Sunday, September 8, 2024

Latest Posts

ಈ 12 ಟ್ರಿಕ್ಸ್ ಬಳಸಿ, ಜೀವನದಲ್ಲಿ ಗೌರವ ಗಳಿಸಿ: ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಎಲ್ಲರಿಂದ ಗೌರವ ಗಳಿಸಬೇಕು ಅಂದ್ರೆ ಯಾವ 6 ಟ್ರಿಕ್ಸ್ ಬಳಸಬೇಕು ಅನ್ನೋ ಬಗ್ಗೆ ತಿಳಿಸಿದ್ದೇವು. ಇಂದು ನಾವು ಅದರ ಮುಂದುವರಿದ ಭಾಗವಾಗಿ, ಇನ್ನೂ 6 ಉಪಾಯಗಳ ಬಗ್ಗೆ ವಿವರಣೆ ನೀಡಲಿದ್ದೇವೆ.

ಆರನೇಯದ್ದು, ರಾಯಲ್ ಶೈಲಿಯಲ್ಲಿ ಜೀವಿಸಿ. ಇದರ ಅರ್ಥ, ಹೈ ಕ್ವಾಲಿಟಿ ಬಟ್ಟೆ, ಶೂಸ್ ಧರಿಸಿ, ಕಾರಿನಲ್‌ಲಿ ಓಡಾಡಿ ಅಂತಲ್ಲ. ಬದಲಾಗಿ, ಬೇರೆಯವರು ನಿಮ್ಮನ್ನು ಗೌರವಿಸಬೇಕೆಂದಲ್ಲಿ, ನಿಮ್ಮನ್ನು ನೀವು ಗೌರವಿಸಿ. ಶಿಸ್ತನ್ನು ಅಳವಡಿಸಿಕೊಳ್ಳಿ. ಹಾಕುವ ಬಟ್ಟೆ ಕಡಿಮೆ ಕ್ವಾಲಿಟಿಯದ್ದಾದರೂ, ಸ್ವಚ್ಛವಾಗಿರಲಿ. ನಿಮ್ಮ ಬಳಿ ಕಾಸ್ಟ್ಲಿ ಮೇಕಪ್‌ ಐಟಮ್ಸ್ ಇಲ್ಲದಿದ್ದರೂ, ಮುಖ ಶುದ್ಧವಾಗಿರಲಿ, ಮುಖದಲ್ಲಿ ಮುಗುಳ್ನಗೆ ಇರಲಿ. ಅವಶ್ಯಕತೆಗೆ ತಕ್ಕಷ್ಟು ಮಾತು, ನಗು ಇದ್ದರೆ, ನಿಮ್ಮನ್ನು ಎಲ್ಲರೂ ಗೌರವಿಸುತ್ತಾರೆ.

ಏಳನೇಯದ್ದು, ಯಾರಿಂದಲೂ ಬಿಟ್ಟಿಯಾಗಿ ಸಹಾಯ ಪಡೆಯಬೇಡಿ. ಮನುಷ್ಯ ಅಂದ ಮೇಲೆ ಇನ್ನೊಬ್ಬರ ಸಹಾಯದ ಅವಶ್ಯಕತೆ ಒಮ್ಮೆಯಾದರೂ ತೆಗೆದುಕೊಳ್ಳಲೇಬೇಕಾಗುತ್ತದೆ. ಆ ರೀತಿ ದೊಡ್ಡ ಸಹಾಯ ತೆಗೆದುಕೊಳ್ಳುವ ಸಂದರ್ಭ ಬಂದಲ್ಲಿ, ನನಗೆ ಸಹಾಯ ಮಾಡು, ಕರುಣೆ ತೋರಿಸು ಎಂದು ಯಾರಲ್ಲಿಯೂ ಗೋಗರಿಯಬೇಡಿ. ಬದಲಾಗಿ ನೀನು ನನಗೆ ಈ ವಿಚಾರದಲ್ಲಿ ಸಹಾಯ ಮಾಡು, ಅದರ ಬದಲಾಗಿ ನಾನು ನಿನಗೆ ಈ ಸಹಾಯ ಮಾಡುತ್ತೇನೆಂದು ಹೇಳಿ. ಯಾಕಂದ್ರೆ ಈಗಿನ ಕಾಲದಲ್ಲಿ ಯಾರೂ ಪುಕ್ಕಟೆಯಾಗಿ ಸಹಾಯ ಮಾಡಲು ಮುಂದೆ ಬರುವುದಿಲ್ಲ.

