Health Tips: ನಮ್ಮಲ್ಲಿ ಹಲವರು, ಚಹಾ, ಕಾಫಿ, ಜ್ಯೂಸ್ ಇತ್ಯಾದಿ ತಯಾರಿಸುವಾಗ ಸಕ್ಕರೆ ಉಪಯೋಗ ಹೆಚ್ಚಾಗಿ ಮಾಡುತ್ತಾರೆ. ಇದು ನಿಮಗೆ ರುಚಿ ಎನ್ನಿಸಬಹುದು. ಆದರೆ ಸಕ್ಕರೆ ಸ್ಲೋ ಪಾಯ್ಸನ್ ಅಂತಾ ಹೇಳಲಾಗುತ್ತದೆ. ಹಾಗಾಗಿ ನೀವು ಸಕ್ಕರೆ ಬದಲಿಗೆ, ಕಲ್ಲು ಸಕ್ಕರೆ ಬಳಸಬಹುದು. ಇಂದು ನಾವು ಕಲ್ಲುಸಕ್ಕರೆ ಬಳಸಿದರೆ, ನಿಮಗಾಗುವ ಆರೋಗ್ಯ ಲಾಭಗಳೇನು ಅಂತಾ ಹೇಳಲಿದ್ದೇವೆ.
ನೀವು ಕಲ್ಲುಸಕ್ಕರೆಯನ್ನು ಯಾವುದಕ್ಕಾದರೂ ಮಿಕ್ಸ್ ಮಾಡಿಯೇ ಸೇವಿಸಬೇಕು ಅಂತೇನಿಲ್ಲ. ಹಾಗೇ ಕಲ್ಲು ಸಕ್ಕರೆಯನ್ನ ಮಿತವಾಗಿ ಸೇವಿಸಿದರೂ, ಅದು ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಊಟವಾದ ಬಳಿಕ, ಒಂದು ಸಣ್ಣ ತುಂಡು ಕಲ್ಲುಸಕ್ಕರೆ ತಿಂದರೆ, ನೀವು ಮಾಡಿದ ಊಟ ಸುಲಭವಾಗಿ ಜೀರ್ಣವಾಗುತ್ತದೆ. ಬಿಳಿ ಕಲ್ಲುಸಕ್ಕರೆಗಿಂತ, ಕೆಪ್ಪು ಕಲ್ಲುಸಕ್ಕರೆಯಲ್ಲಿ ಔಷಧಿಯ ಗುಣ ಹೆಚ್ಚಾಗಿರುತ್ತದೆ.
ಇಷ್ಟೇ ಅಲ್ಲದೇ, ನಿಮಗೆ ಶೀತ, ಕೆಮ್ಮಾಗಿದ್ದರೆ, ದಿನಕ್ಕೆ 3 ಕೆಂಪು ಕಲ್ಲುಸಕ್ಕರೆ ಸೇವಿಸಿ. ಇದರಿಂದ ಶೀತವೂ ಕಡಿಮೆಯಾಗುತ್ತದೆ. ಕೆಮ್ಮು ಕಡಿಮೆಯಾಗುತ್ತದೆ. ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಗಂಟಲು ನೋವಾಗಿದ್ದರೆ, ಕೆಂಪು ಕಲ್ಲುಸಕ್ಕರೆ ತಿಂದರೆ, ಒಂದೇ ದಿನದಲ್ಲಿ ನಿಮ್ಮ ಗಂಟಲು ನೋವು ಶಮನವಾಗುತ್ತದೆ.
ಕಲ್ಲುಸಕ್ಕರೆ ಸೇವನೆಯಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಹಿಮೋಗ್ಲೋಬಿನ್ ಪ್ರಮಾಣ ಸರಿಯಾಗಿ ಇರುತ್ತದೆ. ನೀವು ವಾಯ್ಸ್ ಓವರ್ ಆರ್ಟಿಸ್ಟ್ ಅಥವಾ ಸಿಂಗರ್ ಆಗಬೇಕು. ನಿಮ್ಮ ಗಂಟಲು ಕ್ಲೀನ್ ಆಗಿರಬೇಕು ಎಂದಲ್ಲಿ, ಪ್ರತಿದಿನ ಎರಡು ಕೆಂಪು ಕಲ್ಲು ಸಕ್ಕರೆ ಸೇವನೆ ಮತ್ತು ಬಿಸಿ ನೀರಿನ ಸೇವನೆ ಮಾಡಿ. ಜೊತೆಗೆ ಎರಡು ತುಳಸಿ ಸೇವನೆ ಮಾಡಿ.