ಎಲ್ಲರಿಗೂ ಕೂದಲು ಉದುರದಿರಲು, ಗಟ್ಟಿಮುಟ್ಟಾಗಲು ಏನು ಮಾಡಬೇಕು ಅಂತಾ ಗೊತ್ತಿದೆ. ಆದ್ರೆ ಅದನ್ನ ಫಾಲೋ ಮಾಡೋಕ್ಕೆ ಮಾತ್ರ ಉದಾಸೀನ. ಅದರಲ್ಲೂ ಇತ್ತೀಚೆಗೆ ಈರುಳ್ಳಿ ರಸವನ್ನು ಹಚ್ಚಿದ್ರೆ ಉತ್ತಮ ರಿಸಲ್ಟ್ ಬರತ್ತೆ ಅಂತಾ ಎಲ್ಲರಿಗೂ ಗೊತ್ತು. ಹಾಗಾದ್ರೆ ತಲೆಗೂದಲಿನ ಸೌಂದರ್ಯಕ್ಕೆ ಈರುಳ್ಳಿಯನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿಯಲ್ಲಿರುವ ಗುಣ, ನಮ್ಮ ಕೂದಲ ಬುಡವನ್ನು ಸ್ಟ್ರಾಂಗ್ ಮಾಡಿ, ಕೂದಲು ಉದುರದಂತೆ ಕಾಪಾಡುತ್ತದೆ. ಕೆಂಪು ಈರುಳ್ಳಿ ಇನ್ನೂ ಉತ್ತಮ. ಕೆಂಪು ಈರುಳ್ಳಿಯ ರಸವನ್ನು ಕೂದಲ ಬುಡಕ್ಕೆ ಹಚ್ಚಿದ್ರೆ, ಕೂದಲು ಸಧೃಡವಾಗಿ, ಆರೋಗ್ಯಕರವಾಗಿ ಇರತ್ತೆ. ವಾರದಲ್ಲಿ ಎರಡು ಬಾರಿ ನೀವು ಈರುಳ್ಳಿ ರಸವನ್ನ ಕೂದಲಿಗೆ ಹಚ್‌ಚಿದ್ರೆ, ಬರೀ ಒಂದೇ ತಿಂಗಳಲ್ಲಿ ನಿಮ್ಮ ಕೂದಲಲ್ಲಾಗುವ ಆರೋಗ್ಯಕರ ಬದಲಾವಣೆಯನ್ನು ನೀವು ಕಾಣಬಹುದು.
ಈರುಳ್ಳಿಯ ರಸ ತೆಗೆದು, ಅದರಲ್ಲಿ ಕಾಟನ್ ಅದ್ದಿ, ಅದನ್ನ ತಲೆ ಬುಡಕ್ಕೆ ಹಚ್ಚಬೇಕು. ಅಥವಾ ಈರುಳ್ಳಿ ರಸವನ್ನು ಸ್ಪ್ರೇ ಮಾಡಬೇಕು. ಇದರಿಂದ ಈರುಳ್ಳಿ ರಸ, ಕೂದಲಿಗೆ ಸರಿಯಾಗಿ ತಾಕುತ್ತದೆ. ನೀವು ಯಾವಾಗ ಬೇಕಾದ್ರೂ ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ, ಆದ್ರೆ ಅದು ಫ್ರೆಶ್ ಆಗಿರಲಿ. ಈರುಳ್ಳಿ ರಸ ತೆಗೆದು ಕೆಲವು ಗಂಟೆ ಇಟ್ಟು ನಂತರ ಅಪ್ಲೈ ಮಾಡಿದ್ರೆ, ಅದರಿಂದೇನೂ ಉಪಯೋಗವಾಗುವುದಿಲ್ಲ. ಹಾಗಾಗಿ ಫ್ರೆಶ್ ಈರುಳ್ಳಿ ರಸವನ್ನು ತೆಗೆದು, ನಿಮ್ಮ ತಲೆಕೂದಲಿನ ಬುಡಕ್ಕೆ ಹಚ್ಚಿ. ಮತ್ತು ಕೆಮಿಕಲ್ ಇಲ್ಲದ ಶ್ಯಾಂಪೂವಿನಿಂದ ತಲೆಗೂದಲನ್ನು ಸರಿಯಾಗಿ ವಾಶ್ ಮಾಡಿ.
ಟೂತ್ ಪೇಸ್ಟ್ ಬಳಸುವ ಬದಲು ಇದನ್ನು ಬಳಸಿ..
ಇನ್ನು ನೀವು ಈರುಳ್ಳಿ ರಸ ಬಳಸುವಾಗ, ಅದರೊಂದಿಗೆ ತೆಂಗಿನ ಎಣ್ಣೆ ಅಥವಾ ಹರಳೆಣ್ಣೆ ಬಳಸಬಹುದು. ಈರುಳ್ಳಿ ರಸ ಮತ್ತು ಎಣ್ಣೆಯನ್ನ ಮಿಕ್ಸ್ ಮಾಡಿಕೊಂಡು ಕೂಡ ನೀವು, ತೆಲಬುಡಕ್ಕೆ ಹಚ್ಚಬಹುದು. ಅಲ್ಲದೇ, ರಾತ್ರಿಯಿಂದ ಒಂದು ಸ್ಪೂನ್ ಅಕ್ಕಿಯನ್ನ ನೀರಿನಲ್ಲಿ ನೆನೆಸಿಟ್ಟು, ಮರುದಿನ ಆ ಫರ್ಮಂಟೆಡ್ ನೀರಿನೊಂದಿಗೆ ಈರುಳ್ಳಿ ರಸ ಮಿಕ್ಸ್ ಮಾಡಿ ಹಚ್ಚಬಹುದು. ಆದ್ರೆ ಒಂದು ನೆನಪಿರಲಿ, ನೀವು ಇದನ್ನ ಕೂದಲಿಗೆ ಅಪ್ಲೈ ಮಾಡೋಕ್ಕೂ ಮುನ್ನ, ನಿಮ್ಮ ಕೈಗೆ ಸ್ವಲ್ಪ ಈರುಳ್ಳಿ ರಸ ಹಚ್ಚಿ, ಒಂದು ಗಂಟೆ ಬಿಡಿ. ನಿಮ್ಮ ಸ್ಕಿನ್ ಮೇಲೆ ಯಾವುದೇ ಅಲರ್ಜಿಯಾಗಲಿಲ್ಲವೆಂದಲ್ಲಿ ಮಾತ್ರ, ತಲೆಗೆ ಈರುಳ್ಳಿ ರಸ ಬಳಸಬಹುದು.