Friday, September 20, 2024

Latest Posts

ಉಪ್ಪಿ ನಿರ್ದೇಶನದ ಹೊಸ ಸಿನಿಮಾಗೆ ನಟ-ನಟಿಯರು ಬೇಕಾಗಿದ್ದಾರೆ..?

- Advertisement -

ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ ಎಂಬ ಪೋಸ್ಟ್​ ಅನ್ನು ಉಪೇಂದ್ರ ಅವರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಪ್ಪಿ ಮತ್ತೆ ಡೈರೆಕ್ಟರ್​ ಕ್ಯಾಪ್ ತೊಡುತ್ತಾರೆ ಎಂದು ಹೇಳಿದ ದಿನದಿಂದಲೇ ಅವರ ಅಭಿಮಾನಿಗಳು ಉಪ್ಪಿ ನಿರ್ದೇಶನದ ಹೊಸ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಅವರ ಹೊಸ ಸಿನಿಮಾಗೆ 14 ರಿಂದ 60 ವರ್ಷ ವಯಸ್ಸಿನವರಿಗೆ ಸಿನಿಮಾದಲ್ಲಿ ನಟನೆ ಮಾಡಲು ತೆಗೆದುಕೊಳ್ಳುವಾದಾಗಿ ತಿಳಿಸಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಉಪೇಂದ್ರ ಅವರ ಚಿತ್ರದಲ್ಲಿ ಅಭಿನಯಿಸುವ ಸುವರ್ಣಾವಕಾಶ ಸಿಕ್ಕಿದೆ. ಆಸಕ್ತಿ ಹೊಂದಿರುವವರು ತಾವು ನಟಿಸಿರುವ (2 ನಿಮಿಷ ಮೀರದಂತೆ) ವಿಡಿಯೋ ತುಣುಕುಗಳನ್ನು ಇಮೈಲ್  ಐಡಿಗೆ ಕಳುಹಿಸಿಕೊಡಬಹುದು. ಮುಂದಿನ ತಿಂಗಳು ಮಾರ್ಚ್-10ನೇ ತಾರೀಖಿನ ಒಳಗೆ ವಿಡಿಯೋವನ್ನು ಕಳುಹಿಸಿಕೊಡಲು ಆವಕಾಶ ನೀಡಲಾಗಿದೆ. ಆಸಕ್ತಿ ಹೊಂದಿರುವವರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅದೃಷ್ಟ ಯಾರಿಗಾದರೂ ಒಲಿಯಬಹುದು.

- Advertisement -

Latest Posts

Don't Miss