Friday, September 20, 2024

Latest Posts

ಕಾಫಿ ಪುಡಿ ಬಳಸಿ, ನಿಮ್ಮ ಅಂದವನ್ನು ಈ ರೀತಿಯಾಗಿ ಹೆಚ್ಚಿಸಿಕೊಳ್ಳಿ..

- Advertisement -

Beauty Tips: ಕಾಫಿ ಪುಡಿಯನ್ನ ಬರೀ ಬಿಸಿ ಬಿಸಿ ಕಾಫಿ ತಯಾರಿಸೋಕ್ಕಷ್ಟೇ ಅಲ್ಲ, ಬದಲಾಗಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳೋಕ್ಕೂ ಕೂಡ ಬಳಸಲಾಗುತ್ತದೆ. ಹಾಗಾದ್ರೆ ಯಾವ ರೀತಿ ಕಾಫಿ ಪುಡಿ ಬಳಸಿ, ನೀವು ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಬಹುದು ಅಂತಾ ತಿಳಿಯೋಣ ಬನ್ನಿ..

ನಾವಿಂದು ಹೇಳುವ ಫೇಸ್‌ಪ್ಯಾಕ್ ನೀವು ಅಪ್ಲೈ ಮಾಡಿದ್ರೆ, ನಿಮ್ಮ ಮುಖದ ಬಣ್ಣ ತಿಳಿಯಾಗುತ್ತದೆ. ಸ್ಕಿನ್ ಬ್ರೈಟ್ ಆಗಿ ಇರುತ್ತದೆ. ಸನ್‌ಟ್ಯಾನ್, ಡಾರ್ಕ್ ಸ್ಪಾಟ್ಸ್, ಡಾರ್ಕೆನೆಸ್‌ ಎಲ್ಲವನ್ನೂ ಹೋಗಲಾಡಿಸಿ, ನಮ್ಮ ಮುಖದ ಕಾಂತಿ ಹೆಚ್ಚಿಸೋಕ್ಕೆ ಈ ಫೇಸ್‌ಪ್ಯಾಕ್ ಸಹಕಾರಿಯಾಗಿದೆ.

ಈ ಫೇಸ್‌ಪ್ಯಾಕ್ ಎಲ್ಲ ರೀತಿಯ ತ್ವಚೆಯವರೂ ಕೂಡ ಬಳಸಬಹುದು. ಆದರೆ ನೀವು ಈ ಫೇಸ್‌ಪ್ಯಾಕ್ ಬಳಸುವ ಮುನ್ನ ಪ್ಯಾಚ್‌ ಟೆಸ್ಟ್ ಮಾಡಿ, ಬಳಿಕ ಅಪ್ಲೈ ಮಾಡಿದ್ರೆ ಉತ್ತಮ. ಯಾಕಂದ್ರೆ ನೀವು ನಿಮ್ಮ ಕೈ ಮೇಲೆ ಈ ಫೇಸ್‌ಪ್ಯಾಕ್ ಹಚ್ಚಿ, ಕೊಂಚ ಹೊತ್ತು ಬಿಟ್ಟು, ನಿಮಗೆ ಅಲರ್ಜಿಯಾಗದಿದ್ದಲ್ಲಿ, ಮಾತ್ರ ನಿಮ್ಮ ಮುಖದ ಮೇಲೆ ಇದನ್ನು ಅಪ್ಲೈ ಮಾಡಿದರೆ, ಇನ್ನೂ ಉತ್ತಮ.

ಈ ಫೇಸ್‌ಪ್ಯಾಕ್ ಅಪ್ಲೈ ಮಾಡೋಕ್ಕೂ ಮುನ್ನ ನೀವು ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.  ಫೇಸ್‌ಪ್ಯಾಕ್ ರೆಡಿ ಮಾಡೋಕ್ಕೆ, 2ರಿಂದ 3 ಹನಿ ನಿಂಬೆರಸ, 1 ಸ್ಪೂನ್ ಕಾಫಿ ಪುಡಿ, ಮೊಸರು ಮತ್ತು ಕಡಲೆಹಿಟ್ಟು ಬೇಕಾಗುತ್ತದೆ. ಒಂದು ಬೌಲ್‌ಗೆ ಈ ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಫೇಸ್‌ಪ್ಯಾಕ್ ರೆಡಿ. ಇದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ, 15 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

- Advertisement -

Latest Posts

Don't Miss