Health tips: ಕಣ್ಣು ದಾನ ಮಾಡುವುದು ಹೇಗೆ..? ನೋಂದಣಿ ಹೇಗೆ ಮಾಡಿಸಿಕೊಳ್ಳಬೇಕು..? ಕಣ್ಣು ದಾನ ಮಾಡುವವರು ಏನೇನು ರೂಲ್ಸ್ ಪಾಲಿಸಬೇಕು..? ಕಣ್ಣು ದಾನ ಪಡೆದವರು ಏನೇನು ಪರೀಕ್ಷಿಸುತ್ತಾರೆ..? ಕಣ್ಣು ದಾನ ಪಡೆದ ಬಳಿಕ ತಪಾಸಣೆ ಹೇಗಿರುತ್ತದೆ ಅನ್ನೋ ಬಗ್ಗೆ ನೀವು ಈಗಾಗಲೇ ತಿಳಿದಿದ್ದೀರಿ. ಇದೀಗ ಒಬ್ಬರು ದಾನ ಮಾಡಿದ ಎರಡು ಕಣ್ಣುಗಳು, ನಾಲ್ವರ ಜೀವನಕ್ಕೆ ಬೆಳಕಾಗಬಹುದು ಎಂಬ ಸತ್ಯ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರು ಹೇಳುವುದೇನೆಂದರೆ, ಮೊದಲಿನ ಕಾಲಕ್ಕೆ ಹೋಲಿಸಿದರೆ, ಜನರಿಗೆ ನೇತ್ರದಾನದ ಬಗ್ಗೆ ಅರಿವು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ನೇತ್ರದಾನ ಮಾಡಲು ಮುಂದಾಗಿದ್ದಾರೆ. ವರನಟ ಡಾ.ರಾಜ್ಕುಮಾರ್ ನೇತ್ರದಾನ ಮಾಡಿದಾಗ, ಜನರಿಗೆ ಈ ಬಗ್ಗೆ ಅರಿವು ಮೂಡಿತ್ತು. 2021ರಲ್ಲಿ ಪುನೀತ್ ರಾಜ್ಕುಮಾರ್ ಅವರು ನೇತ್ರದಾನ ಮಾಡಿದ ಮೇಲೆ, ಇನ್ನೂ ಹೆಚ್ಚಿನ ಜನ ನೇತ್ರದಾನ ಮಾಡಲು ಮುಂದಾಗಿದ್ದಾರೆ.
ಅಂಧತ್ವ ಎಂದರೆ ಏನು ಎಂದು ತಿಳಿಯಬೇಕು ಅಂದ್ರೆ, ಕೆಲ ನಿಮಿಷಗಳ ಕಾಲ ಕಣ್ಣು ಮುಚ್ಚಿ, ನಿಮ್ಮ ಕೆಲಸವನ್ನು ಮಾಡಲು ಪ್ರಯತ್ನಿಸಿ. ಆಗ ದೃಷ್ಟಿ ಕಳೆದುಕೊಂಡವರ ಜೀವನ ಎಷ್ಟು ಕಷ್ಟಕರವೆಂದು ಗೊತ್ತಾಗುತ್ತದೆ. ಸಾವಿನ ಬಳಿಕ ಕಣ್ಣುಗಳನ್ನು ಸುಟ್ಟರೆ, ಹೂಳಿದರೆ ಉಪಯೋಗವಾಗುವುದಿಲ್ಲ. ಅದರ ಬದಲು ನೀವು ಕಣ್ಣು ದಾನ ಮಾಡಿದರೆ, ನೀವು ದಾನ ಮಾಡಿದ 2 ಕಣ್ಣು ನಾಲ್ಕು ಜನರ ಜೀವನಕ್ಕೆ ಬೆಳಕು ಕೊಡುತ್ತದೆ. ಹಾಗಾಗಿ ನೇತ್ರ ದಾನಕ್ಕೆ ಮುಂದಾಗಿ ಎನ್ನುತ್ತಾರೆ, ವೈದ್ಯರಾದ ಡಾ.ಯತೀಶ್. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




