Tuesday, October 7, 2025

Latest Posts

ತೀರಾ ಅವಶ್ಯಕತೆ ಇದ್ದಾಗ ಮಾತ್ರ ಈ 6 ವಸ್ತುವನ್ನು ಬಳಸಿ- ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಮನುಷ್ಯ ಅವಶ್ಯಕತೆ ಇದ್ದಾಗಷ್ಟೇ ಬಳಸಬೇಕಾದ 8 ವಸ್ತುಗಳಲ್ಲಿ ನಾಲ್ಕು ವಸ್ತುಗಳ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ ನಾಲ್ಕು ವಸ್ತುಗಳು ಯಾವುದು. ಆ ವಸ್ತುವನ್ನ ಮನುಷ್ಯ ಯಾವಾಗ ಬಳಸಬೇಕು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ನಾಲ್ಕನೇಯದ್ದು ಧನ. ಇದು ತಾನು ಶ್ರೀಮಂತ ಎಂದು ಶೋಕಿ ಮಾಡುವವರಿಗೆ ಹೇಳುವ ಮಾತಿದು. ತನ್ನ ಬಳಿ ದುಡ್ಡಿದೆ ಎಂದು ತೋರಿಸಲು, ಎಲ್ಲೆಂದರಲ್ಲಿ ದುಡ್ಡನ್ನ ನೀರಿನಂತೆ ಖರ್ಚು ಮಾಡಬಾರದು. ಚಾಣಕ್ಯರ ಪ್ರಕಾರ, ಕಂಡ ಕಂಡದ್ದನ್ನ ಖರೀದಿ ಮಾಡಿ, ತನ್ನ ಶ್ರೀಮಂತಿಕೆ ತೋರಿಸಿದ್ದಲ್ಲಿ, ಮತ್ತು ವೈಭವ ಪ್ರದರ್ಶನ ಮಾಡಿದ್ದಲ್ಲಿ, ಅವನಿಗೆ ಅವಶ್ಯಕತೆ ಇದ್ದಾಗ ದುಡ್ಡಿಗೆ ಬರ ಬರುತ್ತದೆ. ಯಾಕಂದ್ರೆ ಜನರಿಗೆ ತನ್ನ ಶೋಕಿ ತೋರಿಸಲು, ಅವನು ಬೇಕಾಬಿಟ್ಟಿ ದುಡ್ಡು ಖರ್ಚು ಮಾಡಿರುತ್ತಾನೆ. ಹಾಗಾಗಿ ಕಷ್ಟ ಬಂದಾಗ, ಅವನ ಬಳಿ ಹಣವಿರುವುದಿಲ್ಲ. ಆಗ ಅವನು ಸಾಲ ಮಾಡಬೇಕಾಗುತ್ತದೆ. ಹಾಗಾಗಿ ಅವಶ್ಯಕತೆ ಇದ್ದಲ್ಲಿ ಮಾತ್ರ ನಿಮ್ಮ ಶ್ರೀಮಂತಿಕೆ ತೋರಿಸಿ ಎಂದಿದ್ದಾರೆ ಚಾಣಕ್ಯರು.

ಐದನೇಯದ್ದು ಪ್ರತಿಷ್ಠೆ. ನಿಮಗೆ ರಾಜಕೀಯ ಗಣ್ಯರ ಜೊತೆ ಉತ್ತಮ ಒಡನಾಟವಿರಬಹುದು. ನಟ ನಟಿಯರ ಜೊತೆ ಉತ್ತಮ ಗೆಳೆತನವಿರಬಹುದು. ಹೀಗೆ ಗಣ್ಯರ ಜೊತೆ ನೀವು ಒಳ್ಳೆಯ ರೀತಿಯಿಂದ ಇರಬಹುದು. ಹೀಗೆ ಇರುವಾಗ ನೀವು ಸಿಂಪಲ್ ವ್ಯಕ್ತಿಯ ಹಾಗೆ ಇರಬೇಕೇ ಹೊರತು, ನನಗೆ ಅವರು ಗೊತ್ತು, ಇವರು ಗೊತ್ತು. ನಾನು ಅವನು ಒಂದೇ ತಟ್ಟೆಯಲ್ಲಿ ಉಂಡಿದ್ದೆವು ಅಂತೆಲ್ಲ ಕೊಚ್ಚಿಕೊಳ್ಳಬೇಡಿ.

