Friday, November 22, 2024

Latest Posts

ಸಕ್ಕರೆ ಬದಲು ಬೆಲ್ಲವನ್ನು ಬಳಸಿ, ಈ ಆರೋಗ್ಯಕರ ಲಾಭವನ್ನು ಪಡೆಯಿರಿ..

- Advertisement -

ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..

ನೀವು ಒಂದು ತಿಂಗಳು ಒಂದು ಚೂರು ಸಕ್ಕರೆ ಬಳಸದೇ, ಬರೀ ಬೆಲ್ಲ ಬಳಸಿ ನೋಡಿ. ನಿಮ್ಮ ಮುಖದಲ್ಲಾಗುವ ಸುಂದರ ಬದಲಾವಣೆಯನ್ನು ನೀವೇ ಗಮನಿಸಿ. ಬೆಲ್ಲದಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳ ಪ್ರಮಾಣ ಹೆಚ್ಚಿದೆ. ಇದು ನಿಮ್ಮ ತ್ವಚೆಯನ್ನು ಸುಂದರವಾಗಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ ಮುಖ ಸುಕ್ಕುಗಟ್ಟುವುದನ್ನು ಕೂಡ ಬೆಲ್ಲ ತಡೆಗಟ್ಟುತ್ತದೆ.

ನಿಮ್ಮ ಮುಖದಲ್ಲಿ ಮೊಡವೆ ಬರಬಾರದು, ಮೊಡವೆ ಕಲೆ ಇರಬಾರದು ಅಂದ್ರೆ, ನೀವು ಚೆನ್ನಾಗಿ ನೀರು ಕುಡಿಯಿರಿ. ನಾನ್‌ವೆಜ್, ಮಸಾಲೆ ಪದಾರ್ಥ, ಕರಿದ ಪದಾರ್ಥಗಳನ್ನು ಸೇವಿಸಬೇಡಿ. ಜೊತೆಗೆ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿ. ಬೆಲ್ಲದ ಉಪಯೋಗ ಮಾಡಿ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ, ಬೆಲ್ಲದ ಸೇವನೆ ಮಾಡಿ. ನಿಮಗೆ ನೆಗಡಿಯಾಗಿದ್ದರೆ, ಬೆಲ್ಲ ಸೇವಿಸಿ. ನೆಗಡಿ ಕಂಟ್ರೋಲಿಗೆ ಬರುತ್ತದೆ.

ಊಟವಾದ ಮೇಲೆ ಸಿಹಿ ಪದಾರ್ಥ ಸೇವಿಸುವ ಬದಲು ನೀವು ಚಿಕ್ಕ ತುಂಡು ಬೆಲ್ಲ ತಿಂದು, ನೀರು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ದೇಹದಿಂದ ವಿಷಕಾರಿ ಅಂಶಗಳು ಹೊರಹೋಗುತ್ತದೆ. ಇದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಎದೆಹಾಲು ಹೆಚ್ಚಿಸಲು ಇದನ್ನು ಸೇವಿಸಿ..

ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ತಿನ್ನಲೇಬೇಕು ಅಂತಾ ಹೇಳೋದ್ಯಾಕೆ..?

ಮಾವಿನ ಕಾಯಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತಾ..?

- Advertisement -

Latest Posts

Don't Miss