ಕೂದಲು ಸೋಂಪಾಗಿ ಬೆಳೆಯಬೇಕು ಅಂದ್ರೆ ಹರಳೆಣ್ಣೆಯನ್ನು ಈ ರೀತಿ ಬಳಸಿ..

ಕೂದಲು ಸೊಂಪಾಗಿ ಬೆಳೆಯಲು, ಶ್ಯಾಂಪೂ, ಹೇರ್ ಪ್ಯಾಕ್ ಉತ್ತಮ ಆಹಾರವೆಷ್ಟು ಮುಖ್ಯವೋ, ಎಣ್ಣೆ ಮಸಾಜ್ ಕೂಡ ಅಷ್ಟೇ ಮುಖ್ಯವಾಗಿದೆ. ಎಷ್ಟೋ ಜನ ಬರೀ ಕೂದಲಿಗೆ ಎಣ್ಣೆ ಮಸಾಜ್ ಮಾಡಿಯೇ, ಕೂದಲ ಬುಡವನ್ನು ಗಟ್ಟಿಮುಟ್ಟಾಗಿಸುತ್ತಾರೆ. ಅದರಲ್ಲೂ ತೆಂಗಿನಎಣ್ಣೆ ಮತ್ತು ಹರಳೆಣ್ಣೆ ಕಾಂಬಿನೇಷನ್ ತಲೆಗೂದಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಂದು ನಾವು ಹರಳೆಣ್ಣೆ ಬಳಕೆಯಿಂದ ತಲೆಗೂದಲು ಹೇಗೆ ಉತ್ತಮವಾಗುತ್ತದೆ ಅಂತಾ ಹೇಳಲಿದ್ದೇವೆ.

ಹರಳೆಣ್ಣೆಯಿಂದ ವಾರಕ್ಕೆ ಎರಡು ಬಾರಿ ಕೂದಲಿಗೆ ಮಸಾಜ್ ಮಾಡಿದ್ದಲ್ಲಿ, ನಿಮ್ಮ ಕೂದಲ ವಾಲ್ಯೂಮ್ ಹೆಚ್ಚುತ್ತದೆ. ಏಕೆಂದರೆ ಇದರಲ್ಲಿ ವಿಟಾಮಿನ್ ಇ ಇರುತ್ತದೆ. ಇದು ಕೂದಲ ಆರೋಗ್ಯ ಕಾಪಾಡುವಲ್ಲಿ ಸಹಾಯವಾಗುತ್ತದೆ. ಹಾಗಾಗಿ ಹರಳೆಣ್ಣೆ ಮಸಾಜ್, ಕೂದಲಿಗೆ ಉತ್ತಮ ಅಂತಾ ಹೇಳಲಾಗುತ್ತದೆ.

ಹರಳೆಣ್ಣೆ ನಿಮ್ಮ ಕೂದಲಿನ ತೇವಾಂಶ ಹೆಚ್ಚಿಸುತ್ತದೆ. ಹಾಗಾಗಿ ಒಣಕೂದಲ ಸಮಸ್ಯೆ ಇದ್ದವರು ಹರಳೆಣ್ಣೆ ಬಳಸುವುದು ಉತ್ತಮವಾಗಿದೆ. ಹರಳೆಣ್ಣೆ ಮತ್ತು ತೆಂಗಿನ ಎಣ್ಣೆ ಸಮ ಪ್ರಮಾಣದಲ್ಲಿ ತೆಗೆದುಕೊಂಡು, ಕೊಂಚ ಬಿಸಿ ಮಾಡಿ, ಉಗುರು ಬೆಚ್ಚಗಿನ ಎಣ್ಣೆಯಿಂದ ನಿಮ್ಮ ನೆತ್ತಿಯನ್ನು, ತಲೆಗೂದಲನ್ನು ಮಸಾಜ್ ಮಾಡಿ. ವಾರಕ್ಕೆರಡು ಬಾರಿ ಈ ರೀತಿ ಹೆಡ್ ಮಸಾಜ್ ಮಾಡಿ, ತಲೆಸ್ನಾನ ಮಾಡಿದರೆ, ಕೂದಲ ಬುಡ ಗಟ್ಟಿಮುಟ್ಟಾಗುತ್ತದೆ. ನಿಮ್ಮ ಕೂದಲು ಕಾಂತಿಯುತವಾಗಿ ಕಾಣುತ್ತದೆ.

ನೆನಪಿರಲಿ ನಿಮಗೆ ಹರಳೆಣ್ಣೆ ಬಳಸಿದರೆ, ನೆಗಡಿಯಾಗುತ್ತದೆ. ಜ್ವರ ಬರುತ್ತದೆ ಎಂದಾದಲ್ಲಿ, ವೈದ್ಯರ ಬಳಿ ಸರಿಯಾದ ಸಲಹೆ ಪಡೆದು ಬಳಿಕ, ಹರಳೆಣ್ಣೆ ಬಳಸುವುದು ಉತ್ತಮ.

ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್‌ ಮಾಡಿ ಕುಡಿಯಿರಿ.

ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

About The Author