೆಯ “ರಾಘವೇಂದ್ರ ಸ್ಟೋರ್” ಚಿತ್ರಮಂದಿರಕ್ಕೆ ಏಪ್ರಿಲ್ 28 ರಂದು

About The Author