Saturday, August 9, 2025

Latest Posts

ಬಾಳೆಹಣ್ಣಿನ ಸಿಪ್ಪೆ ಬಳಸಿ ಕಣ್ಣಿನ ಸುತ್ತಲಾಗುವ ಕಪ್ಪು ಕಲೆ ಓಡಿಸಿ..

- Advertisement -

ನಾವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಅಂದವಿದ್ದರೂ, ನಮ್ಮ ಕಣ್ಣ ಸುತ್ತಲು ಇರುವ ಕಪ್ಪು ಕಲೆಯಿಂದ ನಮ್ಮ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಡಾರ್ಕ್‌ ಸರ್ಕಲ್‌ ಬಗ್ಗೆ ನಾವು ಗಮನ ಹರಿಸಬೇಕು. ಹಾಗಾಗಿ ನಾವಿಂದು ಬಾಳೆಹಣ್ಣಿನ ಸಿಪ್ಪೆ ಬಳಸಿ, ಹೇಗೆ ಡಾರ್ಕ್ ಸರ್ಕಲ್ ಓಡಿಸಬೇಕು ಅಂತಾ ತಿಳಿಯೋಣ ಬನ್ನಿ..

ಸರಿಯಾಗಿ ಆಹಾರ ಸೇವಿಸದಿದ್ದಾಗ, ದೇಹದಲ್ಲಿ ಶಕ್ತಿ ಕಡಿಮೆಯಾದಾಗಾ, ಪೌಷ್ಠಿಕ ಆಹಾರ ಸೇವಿಸದಿದ್ದಾಗ, ಅಥವಾ ನಿದ್ದೆ ಸರಿಯಾಗಿ ಆಗದಿದ್ದಾಗ, ಕಣ್ಣಿನ ಸುತ್ತ ಕಪ್ಪು ಕಲೆ ಉಂಟಾಗುತ್ತದೆ. ಇದಕ್ಕೆ ಬಾಳೆಹಣ್ಣಿನ ಸಿಪ್ಪೆಯೇ ಪರಿಹಾರವಾಗಿದೆ. ಬಾಳೆಹಣ್ಣಿನ ಸಿಪ್ಪೆ ರಕ್ತ ಸಂಚಾರವನ್ನು ಸುಗಮಗೊಳಿಸುವುದಕ್ಕೆ ಸಹಕಾರಿಯಾಗಿದೆ.

ಬಾಳೆಹಣ್ಣಿನ ಸಿಪ್ಪೆಯನ್ನು 20 ನಿಮಿಷ ಫ್ರಿಜ್‌ನಲ್ಲಿ ಇರಿಸಿ, ಬಳಿಕ ಅದನ್ನು ಕಣ್ಣಿನ ಸುತ್ತಲೂ ಮಸಾಜ್ ಮಾಡಿ. ನಂತರ ಆ ಸಿಪ್ಪೆಯನ್ನು 10 ನಿಮಿಷ ಕಣ್ಣಿನ ಕೆಳಗಿರಿಸಿ. ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ವಾರಕ್ಕೆ ಮೂರು ಬಾರಿ ಹೀಗೆ ಮಾಡಿ. ಎರಡನೇಯದ್ದಾಗಿ ಬಾಳೆಹಣ್ಣಿನ ಸಿಪ್ಪೆಯಿಂದ ಪ್ರತಿದಿನ ಡಾರ್ಕ್ ಸರ್ಕಲ್ ಇರುವಲ್ಲಿ ಮಸಾಜ್ ಮಾಡಿ. ಮೂರನೇಯದಾಗಿ ಬಾಳೆಹಣ್ಣಿನ ಸಿಪ್ಪೆಯ ಒಳಭಾಗಕ್ಕೆ ಆ್ಯಲೋವೆರಾ ಜೆಲ್‌ ಹಚ್ಚಿ, ಅದರಿಂದ ಕಣ್ಣಿನ ಸುತ್ತಲೂ ಮಸಾಜ್ ಮಾಡಿ. ಮತ್ತು ಆ ಸಿಪ್ಪೆಯನ್ನ 10 ನಿಮಿಷ ಕಣ್ಣಿನ ಕೆಳಭಾಗದಲ್ಲಿರಿ.

ಸೌತೇಕಾಯಿ, ಆಲೂಗಡ್ಡೆಯಿಂದಲೂ ನೀವು ಡಾರ್ಕ್ ಸರ್ಕಲ್ ಬರುವುದನ್ನ ತಪ್ಪಿಸಬಹುದು. ಪ್ರತಿದಿನ ರಾತ್ರಿ ಮಲಗುವಾಗ ಸಾಸಿವೆ ಎಣ್ಣೆಯಿಂದ ಕಣ್ಣಿನ ಸುತ್ತಲು ಮಸಾಜ್ ಮಾಡಿ, ಮಲಗಬೇಕು. ನೆನಪಿರಲಿ ಎಣ್ಣೆ ಕಣ್ಣಿನೊಳಗೆ ಹೋಗಬಾರದು. ಹೀಗೆ ಮಾಡಿದರೆ, ಒಂದೇ ವಾರದಲ್ಲಿ ನಿಮ್ಮ ಕಣ್ಣಿನ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.

ಕಿಡ್ನಿಸ್ಟೋನ್ ತೆಗೆದುಹಾಕಲು ಈ ಜ್ಯೂಸ್‌ ಮಾಡಿ ಕುಡಿಯಿರಿ.

ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

- Advertisement -

Latest Posts

Don't Miss