ವೆಜಿಟೇಬಲ್ ಪರೋಠಾ ರೆಸಿಪಿ..

ನೀವು ಆಲೂ ಪರೋಠಾ, ಮೇಥಿ ಪರೋಠಾ, ಪನೀರ್ ಪರೋಠಾವನ್ನ ಟೇಸ್ಟ್ ಮಾಡಿರ್ತೀರಿ. ಆದ್ರೆ ಇಂದು ನಾವು ಮನೆಯಲ್ಲೇ ವೆಜಿಟೇಬಲ್ ಪರೋಠಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಗೋಧಿ, ಅವಶ್ಯಕತೆ ಇದ್ದಷ್ಟು ಎಣ್ಣೆ ಮತ್ತು ಉಪ್ಪು. ನೀವು ಎಣ್ಣೆ ಬದಲು ತುಪ್ಪವನ್ನ ಸಹ ಬಳಸಬಹುದು. ಹೂರಣಕ್ಕೆ ಎರಡು ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಒಂದು ಸಣ್ಣಗೆ ಕೊಚ್ಚಿದ ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್ ತುರಿ, ಕ್ಯಾಬೇಜ್, ಫ್ಲವರ್‌, ಕೊಂಚ ಕೊತ್ತೊಂಬರಿ ಸೊಪ್ಪು, ಹಸಿಮೆಣಸಿನಕಾಯಿ- ಶುಂಠಿ ಪೇಸ್ಟ್, ಉಪ್ಪು, ಕೊಂಚ ಜೀರಿಗೆ, ಕೊಂಚ ಸಕ್ಕರೆ, ಗರಂ ಮಸಾಲೆ, ಅರಿಶಿನ ಪುಡಿ, ಪೆಪ್ಪರ್ ಪುಡಿ, ಬೇಕಾದ್ರೆ ಖಾರದ ಪುಡಿ.

ಮಾಡುವ ವಿಧಾನ: ಮೊದಲು ಗೋಧಿ ಹಿಟ್ಟು, ಎಣ್ಣೆ, ಉಪ್ಪು, ಮತ್ತು ಉಗುರು ಬೆಚ್ಚಗಿನ ನೀರು ಬಳಸಿ, ಚಪಾತಿ ಹಿಟ್ಟನ್ನು ಕಲಿಸಿ. ಪಕ್ಕಕ್ಕಿರಿಸಿ. ಈಗ ಹೂರಣ ರೆಡಿ ಮಾಡಿಕೊಳ್ಳಿ. ಒಂದು ಬೌಲ್‌ಗೆ ಆಲೂ, ಕ್ಯಾರೆಟ್ ತುರಿ, ಈರುಳ್ಳಿ, ಕ್ಯಾಪ್ಸಿಕಂ, ಗೋಬಿ, ಕ್ಯಾಬೇಜ್, ಕೊತ್ತೊಂಬರಿ ಸೊಪ್ಪು, ಜೀರಿಗೆ, ಚಿಲ್ಲಿ ಜಿಂಜರ್ ಪೇಸ್ಟ್, ಸಕ್ಕರೆ, ಗರಂ ಮಸಾಲೆ, ಖಾರದ ಪುಡಿ, ಪೆಪ್ಪರ್ ಪುಡಿ, ಅರಿಶಿನ, ಉಪ್ಪು ಇವೆಲ್ಲವನ್ನೂ ಮಿಕ್ಸ್ ಮಾಡಿ.

ಈಗ ಚಪಾತಿ ಹಿಟ್ಟಿಗೆ ಹೂರಣ ತುಂಬಿಸಿ, ಲಟ್ಟಿಸಿ, ತುಪ್ಪ ಸವರಿ ಕಾಯಿಸಿದ್ರೆ, ವೆಜಿಟೇಬಲ್ ಪರೋಠಾ ರೆಡಿ. ಇದಕ್ಕೆ ನೀವು ಮೊಸರು ಮತ್ತು ಖಾರದ ಪುಡಿ ಮಿಕ್ಸ್ ಮಾಡಿ, ರಾಯ್ತಾ ರೀತಿ ತಯಾರಿಸಿ ತಿನ್ನಬಹುದು.

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 2

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1

About The Author