Sunday, September 8, 2024

Latest Posts

‘ಹರಿಕೃಷ್ಣಗಿಂತ ನಾನು ದೊಡ್ಡವಳು, ಅವ್ರು 22 ವರ್ಷಕ್ಕೆ ಮದುವೆಯಾದ್ರು..’

- Advertisement -

ಗಾಯಕಿ ವಾಣಿ ಹರಿಕೃಷ್ಣ ತಮ್ಮ ಮತ್ತು ಹರಿಕೃಷ್ಣ ಅವರ ಲವ್ ಸ್ಟೋರಿ, ತಮ್ಮ ಸಂಗೀತ ಪಯಣದ ಬಗ್ಗೆ, ತಮಗಾದ ಅವಮಾನಗಳ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ವಾಣಿ ಮತ್ತು ಹರಿಕೃಷ್ಣ ಲವ್ ಸ್ಟೋರಿ ಸಖತ್‌ ಕ್ಯೂಟ್ ಆಗಿದ್ದು, ಈ ಬಗ್ಗೆ ಅವರು ಏನ್ ಹೇಳಿದ್ರು ಅಂತಾ ನೋಡೋಣ ಬನ್ನಿ…

ಆಗ ವಾಣಿ ಅವರಿಗೆ 24 ವರ್ಷ ವಯಸ್ಸಂತೆ ಮತ್ತು ಹರಿಕೃಷ್ಣಗೆ 22 ವರ್ಷ. ಇಷ್ಟೇ ವರ್ಷಕ್ಕೆ ಇಬ್ಬರೂ ಮದುವೆಯಾಗಿದ್ದರು. ಮೆಲೋಡಿ ಕ್ರಿಯೇಟರ್ಸ್ ಅನ್ನೋ ಆರ್ಕೇಸ್ಟ್ರಾದಲ್ಲಿ ವಾಣಿ ಸಿಂಗರ್ ಆಗಿದ್ರೆ, ಹರಿಕೃಷ್ಣ ಕೀಬೋರ್ಡ್ ಪ್ಲೇಯರ್ ಆಗಿದ್ದರು. ಆಗಲೇ ಹರಿಕೃಷ್ಣಗೆ ವಾಣಿ ಮೇಲೆ ಪ್ರೇಮಾಂಕುರವಾಗಿತ್ತು. ವಾಣಿ ಇನ್ನೊಂದು ಆರ್ಕೆಸ್ಟ್ರಾಗೆ ಹೋದಾಗ, ಅವರು ಬೇರೆ ಬೇರೆ ಊರಿಗೆ ಕಾರ್ಯಕ್ರಮ ನೀಡಲು ಹೋಗುತ್ತಿದ್ದರು. ಆ ಕಾರ್ಯಕ್ರಮದಲ್ಲಿ ವಾಣಿಯವರನ್ನ ಭೇಟಿ ಮಾಡುವ ನೆಪದಲ್ಲಿ, ಹರಿಕೃಷ್ಣ ಅಲ್ಲಿ ಹಾಜರಿರುತ್ತಿದ್ದರಂತೆ.

ವಾಣಿ ಬಗ್ಗೆ ಹರಿಕೃಷ್ಣ ಕೇರ್ ತೆಗೆದುಕೊಳ್ಳುತ್ತಿದ್ದರಂತೆ. ಹಾಗಾಗಿ ಅವರನ್ನ ವಾಣಿ ಫ್ರೆಂಡ್ ರೀತಿ ನೋಡುತ್ತಿದ್ದರಂತೆ. ಆದ್ರೆ ಹರಿಕೃಷ್ಣ ವಾಣಿಯವರಿಗೆ ತಿಂಡಿ ತಂದುಕೊಡುವುದು, ಡ್ರೆಸ್‌ ಗಿಫ್ಟ್ ಕೊಡುವುದು, ಕೇಕ್ ಕಟ್‌ ಮಾಡಿಸುವುದೆಲ್ಲ ಮಾಡುತ್ತಿದ್ದರು. ಆದ್ರೂ ಕೂಡ ವಾಣಿಗೆ ಹರಿ ತಮ್ಮನ್ನ ಲವ್ ಮಾಡ್ತಿದ್ದಾರೆ ಅನ್ನೋದು ಗೊತ್ತೇ ಆಗಿಲ್ಲ. ನಂತರ ಆರ್ಕೆಸ್ಟ್ರಾ ಓನರ್ ಲತಾ ಎಂಬುವವರು ಅವನು ನಿನ್ನನ್ನ ಇಷ್ಟ ಪಡ್ತಿದ್ದಾನೆ ಬೆಗೂ(ಗೂಬೆ) ಎಂದಾಗಲೇ ಹರಿ ಲವ್ ಬಗ್ಗೆ ವಾಣಿಗೆ ಗೊತ್ತಾಗಿದ್ದು.

ನಂತರ ವಾಣಿ ಡೈರೆಕ್ಟ್ ಆಗಿ ಹರಿಗೆ ಲವ್ ವಿಷಯ ಕೇಳಿದಾಗ, ಹರಿ ಎಸ್ ಎಂದರಂತೆ. ಒಂದು ದಿನ ವೀಣೆ ಕಲಿಯುವ ನೆಪದಲ್ಲಿ ವಾಣಿ ಮನೆಗೆ ಬಂದ ಹರಿ, ವಾಣಿಯವರ ತಾಯಿಯ ಬಳಿ ವೀಣೆ ಕಲಿಯುತ್ತ, ಮದುವೆ ಪ್ರಪೋಸಲ್ ಇಟ್ಟರಂತೆ. ನಾನು ನಿಮ್ಮ ಮಗಳನ್ನ ಮದುಯಾಗಬಹುದಾ ಅಂತಾ. ಆಗ ವಾಣಿ ಅಮ್ಮ, ಅವಳಿಗೆ ತುಂಬಾ ಕೋಪ ಅಂದರಂತೆ. ಅದ್ಕೆ ಹರಿ ಅದೆಲ್ಲಾ ಮಮದುವೆ ಆದ್ಮೇಲೆ ಸರಿ ಹೋಗುತ್ತೆ ಎಂದು ವಾಣಿಯ ತಂದೆ ತಾಯಿಯನ್ನ ಒಪ್ಪಿಸಿ, ಮದುವೆಯಾದರಂತೆ. ಈಗ ಹರಿಕೃಷ್ಣ ಮತ್ತು ವಾಣಿ ದಂಪತಿಗೆ 22 ವರ್ಷದ ಆದಿತ್ಯ ಎಂಬ ಮಗನಿದ್ದಾನೆ.

- Advertisement -

Latest Posts

Don't Miss