Friday, September 20, 2024

Latest Posts

ನಪುಂಸಕತೆ, ಡಯಾಬಿಟೀಸ್, ಕೂದಲು, ಸೌಂದರ್ಯ ಸಮಸ್ಯೆ ಎಲ್ಲದಕ್ಕೂ ಈ ವಸ್ತುವನ್ನು ಬಳಸಿ.. ಭಾಗ1

- Advertisement -

ನಮ್ಮ ಪೂರ್ವಜರು ನಮಗೆ ಹೇಳಿಕೊಟ್ಟ, ಆರೋಗ್ಯಕರ ಟಿಪ್ಸ್‌ಗಳಲ್ಲಿ ಹಲವು ವಸ್ತುಗಳ ಬಳಕೆ ಬಗ್ಗೆ ಹೇಳಿದ್ದಾರೆ. ಜೇನುತುಪ್ಪ, ತುಪ್ಪ, ಎಳನೀರು, ಬೆಣ್ಣೆ, ಮೊಸರು, ಹಸುವಿನ ಹಾಲು, ದಾಸವಾಳ, ವೀಳ್ಯದೆಲೆ, ಇವೆಲ್ಲವನ್ನೂ ಬಳಸಿ, ನಾವು ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಅದೇ ರೀತಿ ಇಂದು ನಾವು ಒಂದು ವಸ್ತುವನ್ನ ಬಳಸಿ, ಹಲವು ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು. ಮತ್ತು ಆ ವಸ್ತು ಯಾವುದು ಅಂತಾ ಹೇಳಲಿದ್ದೇವೆ.

ನಾವಿಂದು ಹೇಳಲಿರುವ ವಸ್ತು ಆ್ಯಲೋವೆರಾ ಜೆಲ್. ಆ್ಯಲೋವೆರಾ ಜೆಲ್ ಬಳಸಿ, ಹೇಗೆ ನಮ್ಮ ಸೌಂದರ್ಯ ಮಮತ್ತು ಕೂದಲ ಆರೋಗ್ಯವನ್ನ ಹೇಗೆ ಕಾಪಾಡಿಕೊಳ್ಳಬೇಕು ಅಂತಾ ನಾವು ಈಗಾಗಲೇ ಹೇಳಿದ್ದೇವೆ. ಆದರೆ ಅದರೊಂದಿಗೆ ನೀವು ಡಯಾಬಿಟೀಸ್, ನಪುಂಸಕತೆಗೂ ಕೂಡ ಪರಿಹಾರ ಕಂಡುಕೊಳ್ಳಬಹುದು.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ಸ್ಪೂನ್ ಆ್ಯಲೋವೆರಾ ಜೆಲ್ ಸೇವಿಸುವುದರಿಂದ, ಶುಗರ್ ನಿಂದ ಮುಕ್ತಿ ಪಡೆಯಬಹುದು. ಆದ್ರೆ ಗರ್ಭಿಣಿಯರು ಯಾವುದೇ ಕಾರಣಕ್ಕೂ ಆ್ಯಲೋವೆರಾ ಅಥವಾ ಆ್ಯಲೋವೆರಾ ಜೆಲ್ ಸೇವನೆ ಮಾಡುವಂತಿಲ್ಲ. ಗರ್ಭಿಣಿಯನ್ನು ಬಿಟ್ಟು ಬೇರೆಯವರು ಈ ಪ್ರಯೋಗ ಮಾಡಿನೋಡಬಹುದು. ಆದ್ರೆ ನಿಮಗೆ ಇದರ ಸೇವನೆಯಿಂದ ಅಲರ್ಜಿಯುಂಟಾದಲ್ಲಿ, ನೀವು ಆ್ಯಲೋವೆರಾ ಸೇವನೆ ನಿಲ್ಲಿಸುವುದು ಸೂಕ್ತ.

ಇದೇ ರೀತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3 ಸ್ಪೂನ್‌ ಆ್ಯಲೋವೆರಾ ಜೆಲ್ ಸೇವಿಸುವುದರಿಂದ, ನಪುಂಸಕತೆ ದೂರವಾಗುತ್ತದೆ. ನಿಮ್ಮ ದೇಹದಲ್ಲಿ ಗುಳ್ಳೆಗಳಾಗುತ್ತಿದ್ದರೆ, ಮುಖದ ಮೇಲೆ ಗುಳ್ಳೆ, ಮೊಡವೆಯಾಗುತ್ತಿದ್ದರೆ, ಬಿಟ್ಟು ಪೆಟ್ಟಾದ ನೋವಿದ್ದರೆ, ಗಾಯದ ಕಲೆ ಇದ್ದರೆ, ಸುಟ್ಟ ಗಾಯಗಳಾಗಿದ್ದರೆ, ನೀವು ಪ್ರತಿದಿನ ಆ್ಯಲೋವೆರಾ ಜೆಲ್ ಹಚ್ಚಿದ್‌ರೆ, ಇವೆಲ್ಲ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.

ಇನ್ನು ತಲೆ ಬುಡಕ್ಕೆ ಆ್ಯಲೋವೆರಾ ಜೆಲ್ ಹಚ್ಚಿದ್ರೆ, ನಿಮ್ಮ ಕೂದಲ ಬುಡ ಗಟ್ಟಿಗೊಳ್ಳತ್ತೆ. ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ. ಡ್ಯಾಂಡ್ರಫ್ ಸಮಸ್ಯೆ ಕಡಿಮೆಯಾಗತ್ತೆ. ಕೂದಲು ಸಾಫ್ಟ್ ಮತ್ತು ಶೈನ್ ಆಗತ್ತೆ. ಆ್ಯಲೋವೆರಾ ಜೆಲ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

ಆಯುರ್ವೇದದ ಈ ಟಿಪ್ಸ್ ಫಾಲೋ ಮಾಡಿದ್ರೆ ದೇಹದ ಬೊಜ್ಜು ಕಡಿಮೆಯಾಗತ್ತೆ..

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು ಈ ರೆಮಿಡಿ ಫಾಲೋ ಮಾಡಿ..

- Advertisement -

Latest Posts

Don't Miss