2 ರೀತಿಯ ಬೆಳ್ಳುಳ್ಳಿ ಚಟ್ನಿ ಪುಡಿ ರೆಸಿಪಿ..

ಚಟ್ನಿ ಪುಡಿ ತಯಾರಿಸುವಾಗ ಅದರಲ್ಲಿ ಬೆಳ್ಳುಳ್ಳಿ ಬಳಸೋದು ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಬೆಳ್ಳುಳ್ಳಿ ಘಮ, ಬೆಳ್ಳುಳ್ಳಿ ಟೇಸ್ಟ್ ಇರುವಾಗಲೇ, ಆ ಚಟ್ನಿ ಪುಡಿ ರುಚಿಸೋದು. ಇಂದು ನಾವು 2 ರೀತಿಯ ಬೆಳ್ಳುಳ್ಳಿ ಚಟ್ನಿ ಪುಡಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: 2 ಬೆಳ್ಳುಳ್ಳಿ, 15ರಿಂದ 20 ಒಣಮೆಣಸು, ಅರ್ಧ ಕಪ್ ಶೇಂಗಾ, ಅರ್ಧ ಕಪ್ ಒಣಕೊಬ್ಬರಿ ತುರಿ, ಕಾಲು ಕಪ್‌ ಬಿಳಿಎಳ್ಳು, ರುಚಿಗೆ ತಕ್ಕಷ್ಟು ಉಪ್ಪು.

ಮೊದಲನೇಯ ಬೆಳ್ಳುಳ್ಳಿ ಚಟ್ನಿಪುಡಿ ರೆಸಿಪಿ: ಪ್ಯಾನ್ ಬಿಸಿ ಮಾಡಿ, ಒಂದು ಇಡೀ ಬೆಳ್ಳುಳ್ಳಿಯ ಎಲ್ಲ ಎಸಳು ತೆಗೆದು ಅದನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಒಣಮೆಣಸು, ಶೇಂಗಾ, ಒಣಕೊಬ್ಬರಿ, ಎಳ್ಳು ಎಲ್ಲವನ್ನೂ ಸಪರೇಟ್ ಆಗಿ ಘಮ ಬರುವವರೆಗೂ ಹುರಿದುಕೊಳ್ಳಿ. ಇದಾದ ಬಳಿಕ, ಮೊದಲು ಒಣಮೇಣಸು, ನಂತರ ಬೆಳ್ಳುಳ್ಳಿ, ಶೇಂಗಾ, ಒಣಕೊಬ್ಬರಿ, ಎಳ್ಳು, ಉಪ್ಪು ಎಲ್ಲವನ್ನು ಹಾಕಿ, ಗ್ರೈಂಡ್ ಮಾಡಿದ್ರೆ, ಚಟ್ನಿ ಪುಡಿ ರೆಡಿ. ಇದನ್ನು ನೀವು ಡಬ್ಬದಲ್ಲಿ ತುಂಬಿಟ್ಟುಕೊಂಡು, ಹಲವು ದಿನಗಳವರೆಗೆ ಬಳಸಬಹುದು. ಆದರೆ ಇಲ್ಲಿ ಹೇಳಿರುವ ಪದಾರ್ಥವನ್ನು ಚೆನ್ನಾಗಿ ಹುರಿಯಬೇಕು. ಇಲ್ಲವಾದಲ್ಲಿ, ಚಟ್ನಿ ಪುಡಿ ಬೇಗ ಹಾಳಾಗುತ್ತದೆ.

ಎರಡನೇಯ ಬೆಳ್ಳುಳ್ಳಿ ಚಟ್ನಿಪುಡಿ ರೆಸಿಪಿ: ವಡಾಪಾವ್ ಮಾಡುವ ವೇಳೆ ಚಟ್ನಿಪುಡಿ ಬಳಸಲಾಗುತ್ತದೆ. ಈ ಚಟ್ನಿ ಪುಡಿ ಮಾಡಲು, 15 ಹುರಿದ ಒಣಮೆಣಸು, 15 ಬೆಳ್ಳುಳ್ಳಿ ಎಸಳು, ಮತ್ತು ಅರ್ಧ ಕಪ್‌ ವಡಾಪಾವ್‌ ಮಾಡುವಾಗ, ಅದರಲ್ಲಿ ಉಳಿದ ಹಿಟ್ಟಿನಿಂದ ಚೂರಾ ಎಂದು ಮಾಡುತ್ತಾರೆ. ಅದು ಅರ್ಧ ಕಪ್ ತೆಗೆದುಕೊಳ್ಳಿ.

ಮೊದಲು ಮೆಣಸಿನಕಾಯಿ ಗ್ರೈಂಡ್ ಮಾಡಿ, ಅದಕ್ಕೆ ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ. ಈಗ ಕೊನೆಗೆ ಚೂರಾ ಹಾಕಿ ಪುಡಿ ಮಾಡಿದ್ರೆ, ಬೆಳ್ಳುಳ್ಳಿ ಚಟ್ನಿಪುಡಿ ರೆಡಿ.

ನೈಟ್ ಶಿಫ್ಟ್ ಮಾಡುವಾಗ ತಿನ್ನಬಹುದಾದ ಆಹಾರಗಳು ಯಾವುದು..?

ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

About The Author