ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟು ಉಳಿದರೆ, ಅದಕ್ಕೆ ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು ಸೇರಿಸಿ ಉತ್ತಪ್ಪ ಮಾಡಿ ತಿನ್ನುವ ಮಜವೇ ಬೇರೆ. ಆದರೆ ಇದರೊಂದಿಗೆ ಓಟ್ಸ್ ಸೇರಿಸಿದರೆ ಹೇಗಿರುತ್ತೆ..? ನಾವಿಂದು ಓಟ್ಸ್ ವೆಜ್ ಉತ್ತಪ್ಪವನ್ನು ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಹಾಗಾದರೆ ಇದನ್ನು ಮಾಡುವುದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಿ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಓಟ್ಸ್, ಒಂದು ಕಪ್ ರವಾ, ಎರಡು ಈರುಳ್ಳಿ, ಎರಡು ಟೊಮೆಟೋ, ಕೊಂಚ ಕೊತ್ತೊಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, ಒಂದು ಸ್ಪೂನ್ ತುರಿದ ಹಸಿ ಶುಂಠಿ, ಕೊಂಚ ಜೀರಿಗೆ, ಕರಿಬೇವು, ತುರಿದ ಕ್ಯಾರೆಟ್, ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು. ಅವಶ್ಯಕತೆ ಇದ್ದಷ್ಟು ಎಣ್ಣೆ.
ಮಾಡುವ ವಿಧಾನ: ರವಾ ಮತ್ತು ಓಟ್ಸನ್ನು ಗ್ರೈಂಡರ್‌ಗೆ ಹಾಕಿ, ಪೌಡರ್ ಮಾಡಿ. ಇದನ್ನ ಒಂದು ದೊಡ್ಡ ಬೌಲ್‌ಗೆ ಹಾಕಿ. ಇದಕ್ಕೆ ಉಪ್ಪು ಮತ್ತು ನೀರು ಹಾಕಿ, ಉತ್ತಪ್ಪದ ಹಿಟ್ಟು ತಯಾರಿಸಿ, 15 ನಿಮಿಷ ಪಕ್ಕಕ್ಕಿರಿಸಿ. ನಂತರ ಇದಕ್ಕೆ ಶುಂಠಿ, ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಕರಿಬೇವು, ತುರಿದ ಕ್ಯಾರೆಟ್, ಕ್ಯಾಪ್ಸಿಕಂ ಸೇರಿಸಿ, ಉತ್ತಪ್ಪ ತಯಾರಿಸಿ ತಿನ್ನಿ.
ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..
ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?