ಎಂಟನೇಯದ್ದು, ಮಾತು ಮಿತಿಯಲ್ಲಿರಲಿ. ನೀವು ಎದುರಿನವರ ಜೊತೆ ಅವಶ್ಯಕತೆಗೆ ತಕ್ಕಂತೆ ಮಾತನಾಡಿ. ಮಾತಿನ ಭರದಲ್ಲಿ, ನಿಮ್ಮ ಸಿಕ್ರೇಟ್ ಬಿಚ್ಚಿಡುವುದು, ಅಥವಾ ಯಾರದ್ದೋ ಸಿಕ್ರೇಟ್ ಬಿಚ್ಚಿಡುವುದು, ಅಥವಾ ಬೇಡದ ಮಾತಾಡುವುದೆಲ್ಲ ಮಾತನಾಡಬೇಡಿ. ಹೀಗೆ ಮಾಡಿದ್ದಲ್ಲಿ ನಿಮ್ಮ ಮೇಲಿದ್ದ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ನಿಮ್ಮ ಸಂಬಂಧಿಕರೊಂದಿಗೆ ಅಥವಾ ಆತ್ಮೀಯರೊಂದಿಗೆ ಮಾತ್ರ, ಮನಬಿಚ್ಚಿ ಮಾತನಾಡಿ. ಉಳಿದವರೊಂದಿಗೆ ಎಷ್ಟು ಬೇಕೋ ಅಷ್ಟೇ ಮಾತನಾಡಿ.

ಒಂಭತ್ತನೇಯದ್ದು, ನೀವು ಎಷ್ಟು ಖ್ಯಾತಿಯಾಗಬೇಕು, ಯಶಸ್ಸು ಗಳಿಸಬೇಕು. ಉತ್ತಮರಾಗಬೇಕು ಅಂದ್ರೆ, ಜನ ನಿಮ್ಮ ಬಗ್ಗೆ ಹಿಂದಿನಿಂದ ಮಾತನಾಡುವುದಕ್ಕೂ ಮುನ್ನ, ನೂರು ಬಾರಿ ಯೋಚಿಸಬೇಕು. ನಿಮ್ಮ ಬಗ್ಗೆ ಯಾರಿಗೂ ಗಾಸಿಪ್ ಮಾಡುವ ಧೈರ್ಯವಿರಬಾರದು. ಅಷ್ಟು ಸ್ಟ್ರಿಕ್ಟ್ ಆಗಿರಬೇಕು. ಅಂದ್ರೆ ನೀವು ಯಾರಿಗಾದರೂ ಹೊಡೆದು ಬಡೆದೋ, ಅಥವಾ ರೌಡಿಸಂ ಮಾಡಿಯೋ, ಅವರನ್ನು ಹೆದರಿಸಬೇಕು ಅಂತಲ್ಲ. ಬದಲಾಗಿ ನೀವು ನಿಮ್ಮ ಉತ್ತಮ ಕೆಲಸದ ಮೂಲಕವೂ ಈ ರೀತಿ ಗೌರವ ಗಳಿಸಬಹುದು.

ಹತ್ತನೇಯದ್ದು, ಯಾವಾಗಲೂ ದುಃಖತಪ್ತರಾಗಿರುವ, ಅಸಮಾಧಾನಿಯಾಗೇ ಇರುವ ಜನರಿಂದ ನೀವು ದೂರವಿರಿ. ನಿಮ್ಮ ಮನೆಯಲ್ಲಿ ಯಾರಾದರೂ ಯಾವಾಗಲೂ ಅಸಮಾಧಾನದಿಂದಲೇ ಇದ್ದರೆ, ಯಾವಾಗಲೂ ಸಿಟ್ಟಿನಲ್ಲೇ, ದುಃಖದಲ್ಲೇ, ಹೊಟ್ಟೆಕಿಚ್ಚಿನಿಂದಲೇ ಇದ್ದರೆ, ನೀವು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಲೇ ಇರುತ್ತೀರಿ. ಆದ್ರೆ ಅವರು ಯಾವಾಗಲೂ ನಿಮ್ಮಿಂದ ಖುಷಿಯಾಗುವುದಿಲ್ಲ, ಇಂಪ್ರೆಸ್ ಆಗುವುದಿಲ್ಲ.

ಯಾಕಂದ್ರೆ ನೀವೇನೇ ಮಾಡಿ, ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಸಮಾಧಾನ ಅಥವಾ ಖುಷಿ ಆಗೋಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ಅವರು ಯಾವಾಗಲೂ ತಮ್ಮ ಲೈಫನ್ನ ಇತರರೊಂದಿಗೆ ಹೋಲಿಸಿಕೊಂಡು ಕೊರಗುತ್ತಲೇ ಇರುತ್ತಾರೆ. ಹಾಗಾಗಿ ಅಂಥವರಿಗೆ ಎಷ್ಟು ಮಾಡಿದ್ರೂ, ಅಷ್ಟೇ. ಹಾಗಾಗಿ ಅಂಥ ಜನರಿಂದ ಆದಷ್ಟು ದೂರವಿರಿ. ಇಲ್ಲವಾದಲ್ಲಿ ನಿಮ್ಮ ಸುಖ, ನೆಮ್ಮದಿ, ಖುಷಿಯೂ ಹೊರಟು ಹೋಗುತ್ತದೆ.

- Advertisement -

Latest Posts

Don't Miss