ಯಾಕಂದ್ರೆ ಅವರು ನಿಮಗೆ ಗೊತ್ತಿದ್ರೆ, ನನಗೆ ಈ ಕೆಲಸ ಮಾಡಿಕೊಡಿ ಅಂತಾ ಯಾರಾದ್ರೂ ಕೇಳ್ತಾರೆ. ಆಗ ನೀವು ಹಾ ಅದಕ್ಕೇನಂತೆ ಅಂತಾ ಅವರಿಗೆ ಮಾತು ಕೊಡ್ತೀರಾ. ಆದ್ರೆ ನಿಮಗೆ ಆ ಕೆಲಸ ಮಾಡಿ ಕೊಡಲು ಆಗುವುದಿಲ್ಲ. ಆ ವೇಳೆ ನಿಮ್ಮ ಮರ್ಯಾದೆಗೆ ಧಕ್ಕೆ ಬರುತ್ತದೆ. ಅವನೇನು ಬರೀ ಕೊಚ್ಚಿಕೊಳ್ತಾನಷ್ಟೇ. ಒಂದು ಸಣ್ಣ ಕೆಲಸ ಮಾಡಿಕೊಡಲು ಆಗಲಿಲ್ಲ ಎಂದು ಹೀಗೆಳೆಯುತ್ತಾರೆ. ಹಾಗಾಗಿ ಯಾರಿಗೂ ಮಾತು ಕೊಟ್ಟು ಪ್ರತಿಷ್ಠೆ ತೋರಿಸುವ ಕೆಲಸಕ್ಕೆ ಹೋಗಬೇಡಿ ಅಂತಾರೆ ಚಾಣಕ್ಯರು.

ಆರನೇಯದ್ದು ತಪಸ್ಸು. ನೀವು ಯಶಸ್ಸು ಕಾಣಲು ಸಿಕ್ಕಾಪಟ್ಟೆ ಕಷ್ಟ ಪಟ್ಟಿರುತ್ತೀರಿ. ಉದಾಹರಣೆಗೆ ನೀವು ಡೈರೆಕ್ಟರ್ ಆಗಬೇಕು ಅಂದುಕೊಂಡಿರುತ್ತೀರಿ. ಕಷ್ಟಪಟ್ಟು ಬೇರೆ ಬೇರೆ ಕೆಲಸ ಮಾಡಿ, ಹಣ ಹೊಂದಿಸಿ, ಡೈರೆಕ್ಟರ್ ಕೋರ್ಸ್ ಮಾಡಿ, ಹಗಲು ರಾತ್ರಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ. ಅವಮಾನಗಳನ್ನ ಅನುಭವಿಸಿ. ಊಟ ತಿಂಡಿ ಎಲ್ಲಾ ಬಿಟ್ಟು ದುಡಿದಿರುತ್ತೀರಿ.  ಹಾಗೆ ಕಷ್ಟಪಟ್ಟ ಅನುಭವದಿಂದಲೇ, ನೀವು ಎಲ್ಲರೂ ಗುರುತಿಸುವ ಮಟ್ಟಿಗೆ ಫೇಮಸ್ ಡೈರೆಕ್ಟರ್ ಆಗಿರುತ್ತೀರಿ.

ಹಾಗಂತ, ಪದೇ ಪದೇ ನೀನು ಇಷ್ಟು ಕಷ್ಟಪಟ್ಟೆ, ಅದ್ಕೆ ಹೀಗಿದ್ದೀನಿ. ನಾನು ಅಂದು ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ. ಉಪವಾಸ ಇದ್ದೆ. ಅದಕ್ಕೆ ಇಷ್ಟು ಆರಾಮಾಗಿದ್ದೀನಿ ಅಂತಾ ಎಲ್ಲರ ಮುಂದೆ ಪದೇ ಪದೇ ಹೇಳಬೇಡಿ. ಯಾಕಂದ್ರೆ ಅವರ ಮಟ್ಟಿಗೆ ನೀವು ಸಫಲ ಡೈರೆಕ್ಟರ್ ಬದಲು, ಬರೀ ನಿಮ್ಮನ್ನು ನೀವೇ ಕೊಚ್ಚಿಕೊಳ್ಳುವವರಾಗಿ ಬಿಡುತ್ತೀರಿ. ಆಗ ಅವರ ಎದುರು ನಿಮ್ಮ ಗೌರವ ಕಡಿಮೆಯಾಗುತ್ತದೆ. ಹಾಗಾಗಿ ನಿಮ್ಮ ಕಷ್ಟ, ನೀವು ಮಾಡಿದ ತಪಸ್ಸಿನ ಬಗ್ಗೆ ಅವಶ್ಯಕತೆ ಇದ್ದಾಗಷ್ಟೇ ಹೇಳಿ ಎಂದಿದ್ದಾರೆ ಚಾಣಕ್ಯರು.

- Advertisement -

Latest Posts

Don't Miss