Saturday, June 21, 2025

Latest Posts

ವೆಜ್ ಬರ್ಗರ್ ರೆಸಿಪಿ

- Advertisement -

Recipe: ವೆಜ್ ಬರ್ಗರ್ ಮಾಡಲು, ಬನ್, ಚೀಸ್, ಮೆಯೋನೀಸ್, ಕಾಲು ಕಪ್ ಅವಲಕ್ಕಿ, ಒಂದು ಕಪ್ ಆಲೂಗಡ್ಡೆ, ಹಸಿ ಬಟಾಣಿ, ಬೀನ್ಸ್, ಕ್ಯಾರೆಟ್ ಮಿಕ್ಸ್, ಸಣ್ಣಗೆ ಹೆಚ್ಚಿಕೊಂಡ ಚಿಕ್ಕ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊಂಚ ಬೆಣ್ಣೆ, ಅರಿಶಿನ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಕೊತ್ತೊಂಬರಿ ಸೊಪ್ಪು, ಮೈದಾ, ಕಾರ್ನ್‌ಫ್ಲೋರ್, ಕರಿಯಲು ಎಣ್ಣೆ, ಬ್ರೆಡ್ ಕ್ರಂಬ್ಸ್, ಲೆಟ್ಟಸ್ ಎಲೆ, ಉಪ್ಪು, ಇವಿಷ್ಟು ಬೇಕು.

ಮೊದಲು ಅವಲಕ್ಕಿಯನ್ನು ನೀರಿನಲ್ಲಿ ನೆನೆಸಿ,ತೆಗೆದು ಬದಿಗಿರಿಸಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಬೆಣ್ಣೆ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಹಸಿಮೆಣಸಿನಕಾಯಿ, ಬಟಾಣಿ, ಬೀನ್ಸ್, ಕ್ಯಾರೆಟ್ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ಉಪ್ಪು, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ ಸೇರಿಸಿ. ಬಳಿಕ ಬೇಯಿಸಿದ ಒಂದು ಬಟಾಟೆಯನ್ನು ತುರಿದು ಮಿಕ್ಸ್ ಮಾಡಿ, ಜೊತೆಗೆ ಕೊತ್ತೊಂಬರಿ ಸೊಪ್ಪು ಕೂಡ ಸೇರಿಸಿ.

ಈಗ ಈ ಮಿಶ್ರಣವನ್ನು ತಣಿಯಲು ಬಿಡಿ. ಒಂದು ಬೌಲನಲ್ಲಿ ಮೈದಾ, ಕಾರ್ನ್ ಫ್ಲೋರ್, ಕೊಂಚ ಉಪ್ಪು, ನೀರು ಹಾಕಿ ಮಿಶ್ರಣ ತಯಾರು ಮಾಡಿ. ಬಳಿಕ ಬ್ರೇಡ್ ಕ್ರಂಬ್ಸ್ ರೆಡಿ ಮಾಡಿ. ಪಲ್ಯದ ಮಿಶ್ರಣವನ್ನು ಪ್ಯಾಟ್ಟೀಸ್ ನಂತೆ ಶೇಪ್ ಕೊಟ್ಟು, ಮೈದಾ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್‌ನಲ್ಲಿ ಹಾಕಿ, ಬಳಿಕ ಎಣ್ಣೆಯಲ್ಲಿ ಕರಿಯಿರಿ.

ಈಗ ಬನ್ ಎರಡು ತುಂಡುಮಾಡಿ, ಎರಡೂ ಬರೀ ಮಿಯೋನೀಸ್ ಹಚ್ಚಿ, ಲೆಟ್ಟಸ್ ಎಲೆ ಇ್ಟಟು ಅದರ ಮೇಲೆ ಪ್ಯಾಟ್ಟೀಸ್ ಇಟ್ಟು, ಅದರ ಮೇಲೆ ಚೀಸ್ ಇರಿಸಿ, ಗ್ರಿಲ್ ಮಾಡಿದರೆ, ಬರ್ಗರ್ ರೆಡಿ..

ಬೇರುಹಲಸಿನ ಬಜ್ಜಿ(ಜೀಗುಜ್ಜೆ ಬಜ್ಜಿ) ರೆಸಿಪಿ

ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

ತೊಂಡೆಕಾಯಿ ಗ್ರೇವಿ ರೆಸಿಪಿ

- Advertisement -

Latest Posts

Don't Miss