Monday, December 23, 2024

Latest Posts

ಒಂದೇ ಬಜ್ಜಿ ಹಿಟ್ಟಿನಲ್ಲಿ ಎಷ್ಟೆಲ್ಲ ವೆರೈಟಿಯ ಬಜ್ಜಿ ತಯಾರಿಸಬಹುದು ಗೊತ್ತಾ..?

- Advertisement -

ಮಳೆಗಾಲದಲ್ಲಿ ಬಜ್ಜಿ- ಬೋಂಡಾ ತಿನ್ನುವ ಮಜಾನೇ ಬೇರೆ. ಆದ್ರೆ ನೀವು ಒಂದೇ ಬಾರಿ ಒಂದೇ ಬ್ಯಾಟರ್ ಬಳಸಿ 4ರಿಂದ 5 ರಿತೀಯ ಬಜ್ಜಿಯನ್ನ ತಯಾರಿಸಬಹುದು. ಹಾಗಾದ್ರೆ ಒಂದು ಬ್ಯಾಟರ್‌ನಲ್ಲಿ ಯಾವ ಯಾವ ಬಜ್ಜಿ ತಯಾರಿಸಿ, ತಿನ್ನಬಹುದು..? ಈ ಹಿಟ್ಟು ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಈ ಹೊಸ ತಿಂಡಿಯನ್ನ ಒಮ್ಮೆ ಟ್ರೈ ಮಾಡಿದ್ರೆ, ನೀವು ಇದರ ಫ್ಯಾನ್ ಆಗ್ತೀರಾ..

ಬೇಕಾಗುವ ಸಾಮಗ್ರಿ: ಒಂದು ಕಪ್ ಜರಡಿ ಮಾಡಿ ಕ್ಲೀನ್ ಮಾಡಿದ ಕಡಲೆ ಹಿಟ್ಟು, ಅರ್ಧ ಕಪ್ ಅಕ್ಕಿ ಹಿಟ್ಟು, ಎರಡು ಸ್ಪೂನ್ ಕಾರ್ನ್ ಫ್ಲೋರ್, ಕಾಲು ಸ್ಪೂನ್ ಖಾರದ ಪುಡಿ, ಚಿಟಿಕೆ ಇಂಗು, ಕಾಲು ಸ್ಪೂನ್ ವೋಮ, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ನೀರು, ಬೇಕಾದ್ರೆ ಬೇಕಿಂಗ್ ಸೋಡಾ ಬಳಸಬಹುದು. 5 ದೊಡ್ಡ ಹಸಿಮೆಣಸಿನಕಾಯಿ, ಒಂದು ಆಲೂಗಡ್ಡೆ, ಅರ್ಧ ಕಪ್ ಗೋಬಿ, ಒಂದು ಬಾಳೆಕಾಯಿ, ಬಜ್ಜಿ ಕರಿಯಲು ಎಣ್ಣೆ.

ಮಾಡುವ ವಿಧಾನ: ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್‌, ಉಪ್ಪು, ಖಾರದ ಲಪುಡಿ, ಕೊಂಚ ಜಜ್ಜಿದ ವೋಮ, ಇಂಗು, ಮತ್ತು ನೀರು ಹಾಕಿ, ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ. 15 ನಿಮಿಷ ಪಕ್ಕಕ್ಕಿರಿಸಿ. ಇದಾದ ಬಳಿಕ ದೊಡ್ಡ ಹಸಿ ಮೆಣಸಿನಕಾಯಿಯನ್ನು ಸ್ಪ್ಲಿಟ್ ಮಾಡಿ, ಹಿಟ್ಟಿಗೆ ಅಕ್ಕಿ ಬಜ್ಜಿ ಕರಿಯಿರಿ. ಆಲೂ, ಬಾಳೆಕಾಯಿ, ಕ್ಯಾಪ್ಸಿಕಂ ಬಜ್ಜಿಯನ್ನ ಕೂಡ ಹೀಗೆ ಮಾಡಿ.

ಮಹಾರಾಷ್ಟ್ರದ ಫೇಮಸ್ ಖಾದ್ಯ ವಡಾಪಾವನ್ನ ನೀವು ಮನೆಯಲ್ಲೇ ತಯಾರಿಸಬಹುದು..

ಇನ್ನು ಗೋಬಿ ಬಜ್ಜಿ ಮಾಡೋಕ್ಕೆ, ಗೋಬಿಯನ್ನು ಮೊದಲು ಕೊಂಚ ಉಪ್ಪು ಹಾಕಿದ ಬಿಸಿ ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಎರಡೇ ಎರಡು ನಿಮಿಷ ಬೇಯಿಸಿ. ತಣ್ಣಗಾಗಲು ಬಿಡಿ. ನಂತರ ಬಜ್ಜಿ ಬ್ಯಾಟರ್‌ನಲ್ಲಿ ಅದ್ದಿ, ಪಕೋಡಾ ಮಾಡಿ. ಇದೇ ರೀತಿ ಹಿಟ್ಟು ಮಾಡಿಕೊಂಡು ನೀವು, ಸೌತೇಕಾಯಿ, ಹೀರೇಕಾಯಿ, ಪಾಲಕ್, ಪನೀರ್ ಪಕೋಡಾಗಳನ್ನ ಕೂಡ ತಯಾರಿಸಬಹುದು. ಈ ಪಕೋಡಾಗಳನ್ನ ಸಾಸ್ ಅಥವಾ ಚಟ್ನಿಯೊಂದಗೆ ಸವಿಯಬಹುದು.

- Advertisement -

Latest Posts

Don't Miss